ನನ್ನ ಹುಣ್ಣಿಮೆಗೆ
ಚಿತ್ರ

ಹೊನ್ನ ಬಣ್ಣದ ರವಿಯ ಉದಯದೊ-
ಳೆನ್ನ ಚಿತ್ತವ ಕದಿಯ ಹೊರಟರ-
ದಿನ್ನು ವ್ಯರ್ಥವು ಹೂವೆ ನೀನಿದನರಿತರೊಳ್ಳೆಯದು!
ಜೊನ್ನ ಹುಣ್ಣಿಮೆ ಜೇನ ಮನದವ-
ಳೆನ್ನ ಮನವನು ತುಂಬಿ ಬಿಟ್ಟಿರ
ಲೆನ್ನ ನೋಟಕೆ ಬೀಳ್ವುದುಂಟೇ ಬೇರೆ ಕಮಲಗಳು?
-ಹಂಸಾನಂದಿ
ಕೊ: ಈ ವಾರ ಪದ್ಯಪಾನದಲ್ಲಿ ವರ್ಣನೆಗೆಂದು ಕೊಟ್ಟ ಚಿತ್ರ ಇದು. ಈ ಪದ್ಯ ಭಾಮಿನೀ ಷಟ್ಪದಿಯಲ್ಲಿದೆ (ಚಿತ್ರ ಕೃಪೆ: ಪದ್ಯಪಾನ)

Rating