ನನಗೊಂದು ಖೋ ಕೊಡಿ..

ನನಗೊಂದು ಖೋ ಕೊಡಿ..

ಕನ್ನಡದ ಮಾಸಿಕ 'ಮಯೂರ'ದಲ್ಲಿ ಹೊಸ ರೀತಿಯ ಕಥಾ ಮಾಲಿಕೆಯೊಂದು ಪ್ರಾರಂಭವಾಗಿದೆ.. 'ಜೂಟಾಟ'.. ಬೇರೆ ಬೇರೆ ಲೇಖಕರು ತಮ್ಮ ಭಾಗದ ಕಥೆ ಬರೆದು ಇನ್ನೊಂದು ಲೆಖಕರಿಗೆ ಖೋ ಕೊಡುತ್ತಾರೆ.. ಕಥೆಯ ವಿಸ್ತರಣೆ, ನಿರೂಪಣೆ, ಪಾತ್ರ ಸೃಷ್ಠಿ, ತಿರುವುಗಳು, ಮುರುವುಗಳು ಆಯಾ ಲೇಖಕರಿಗೆ ಬಿಟ್ಟಿದ್ದು.. ಅದೇ ತರಹದ ಕಥಾವಿಸ್ತರಣೆಯ ಖೋ ಖೋ ಆಟವನ್ನು ನಾವೂ ಆಡೋಣವೇ?

ಪ್ರತಿಯೊಬ್ಬರೂ ಕೇವಲ ಒಂದು ವಾಕ್ಯವನ್ನು ಮಾತ್ರ ಬರೆಯಿರಿ.. ಇನ್ನೊಬ್ಬರು ಅದನ್ನು ಮುಂದುವರೆಸಿಕೊಂಡು ಹೋಗ್ತಾರೆ...

ನಾನೇ ಶುರು ಮಾಡುತ್ತೇನೆ..

ಬೆಳಗಿನ ಬೆಳ್ಳಿ ಕಿರಣಗಳು ಜೀವನದಲ್ಲಿ ಬೇಸರ ಬಂದಂತೆ ನಿಧಾನವಾಗಿ ಮೇಲೇರುತ್ತಿರುವಾಗ ಎದ್ದ ಸುಧಾಕರನಿಗೆ ಬಚ್ಚಲ ಮನೆಯಲ್ಲಿ ನೀರೇ ಇಲ್ಲದಿರುವುದು ಗಮನಕ್ಕೆ ಬಂತು...

Rating
No votes yet

Comments