ದೊಡ್ಡವರೆಲ್ಲಾ ಜಾಣರಲ್ಲಾ..

ದೊಡ್ಡವರೆಲ್ಲಾ ಜಾಣರಲ್ಲಾ..

ಬ್ಲಾಗಿನ ಶೀರ್ಷಿಕೆ ಓದುತ್ತಿದ್ದಂತೆ, I am sure, ನೀವು ಮನಸ್ಸಿನಲ್ಲೇ ಗುನುಗೋದಿಕ್ಕೆ ಶುರು ಹಚ್ಚಿಕೋತೀರಾ..

ದೊಡ್ಡವರೆಲ್ಲಾ ಜಾಣರಲ್ಲಾ..

ಚಿಕ್ಕವರೆಲ್ಲಾ ಕೋಣರಲ್ಲಾ..

ಅಂತ. ಹಾಗೇ ಗುರು-ಶಿಷ್ಯರು movie ನೆನಸಿಕೊಂಡು, 'ಎನ್ ಕಾಮಿಡಿ ಮೂವಿ ಪ್ಪಾ' ಅಂತ ಖುಷಿ ಪಡ್ತೀರಾ, ನನಗೆ ಗೊತ್ತು!

ಆದ್ರೆ, ನಿಜಾ ಹೇಳಿ, ಎಷ್ಟು ಜನ ಈ ಹಾಡಿನ ಸತ್ಯಾ-ಸತ್ಯತೆ ಯ ಬಗ್ಗೆ (literally) ಯೋಚನೆ ಮಾಡಿದೀರಾ?!

ನಾನೂನು ಮಾಡಿರ್ಲಿಲ್ಲ ಕಣ್ರೀ.. until it occured to me suddenly that grown ups/elders ones are not that smart.

ಯಾರೋ ಚಿಕ್ಕ ಹುಡುಗ/ಹುಡುಗಿ ಹತ್ತಿರ ಮಾತಾಡಿರ್ತೀರಾ, ಆಗ ಇದು ನಿಮಗೆ 'sudden' ಆಗಿ ಗೊತ್ತಾಗಿರುತ್ತೆ, ಈಗಿನ ಮಕ್ಕಳು ಭಾರಿ ಚೂಟಿ ಬಿಡಿ ಅಂತ ನೀವೇನಾದ್ರು

ಯೋಚನೆ ಮಾಡ್ತಾ ಇದ್ದರೆ, ಇಲ್ಲಿಲ್ಲ. ಅಲ್ವೇ ಅಲ್ಲ!! ಹಾಗೇನೂ ಇಲ್ಲ. ಇತ್ತೀಚಿಗೆ ನನಗೆ ದೊಡ್ಡವರ 'ಕೋಣತನ' ಜಾಸ್ತಿ ಜಾಸ್ತಿ ಅನುಭವ ಆಗ್ತಿರೋ ಹಾಗೆ ಇದೆ. ಚಿಕ್ಕ ಮಕ್ಕಳು

ಆರಾಮಾಗಿ ತಗೊಳೋ ಎಷ್ಟೊಂದು ವಿಷಯಗಳನ್ನ ದೊಡ್ಡವರು ಭಾರಿ complicated issue ಮಾಡ್ತಾರೆ. ಅದನ್ನೇ ತಿರುಚಿ ತಿರುಚಿ ಹಿಗ್ಗಾ ಮುಗ್ಗಾ ಎಳೆದಷ್ಟು ಅವರಿಗೆ

ಅದೇನೊ ಸಂತೋಷ/ದುಃಖ. ಅರ್ಥಾತೀತರು!! ( ಹ್ಹೆ.. ಹ್ಹೆ.. ಸಂಸ್ಕ್ರತ ಶಬ್ದವಲ್ಲ ಇದು.. ಅರ್ಥ- ಅರ್ಥವಾಗುವುದು ಎಂದರೆ ನಮ್ಮ ಕನ್ನಡದಲ್ಲಿ 'ತಿಳುವಳಿಕೆ' ಅಲ್ಲವೇ?-

ತಿಳುವಳಿಕೆಗೆ ಅತೀತರು, ಸಿಗದವರು ಎಂಬರ್ಥದಲ್ಲಿ ಓದಿಕೊಳ್ಳುವುದು ಕ್ಷೇಮ ;)) I am afraid, but elders are loosing their attitude to see

the funny side of a joke or whatever. ಹೋಗ್ಲಿ ಬಿಡಿ.. ಅವರವರ ಭಾವಕ್ಕೆ ತಕ್ಕಂತೆ! ಇದು 'sudden' ಆಗಿ realise ಆಗಿದ್ದು ಎಲ್ಲಿ ಅಂತೀರಾ?

