ನನ್ನ ಉಭಯ ಸಂಕಟ !!!

ನನ್ನ ಉಭಯ ಸಂಕಟ !!!

ಗೆಳೆಯರೇ,
ಏಕೋ ಏನೋ ಇತ್ತೀಚಿಗೆ ನನ್ನಲ್ಲಿ ಕನ್ನಡದ ಅಭಿಮಾನ ಜಾಸ್ತಿ ಆದಂತಿದೆ ಯಾಕಂದ್ರೆ ನಾನು ಕೆಲಸ ಮಾಡೋ ಪರಿಸರದ ಪ್ರಭಾವವೇನೋ ಇರಬೇಕು ಅಂತ ಅನಿಸ್ತಾ ಇದೆ ..ಯಾಕಂದ್ರೆ ಸದ್ಯದ ಪರಿಸ್ಥಿತಿಯಲ್ಲಿ ಬೆಂಗಳೂರಿನಲ್ಲೇ ಕನ್ನಡ ಭಾಷೆಯ ಮೇಲಾಗ್ತಿರೊ ದೌರ್ಜನ್ಯಕ್ಕೆ ನಾನು ಅಸಹಾಯಕನಗಿದಿನೇನೋ ಅಂತ ಅನಿಸ್ತಾ ಇದೆ .. ಸ್ನೇಹಿತರೆ ನಿಮಗೆ ಒಂದು ಪ್ರಸಂಗ ಹೇಳ ಬಯಸ್ತೀನಿ. ನಾನು ನನ್ನ ಸದ್ಯದ ಕಂಪನಿಗೆ ಸೇರಿದ ಹೊಸತರಲ್ಲಿ, ಒಂದು ದಿನ ನಮ್ಮ ಕ್ಯಾಬ್ನಲ್ಲಿ ( ಎಲೆಕ್ಟ್ರಾನಿಕ್ಸ್ ಸಿಟಿ ರೂಟ್ ) ಎಫ. ಎಮಂ ರೇಡಿಯೋ ಕೇಳಲು ಅಲ್ಲೇ ಇಧ್ಹ ಕನ್ನಡ ಹುಡುಗಿಯ ನಡುವೆ ಮತ್ತು ತಮಿಳು ಹುಡುಗರ ನಡುವೆ ಚರ್ಚೆ ಶುರುವಾಯಿತು,, ಚರ್ಚೆ ಎಷ್ಟು ಗಂಭೀರವಾಯಿತೆಂದರೆ ಕೊನೆಗೆ ಆ ಹುಡುಗಿ ಅತ್ತು ಸುಮ್ಮನಾದಳು . ಕಾರಣ ಇಷ್ಟೇ, ಅವಳಿಗೆ ಕನ್ನಡ ಗೀತೆ ಕೇಳೋ ಹಂಬಲ ಮತ್ತು ಆ ಹುಡುಗರಿಗೆ ತಮಗೆ ನಿಧ್ಹೆ ಕೆಟ್ಟು ಹೋಗುತ್ತದೆ ಮತ್ತು ತಮಗೆ ಡಿಸ್ಟರ್ಬ್ ಆಗಬಾರ್ದು ಎಂದು ಡ್ರೈವರ್ ಗೆ ತಾಕೀತು ಮಾಡಿದರು.. ಅನ್ನ್ಯ ಭಾಷಿಕರೇ ಹೆಚ್ಚಾಗಿರುವ ಕಾರಣ ಮತ್ತು ನಾನು ಹೊಸಬನಾದ ಕಾರಣ ನಾನೇನು ಮಾಡಲಾಗದ ಪರಿಸ್ಥಿತಿಯಲ್ಲಿ ಆ ದಿನ ತುಂಬಾ ನೊಂದುಕೊಂಡೆ ಮತ್ತೆ ಮಾರನೆಯ ದಿನ ಡ್ರೈವರ್ ಗೆ ಏನೋ ಹೇಳಿ ಹಿಂದಿ ಎಫ .ಎಮಂ ರೇಡಿಯೋ ಹಾಕಲು ಹೇಳಲಾಯಿತು ... ಇದು ಒಂದು ಪ್ರಸಂಗ ಅಷ್ಟೆ .
ಇನ್ನೊಂದು ಗಮನಿಸಬೇಕಾದ ಅಂಶ ಏನೆಂದರೆ ನಾನು ಕನ್ನಡಿಗರು ಬೆರೆತಷ್ಟು ಸರಳವಾಗಿ ತಮಿಳರು ಬೆರೆಯಲಾರರು .. ಅವರಿಗೆ ಅವರದೇ ಸಂಘಗಳಿರುತ್ತದೆ ..
ನನ್ನ ಆಲೋಚನೆ ಇಷ್ಟೇ ಕನ್ನಡಿಗರಾದ ನಮಗೆ, ಪರಿಭಾಷಿಕರಿಗೆ ಅವರ ತಾಯ್ನುಡಿಯ ಮೇಲಿರುವಷ್ಟು ಅಭಿಮಾನ ಹೆಚ್ಚಿನ ಕನ್ನಡಿಗರಿಗೆ ತಮ್ಮ ತಾಯ್ನುಡಿಯ ಬಗ್ಗೆ ಅಭಿಮಾನವಿರೋಲ್ಲ? ಅಥವಾ ಸ್ತುಪ್ತವಾಗಿರುವ ಆ ಭಾವನೆ ಬೆಳಕು ಕಾಣೊದಿಲ್ವೆ?
ನಿಮ್ಮ ಅನಿಸಿಕೆ ಅಭಿಪ್ರಾಯ ದಯವಿಟ್ಟು ತಿಳಿಸಿ.....

ಇಂತೀ
ಚೈತನ್ಯ

Rating
No votes yet

Comments