ನನ್ನಮ್ಮ

ನನ್ನಮ್ಮ

ನಿನ್ನೆ ನನ್ನಣ್ಣನ ಗೂಗಲ್ ಸ್ಟೇಟಸ್ ನಲ್ಲಿ shootout at lokhandwala ಎಂದು ಬರೆದಿತ್ತು; ಅಂದರೆ ಅವನು ಆ ಚಿತ್ರವನ್ನು ನೋಡುತ್ತಿದ್ದಾನೆ ಎಂದರ್ಥ. ೨-೩ ಶಬ್ದಗಳಲ್ಲಿ, ಒಂದು ಗೂಗಲ್ ಐಕಾನ್ ನಲ್ಲಿ ಎಷ್ಟೆಲ್ಲ ವಿಷಯಗಳನ್ನು ಕನ್ವೇ ಮಾಡಬಹುದಲ್ಲ ಎಂದು ನನಗೆ ಆಶ್ಚರ್ಯವಾಯಿತು. ನಾನೂ ಒಳ್ಳೊಳ್ಳೆ ಐಕಾನ್ ಗಳನ್ನು ಮಾಡಿ ಗೂಗಲ್ ನಲ್ಲಿ (ನನ್ನ ಫೊಟೊದ ಬದಲಿಗೆ) ಹಾಕಿದರೆ ಹೇಗೆ ಎಂದುಕೊಂಡೆ.
ಕಾರಿನ ಚಿತ್ರ ಬರೆಯಬೇಕೆಂದರೆ ಮಕ್ಕಳೆಲ್ಲ ಮುಂದೆ ಒಂದು, ಹಿಂದೆ ಒಂದು ಮೂತಿಯಿರುವ ಬಾಕ್ಸ್ ಮಾಡಿದಂತೆ (representational diagram), ನಾನು ಮೊದಲಿನಿಂದ ಅಮ್ಮನನ್ನು represent ಮಾಡಲು ಒಂದು ಒಂದು ವಕ್ರ ರೇಖೆ (ತುರುಬು ಕಟ್ಟಿದ ತಲೆಯನ್ನು ಹಿಂದಿನಿಂದ ನೋಡಿದಂತೆ), ಅದರ ಮೇಲೆ ಹೂ ಮುಡಿದಂತೆ ಒಂದು ರಚನೆ ಮಾಡುತ್ತಿದ್ದೆ.
ಅದನ್ನೇ microsoft paint ನಲ್ಲಿ ಸ್ವಲ್ಪ ಇಂಪ್ರೂವ್ ಮಾಡಿ ಈ ಚಿತ್ರವನ್ನು ಮಾಡಿದೆ. ಅದರ ಮೇಲೆ ಏನು ಬರೆಯಲೆಂದು ಯೋಚಿಸಿ, ಎನ್ನಬ್ಬೆ/ನನ್ನ ಹಡೆದವ್ವ/ನನ್ನ ಹಡೆದು ಪೊರೆದವ್ವ/ ಎಂದೆಲ್ಲ ಹಲವು ವಿಕಲ್ಪಗಳನ್ನು ಬಿಟ್ಟು, ಸಿಂಪಲ್ ಆಗಿ ’ನನ್ನಮ್ಮ’ ಎಂದು ಬರೆದೆ. ನನಗೆ ಯಾಕೋ ಇದು ತುಂಬಾ ಸಂತೋಷ ಕೊಟ್ಟಿತು. ಆಫಿಸ್ ನಲ್ಲಿ ಒಂದು ಪ್ರಿಂಟ್ ಹೊಡೆದು partition ಗೆ ಹಚ್ಚಿಕೊಂಡೆ.
ನನ್ನಮ್ಮ (ಮತ್ತು ನಿಮ್ಮ ಅಮ್ಮಂದಿರು) ಮುಡಿದ ಹೂವು ಬಾಡದಿರಲಿ, ಅವರ ಚಿತ್ರ ಮಸುಕಾಗದಿರಲಿ..
ವಸಂತ್ ಕಜೆ.
Rating
No votes yet

Comments