ನನ್ನವಲ್ಲೊಡನೆ ಕೊನೆಯ ರಾತ್ರಿ

ನನ್ನವಲ್ಲೊಡನೆ ಕೊನೆಯ ರಾತ್ರಿ

ಹ್ಞೂ ... ತಲೆಬರಹದಲ್ಲಿ ತಪ್ಪಿದೆ. 'ನನ್ನವಳೊಡನೆ ...' ಎಂದು ನೀವು ಓದಲಿ ಮತ್ತು ಇದೇನಿರಬಹುದೆಂಬ ಕುತೂಹಲದಿಂದ ಇಲ್ಲಿಯವರೆಗೂ ಬರಲಿ ಎಂಬುದು ನನ್ನ ಉದ್ದೇಶವಾಗಿತ್ತು. :-)

ಅಸಲಿಗೆ ವಿಷಯವೇನೆಂದರೆ ಇದು, 'ನನ್ನ ಹಲ್ಲೊಡನೆ ಕೊನೆಯ ರಾತ್ರಿ'.

ಸುಮಾರು  ಹದಿನೈದು ವರ್ಷಗಳ ಹಿಂದೆ ನನ್ನ ಮೇಲ್ದವಡೆಯ ಮಧ್ಯದ ಹಲ್ಲುಗಳಲ್ಲಿ ಒಂದು ನನ್ನಿಂದ ದೂರಾಗಿತ್ತು. ಈಗ ಮೇಲ್ದವಡೆಯ ಇನ್ನೊಂದು ಮಧ್ಯದ ಹಲ್ಲೂ ಅಲುಗಾಡತೊಡಗಿದೆ. ನಾಳೆ ಬೆಳಿಗ್ಗೆ ಅದನ್ನು ಕೀಳಿಸುವವನಿದ್ದೇನೆ. ಹಾಗಾಗಿ ಸುಮಾರು ಮೂರು ದಶಕಗಳಿಂದ ನನ್ನ ಸಂಗಾತಿಯಾಗಿದ್ದ (ಈ) ಹಲ್ಲೊಡನೆ ಇವತ್ತಿನದೇ ಕೊನೆಯ ರಾತ್ರಿ.

ಸರಿ, ಹೇಗೂ ಬಂದಿದ್ದೀರಲ್ಲ; ನನ್ನ ಹಲ್ಲಿಗೆ ವಿದಾಯ ಹರಸಿಯೇ ಹೋಗಿ. :-)  

Rating
No votes yet

Comments