ನಕ್ಷತ್ರಗಳನ್ನು ಕೊಲ್ಲುವ ಕಬ್ಬಿಣ!
ಕಬ್ಬಿಣ ನಮ್ಮ , ಮರಗಿಡಗಳ ಜೀವನಾಧಾರವಾದ ಧಾತು ( vital element) ಎಂದು ನಮಗೆಲ್ಲ ತಿಳಿದೇ ಇದೆ. ನಮ್ಮ ರಕ್ತದಲ್ಲಿನ Hemoglobinನ ಮುಖ್ಯ ಅಂಶ ಇದು. ಆಮ್ಲಜನಕ-ವಾಹಕ ವಾಗಿ ಕೆಲಸ ಮಾಡುತ್ತೆ. ನಾವು ಬಳಸುವ ಬಹುಪಾಲು ಸಲಕರಣೆಗಳಲ್ಲಿ ಕಬ್ಬಿಣ ಇದೆ. ಆದಿಮಾನವ ಕಾಲದಿಂದಲೂ ಕಬ್ಬಿಣ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ.
ಇಂತಹ ಕಬ್ಬಿಣ ನಕ್ಶತ್ರಗಳನ್ನ ಕೊಲ್ಲುತ್ತೆ ಅಂದ್ರೆ ನಂಬ್ತೀರಾ ......ಆದರೆ .........ಇದು ನಿಜ.
ಕಬ್ಬಿಣ "periodic table" ನ ಅತಿ ಮುಖ್ಯ ಧಾತು.
Atomic Number: 26
Symbol: Fe
Atomic Weight: 55.847
ಇದು neclear fusion ದೃಷ್ಟಿ ಇಂದ ಅತ್ಯಂತ ಸ್ಥಿರವಾದ ( stable element) ಧಾತು.
ಈಗ ಸ್ವಲ್ಪ ವಿವರವಾಗಿ ನೋಡೋಣ .
ಈಗ ಎರಡು ಪ್ರೊಟಾನ್ ಗಳನ್ನ ತಗೊನ್ಡು ಒಂದಕ್ಕೊಂದು ಡಿಕ್ಕಿ ಹೊಡಿಸಿದರೆ , ನಾನು dutorium (2 H ಒಂದು ಅನಿಲ) ಪಡೆಯಬಹುದು. (ಸೂರ್ಯನ ಓಡಲಾಳದಲ್ಲೂ (core) ಹೆಚ್ಚಿನ ಭಾಗ ಇದೆ ನಡೆಯುವುದು). ಮತ್ತೆ ನಾನು ಈ ಡ್ಯುಟೊರಿಯಮ್ ಅನ್ನು ಹೆಚ್ಚು ಪ್ರೊಟಾನ್ ಗಳೊನ್ದಿಗೆ ಒಂದಕ್ಕೊಂದು ಡಿಕ್ಕಿ ಹೊಡಿಸಿದರೆ helium ( He) ಪಡೆಯಬಹುದು. ಹೀಗೇನೆ ಮಾಡ್ತಾ ಮುಂದುವರೆದರೆ..ಇಂಗಾಲ (corbon) , Megnesium, ಆಮ್ಲಜನಕ ( Oxygen) ... ಹೀಗೆ ಪೀರಿಯಾಡಿಕ್ ಟೇಬಲ್ ನ ಕಬ್ಬಿಣದವರೆಗೆ Atomic Weight ಇರುವ ಎಲ್ಲ ಧಾತುಗಳನ್ನ ಪಡೆಯುತ್ತಾ ಬರಬಹುದು. ಆದರೆ ನಾವು ಇಲ್ಲಿ ಇಂದು ಸನ್ಗತಿಯನ್ನ ನೆನಪಿನಲ್ಲಿ ಇಟ್ಟುಕೊಳ್ಳಬೇಕು ಅದೇನೆಂದರೇ ನಾವು ಪಡೆಯಬಹುದಾದ ಧಾತುಗಳು ಕಬ್ಬಿಣದ ( ಒಮ್ಮೆ ಪೀರಿಯಾಡಿಕ್ ಟೇಬಲ್ ನಲ್ಲಿರುವ ಧಾತುಗಳನ್ನ ನನಪಿಸಿಕೊಳ್ಳೀ) ವರೆಗೆ ಮಾತ್ರ!.
