ನನ್ನ ಉಸಿರು -ಶ್ರೀ ಗುರು

ನನ್ನ ಉಸಿರು -ಶ್ರೀ ಗುರು

ನನ್ನ ಉಸಿರಾಗಿ

ನನ್ನ ಜೀವನಾಡಿಯಾಗಿ

ಸಲುಹಿರುವೆ ತನಕ

ಗುರು ರಾಘವೇಂದ್ರ

ಮುಂದೆಯೂ ಸಲಹು ಶ್ರೀ ಗುರುವೇ

 

ಬಂದಿರುವೆ ಹೇಗೋ ಲೋಕದಿ

ಕರ್ಮಫಲ ಬಂಧಿಯಾಗಿ

ಸಂಯೋಗ ವಿಯೋಗ ಚಕ್ರವ್ಯೂಹದಲಿ

ಸಿಲುಕಿರುವ  ಎನಗೆ

ಕರುಣಿಸು ನಿನ್ನ ಚರಣದಾಸಯೋಗ

 

ನೀನೇ ಸರ್ವಲೋಕ ಹಿತೈಷಿ

ಭವರೋಗ ಹರಣ  ವೈದ್ಯನು

ಪರಿಹರಿಸು ಮಾಯಾ ವಾಸನಾ

ಸಂಸಾರಚಕ್ರದಿ ಮುಕ್ತಗೊಳಿಸು

ಸರ್ವಶಕ್ತ ಶ್ರೀ  ಗುರುವೇ ಗುರುವೇ

 

ಶ್ರೀ ನಾಗರಾಜ್    

Rating
Average: 4 (2 votes)