ನಂಬಿದರೆ ನಂಬಿ, ಬಿಟ್ಟರೆ ಬಿಡಿ ಸ್ವಾಮಿ.. ಇವತ್ತು ಬೆಳಿಗ್ಗೆ toilet ಲ್ಲಿ ಕೂತಾಗ.


ಕಳೆದ 15 ದಿನಗಳಿಂದ ನಾನು ಮನೆಯಲ್ಲಿಯೇ ಇದ್ದೇನೆ. ಅಂದ್ರೆ free ಯಾಗಿ. ಯಾವುದೇ ಕೆಲಸವಿಲ್ಲದೇ ಆರಾಮವಾಗಿ. ಹಾಗಾಗಿ ನಮ್ಮ ಕನ್ನಡ chnnel ಗಳು T.V.

ಯನ್ನು ಎಷ್ಟು ಚೆನ್ನಾಗಿ ಉಪಯೋಗಿಸಿಕೊಳ್ತಿದಾರೆ ಎಂದು observe ಮಾಡಲು ನನಗೊಂದು ಸದವಕಾಶ. ಸುಮಾರಾಗಿ ಎಲ್ಲಾ channel ಗಳನ್ನು ನೋಡಿದ್ದೇನೆ, ಸ್ವಾಮಿ.

ನನಗೆ ಅನ್ನಿಸಿದ್ದು: ಎಲ್ಲಾchannel ನವರು survey ಮಾಡಿದ್ದಾರೆ. ಯಾರು ತಮ್ಮ ಧಾರವಾಹಿ ಗಳನ್ನು ನೊಡುತ್ತಾರೆ ಮತ್ತು ಅವರಿಗೆ ಎನು ಬೇಕು? ಅದಕ್ಕನುಗುಣವಾಗಿ

they will try to produce serials/ programes/ whatever. ಪರಿಣಾಮ : ಎಲ್ಲಾ ಡಬ್ಬ ಧಾರವಾಹಿಗಳು.

'ಸೀರೆ show ' ಗಳು. ನನಗೆ ಬೇಜಾರಾಗಿ ಬಿಟ್ಟಿದೆ ಸ್ವಾಮಿ. ನಿಜವಾಗ್ಲು ಉರಿದು ಹೊಗಿ ಬಿಟ್ಟಿದೆ. ನಮ್ಮ ಜನ ಉಪಚಾರಿಕವಾಗಿ ಚೆನ್ನಾಗಿರುವ ಮಾತುಗಳನ್ನು ಆಡುತ್ತರಷ್ಟೆ,

ನಿಜದಲ್ಲಿ ಅವರಾರಿಗೂ ತಮ್ಮ ಜೀವನದಲ್ಲಿ ಎನೊಂದೂ ಮಾಡುವ ಉತ್ಸಾಹವಿಲ್ಲ. ಧಾರವಾಹಿಗಳನ್ನು ನೋಡುವ ತವಕ ಒಂದನ್ನು ಬಿಟ್ಟು.

ಚಿಕ್ಕ ಮಕ್ಕಳು ನೊಡುವ 'ಸಿಲ್ಲಿ ಲಲ್ಲಿ' ( 4 ಘಂಟೆ ಶೋ ಮಾತ್ರ) ದೊಡ್ಡವರು ನೊಡುವ ಎಲ್ಲಾ programe ಗಳಿಗಿಂತ meaningful ಆಗಿದೆ.

ಜೀವನದಲ್ಲಿ ಉತ್ಸಾಹ ತುಂಬುವಂಥ ಕನ್ನಡ ಲ್ಲಿ ಬರುವ ಯಾವುದಾದರೂ ಒಂದು ಪ್ರೊಗ್ರಾಮ್ ಇದ್ದರೆ ಹೇಳಿ ಬಿಡಿ ಸ್ವಾಮಿ. ನೋಡಿ ಧನ್ಯನಾಗುತ್ತೇನೆ :(.

Rating
No votes yet

Comments