ಪ್ರತಿ ಸರಿನೂ ನಾನು ಮೇಲಿನ ಧಾತುಗಳನ್ನ ಮತ್ತೆ ಪ್ರೋಟಾನ್ ಗಳನ್ನ ಡಿಕ್ಕಿ ಹೊಡೆಸಿದಾಗ ನನಗೆ ಅದು ಶಕ್ತಿ ( Energy) ಯನ್ನ ಬಿಡುಗಡೆ ಮಾಡುತ್ತೆ . ಈ reactions ಗಳು exo-thermic ( In thermodynamics, the word exothermic describes a process or reaction that releases energy in the form of heat ) . ಅಂದ್ರೆ ಹೆಚ್ಚೆಚ್ಚು ರಿಯಾಕ್ಷನ್ ಗಳು ನಡದಷ್ಟೂ ಹೆಚ್ಚು ಶಕ್ತಿ ಹೊರಬರುತ್ತೆ. ಸೂರ್ಯ ತನ್ನಲ್ಲಿನ ಶಕ್ತಿಯನ್ನ ಪಡೆಯುವುದು ಈ ಮಾರ್ಗವಾಗಿಯೇ!.
ಆದ್ರೆ ಕಬ್ಬಿಣ ಇಲ್ಲಿ ಒಂದು ದೊಡ್ಡ ಪ್ರಾಬ್ಲಮ್!.
ಉದಾಹರಣೆಗೆ ಮೇಲೆ ಹೇಳಿದನ್ತ ರಿಯಾಕ್ಷನ್ನು ಗಳಿಂದ ಕಬ್ಬಿಯ ಬಂದಿದೆ ಎಂದುಕೊಳ್ಳಿ. ನಕ್ಷತ್ರ ಈ ಕಬ್ಬಿಣ ವನ್ನೂ fusion ಪ್ರಕ್ರಿಯೆಗೆ ಒಳಪಡಿಸುತ್ತೆ. ಯಾವಾಗ ಕಬ್ಬಿಣದ fusion ಶುರುವಾಯ್ತೋ ಆಗ ಶುರುವಾಗುತ್ತೆ ನೋಡಿ ನಕ್ಷತ್ರ ದ ಸಂಕಟ!. ಈ ಕಬ್ಬಿಣ ಫ್ಯೂಷನ್ ಸಮಯದಲ್ಲಿ ಶಕ್ತಿಯನ್ನು ಒಳಗೆ ತೆಗೆದು ಕೊಳ್ಳುತ್ತೆ. ಅಂದ್ರೆ ನೀವು ಕಬ್ಬಿಣ ವನ್ನು ಫ್ಯೂಷನ್ ಪ್ರಕ್ರಿಯೆಗೆ ಒಳಪಡಿಸಿದರೆ ನೀವು ಶಕ್ತಿಯನ್ನ ಹೊರಗೆಡವುದರ ಬದಲು ಹೊರಗಿನ ಎನರ್ಜೀ ಯನ್ನ ಸೆಳೆದುಕೊಳ್ಳುತ್ತೀದೇರೆಂದೇ ಅರ್ಥ!. ಇದು ನಕ್ಷತ್ರ ಡ ಆರೊಗ್ಯಕ್ಕೇ ಹಾನಿಕರ... ಕಬ್ಬಿಣ ತಯಾರು ಮಾಡಲು ಶುರು ಮಾಡಿದ ಕೆಲವೇ ಕೆಲವು ಕ್ಷಣಗಳಲ್ಲಿ ಆ ನಕ್ಷತ್ರ ಸಾಯುತ್ತೆ! ...ಏಕೆಂದರೆ ಮುಂಚೆ ಹೊರಬರುತ್ತಿದ್ದ ಶಕ್ತಿ ಆ ನಕ್ಷತ್ರ , ಅದರ ಗ್ರಾವಿಟಿ ಗೆ ಆಧಾರವಾಗಿತ್ತು. ಈ ಕಬ್ಬಿಣ ಅಂತ ನಕ್ಷತ್ರದ ಶಕ್ತಿಯೆನ್ನಲ್ಲಾ ಒಳಗೆಳುದುಕೊಳ್ಳಿತ್ತಿದೆ!, ಅಂದ್ರೆ ಜೀವಾಧಾರವಾದ ಗ್ರಾವಿಟಿಯನ್ನೆ ತಿಂದು ನೀರು ಕುಡಿತಾ ಇದೆ!!. .. ಹೀಗಾಗಿ ನಕ್ಷತ್ರ ಪತನ ಗೊಳ್ಳುತ್ತದೆ.
ಈ ಪತನ "super nova explosion" ಗೆ ಪೂರ್ವ ಭಾವಿ ಸಿದ್ದತೆ!
