ನಯಸೇನನ ಸಲೀಸಾದ ಸಾಲುಗಳು

ನಯಸೇನನ ಸಲೀಸಾದ ಸಾಲುಗಳು

ತುಂಬ ದಿನ ಆದ ಮೇಲೆ ಯಾವುದಾದರು ಹಳೆಗನ್ನಡದ(ಅಲ್ಲ ಹಿರಿಗನ್ನಡದ) ಕಬ್ಬವೋದಬೇಕೆಂಬ ಆಸೆಯಾಯಿತು. ತುಂಬ ದಿನಗಳ ಕೆಳಗೆ ನಯಸೇನನ 'ದರ್ಮಾಮ್ರುತಂ' ಇಲ್ಲಿಂದ ಇಳಿಸಿಟ್ಟಿದ್ದೆ.
ನಯಸೇನನ ಸಾಲುಗಳನ್ನು ಓದುವಾಗ ತುಂಬ ಕುಸಿಯಾಯಿತು. ಯಾಕಂದ್ರೆ ಯಾವುದೇ ತೊಡಕಿಲ್ಲದೆ ಸಲೀಸಾಗಿ ತಲೆಗಿಳಿಯಿತು. ಈ ಹಿಂದೆ ನಯಸೇನನ ಬಗ್ಗೆ ಇಲ್ಲಿ ಬ್ಲಾಗಿದ್ದೆ. http://sampada.net/blog/10/08/2007/5324

ಒಂದೊಂದೆ ಪದ್ಯಗಳನ್ನು ತೆಗೆದುಕೊಂಡು ನನ್ನ ತಲೆಗೆ ಎಶ್ಟು ಹೊಳೆಯುತ್ತೊ ಅಶ್ಟು ಅರುಹುವೆ. ತಪ್ಪಿದ್ದರೆ ದಾರಾಳವಾಗಿ ತಿದ್ದಿ.

ಪೊಲ್ಲಮೆಗಂಡದನಱಿದುಂ
ಮೆಲ್ಲನೆ ಸಯ್ತಾಗಿ ತಿರ್ದುವರ್ಸುಕವೀಶರ್
ಪೊಲ್ಲಮೆಯಿಲ್ಲದೊಡಂ ಲೇ
ಸಲ್ಲದು ಕ್ರುತಿಯೆಂದು ಕುಕವಿನಿಕರಂ ಪಳಿಗುಂ||

ಬಿಡಿಸಿದರೆ,

ಪೊಲ್ಲಮೆ ಕಂಡ್ ಅದನ್ ಅಱಿದುಂ
ಮೆಲ್ಲನೆ ಸಯ್ತ್ ಆಗಿ ತಿರ್ದು ಅವರ್ ಸುಕವೀಶರ್
ಪೊಲ್ಲಮೆಯಿಲ್ಲದೊಡಂ ಲೇಸ್
ಅಲ್ಲದು ಕ್ರುತಿಯೆಂದು ಕುಕವಿ ಇನಿಕರಂ ಪಳಿಗುಂ

ಪೊಲ್ಲಮೆ= ಕೆಟ್ಟದ್ದು, ಕೀಳುಮಟ್ಟದ್ದು

ತಿರುಳು:

ಒಳ್ಳೆ ಕಬ್ಬಿಗನಾ(ರಾ)ದವನ್ (ರ್) ತಮ್ಮ ಕಬ್ಬದಲ್ಲಿ ಕೆಟ್ಟದ್ದನ್ನು ಅರಿತು ಮೆಲ್ಲನೆ ತಿದ್ದಿ ಅದನ್ನು ಸರಿಪಡಿಸುವನು(ರು). ಈ ತೆರದಿ(ಇನಿಕರಂ) ಕೆಟ್ಟ ಕಬ್ಬಿಗರು ಕಬ್ಬ ನೆಗೞುವುದರಲ್ಲಿ ಅನುಬವ(ಪಳಿಗು) ಪಡೆಯುತ್ತಾರೆ.
ಒಂದು ಕ್ರುತಿಯಲ್ಲಿ ಕೆಟ್ಟದ್ದು(ಅತವ ತಪ್ಪುಗಳು) ಇಲ್ಲದೇ ಇರುವುದು ಲೇಸಲ್ಲ.

Rating
No votes yet

Comments

Submitted by kannadakanda Sun, 08/26/2018 - 19:33

ನಿಜವಾದ ಪಾಠ ಈ ರೀತಿಯಿದೆ.
ಪೊಲ್ಲಮೆಗಂಡದನಱಿದುಂ
ಮೆಲ್ಲನೆ ಸಯ್ತಾಗಿ ತಿರ್ದುವರ್ಸುಕವೀಶರ್
ಪೊಲ್ಲಮೆಯಿಲ್ಲದೊಡಂ ಲೇ
ಸಲ್ಲದು ಕೃತಿಯೆಂದು ಕುಕವಿನಿಕರಂ ಪೞಿಗುಂ