ನನ್ನ ಚಿತ್ರ.. ನಿಮ್ಮ ಕಲ್ಪನೆ.. !!! 2

ನನ್ನ ಚಿತ್ರ.. ನಿಮ್ಮ ಕಲ್ಪನೆ.. !!! 2

 

 

ಸ್ನೇಹಿತರೆ..

ನನಗೂ ಈ ಫೋಟೋ ತೆಗೆಯೋ ಹುಚ್ಚಿದೆ.. ಆದರೆ.. ಸಂಪದಿಗರಲ್ಲೇ ಹಲವು Professional Photographers ಇದ್ದಾರೆ.. ಅವರ ಮಟ್ಟಿಗೆ ತಲುಪಲು ಸದ್ಯ ಯೋಚಿಸಲೂ ಸಮಯವಿಲ್ಲದಾಗಿದೆ. ಸಾಧ್ಯವೋ ಇಲ್ಲವೋ ಯೋಚಿಸುವ ಸಮಯ, ವ್ವವಧಾನ ಇಲ್ಲವಾಗಿದೆ.. ಆದರೆ, ಈ ಹುಚ್ಚು ಹಾಗಂತ ಬಿಡೋದು ಸಾಧ್ಯವಿಲ್ಲ ಅಲ್ಲವೇ.. ಹಾಗಾಗಿ ನಮ್ಮ ಇದರೆಡೆಗಿನ ಪ್ರಯತ್ನ ಸದಾಕಾಲ ಸಾಗಿರುತ್ತೆ..

 

ಹಾಗಾದರೆ, ನಮ್ಮ ಈ ಪ್ರಯತ್ನ ನಾವು ಮುಂದುವರೆಸಿರೋದು, ನಮ್ಮ ಇದ್ದದರಲ್ಲೇ ಉತ್ತಮ ಇರೋ ಮೊಬೈಲ್‌ಗಳಲ್ಲಿ, ಅನ್ನೋದನ್ನ ಈ ಮೂಲಕ ತಿಳಿಸಬಯಸುತ್ತೇನೆ. ಹಾಗೇ, ಸಂಪದಿಗರನೇಕರಿಗೆ ನೆನಪಿರಬಹುದು.. ಹಿಂದೊಮ್ಮೆ ಕೂಡ ನಾನು ಪ್ರಕಟಿಸಿದ ಚಿತ್ರಕ್ಕೆ ಸಂಪದಿಗರಿಂದ ಅತಿ ಉತ್ತಮ ಪ್ರತಿಕ್ರಿಯೆ ದೊರೆತಿತ್ತು.. ಅದು ಮನಸ್ಸಿಗೆ ಅತೀವ ಸಂತೋಷ ತಂದುಕೊಟ್ಟಿತ್ತು.

 

ಮತ್ತೆ ನಿಮ್ಮ ಮುಂದೆ ನನ್ನ ಇನ್ನೊಂದು ಪ್ರಯತ್ನವಿಡುತ್ತಿದ್ದೇನೆ. ನಿಮ್ಮ ಅನಿಸಿಕೆಗಳನ್ನ ದಯಮಾಡಿ ಅಕ್ಷರಗಳ ರೂಪದಲ್ಲಿ ಇಲ್ಲಿ ಹರಿಯಬಿಡಿ..

 

ಅನಿಸಿಕೆಗಳು, ಗದ್ಯರೂಪದಲ್ಲಿ, ಪದ್ಯರೂಪದಲ್ಲಿ, ನುಡಿಗಟ್ಟಿನಂತೆ, ಇತರೆ ಯಾವುದೇ ರೂಪದಲ್ಲಿದ್ದರೂ ಅವಕ್ಕೆ ಸ್ವಾಗತ..

ನಿಮಗೆ ಈ ಚಿತ್ರವನ್ನ ನೋಡಿದಾಗ ಉಂಟಾದ ಭಾವನೆ, ಬಂದ ಯೋಚನೆ, ಮರುಕಳಿಸಿದ ನೆನಪು, ಯಾವುದಕ್ಕೂ ಇಲ್ಲಿ ಭರಪೂರ ಸುಸ್ವಾಗತ.. :)

ಅಂದರೆ, ನಿಮ್ಮ ಅನಿಸಿಕೆಗಾಗಿ ಕಾತರದಿಂದ ಕಾಯುತ್ತಿರುವೆ.. :)

 

ನಿಮ್ಮೊಲವಿನ,

..ಸತ್ಯ

Rating
No votes yet

Comments