ಈ ಪತನ ಎಷ್ಟು ರಭಸವಾಗಿ/ ಭಯಾನಕವಾಗಿ ಇರುತ್ತೆ ಅಂದ್ರೆ ನಕ್ಷತ್ರ ದ core ( ಇಲ್ಲೇನೆ ಎಲ್ಲ ಫ್ಯೂಸನ್ಸ್ , ರಿಯಾಕ್ಷನ್ಸ್ ನಡೆಯೋದು) ( ಓಟೆ ಅಂತ ಕರೀಬಹುದಾ?!) ಕೂಡ ಪತನವಾಗುತ್ತೆ. ಅದರ ಸುತ್ತ ಮುತ್ತಲಿನ ಎಲ್ಲ ಅಂಗ ವಸ್ತುಗಳೂ ಆ ಕೋರ್ ನ ಸುತ್ತಮುತ್ತಲೇ ಪತನ ಗೊಳ್ಲುತ್ತವೆ. ಈಗ ಈ ಓಟೆ ಯ ತಾಪ ಅದೆಷ್ಟು ಹೆಚ್ಚಾಗುತ್ತಪ್ಪ ಅಂದ್ರೆ .. ಆ ನಕ್ಷತ್ರ ಈ ಜಗತ್ತಿನ / ನಮಗೆ ಗೊತ್ತಿರುವ/ಗೊತ್ತಿಲ್ಲದದಿರುವ ಪ್ರತಿಯೊಂದು ಧಾತುಗಳನ್ನ, ರಾಸಾಯನಿಕಗಳನ್ನ, ವಸ್ತುಗಳನ್ನ ಫ್ಯೂಸ್ ಮಾಡುತ್ತೆ ( ಉತ್ಪತ್ತಿ ಮಾಡುತ್ತೆ). ಅದೂ ಕೆಲವೇ ಕ್ಷಣಗಳಲ್ಲಿ.. in no seconds ಅಂತಾ ಹೇಳ್ಬಹುದು!.
ಮುಂದುವರೆಯುತ್ತೆ...
Comments
ಉ: ನಕ್ಷತ್ರಗಳನ್ನು ಕೊಲ್ಲುವ ಕಬ್ಬಿಣ!
In reply to ಉ: ನಕ್ಷತ್ರಗಳನ್ನು ಕೊಲ್ಲುವ ಕಬ್ಬಿಣ! by savithru
ಉ: ನಕ್ಷತ್ರಗಳನ್ನು ಕೊಲ್ಲುವ ಕಬ್ಬಿಣ!
In reply to ಉ: ನಕ್ಷತ್ರಗಳನ್ನು ಕೊಲ್ಲುವ ಕಬ್ಬಿಣ! by gc
ಉ: ನಕ್ಷತ್ರಗಳನ್ನು ಕೊಲ್ಲುವ ಕಬ್ಬಿಣ!
In reply to ಉ: ನಕ್ಷತ್ರಗಳನ್ನು ಕೊಲ್ಲುವ ಕಬ್ಬಿಣ! by savithru
ಉ: ನಕ್ಷತ್ರಗಳನ್ನು ಕೊಲ್ಲುವ ಕಬ್ಬಿಣ!
In reply to ಉ: ನಕ್ಷತ್ರಗಳನ್ನು ಕೊಲ್ಲುವ ಕಬ್ಬಿಣ! by savithru
ಉ: ನಕ್ಷತ್ರಗಳನ್ನು ಕೊಲ್ಲುವ ಕಬ್ಬಿಣ!
In reply to ಉ: ನಕ್ಷತ್ರಗಳನ್ನು ಕೊಲ್ಲುವ ಕಬ್ಬಿಣ! by gc
ಉ: ನಕ್ಷತ್ರಗಳನ್ನು ಕೊಲ್ಲುವ ಕಬ್ಬಿಣ!
ಉ: ನಕ್ಷತ್ರಗಳನ್ನು ಕೊಲ್ಲುವ ಕಬ್ಬಿಣ!
In reply to ಉ: ನಕ್ಷತ್ರಗಳನ್ನು ಕೊಲ್ಲುವ ಕಬ್ಬಿಣ! by anivaasi
ಉ: ನಕ್ಷತ್ರಗಳನ್ನು ಕೊಲ್ಲುವ ಕಬ್ಬಿಣ!
In reply to ಉ: ನಕ್ಷತ್ರಗಳನ್ನು ಕೊಲ್ಲುವ ಕಬ್ಬಿಣ! by savithru
ಉ: ನಕ್ಷತ್ರಗಳನ್ನು ಕೊಲ್ಲುವ ಕಬ್ಬಿಣ!
ಉ: ನಕ್ಷತ್ರಗಳನ್ನು ಕೊಲ್ಲುವ ಕಬ್ಬಿಣ!