ನಸ್ಯದಾನಂ ಮಹಾದಾನಂ

ನಸ್ಯದಾನಂ ಮಹಾದಾನಂ

ನಸ್ಯದಾನಂ ಮಹಾದಾನಂ

ಅನ್ನ ದಾನಂ ಚ ಮಧ್ಯಮಂ|

ಅಧಮಂ ವಸ್ತ್ರದಾನಂಚ

ಕನ್ಯಾದಾನಂಚ ನಿಷ್ಪಲಂ|| ಅನ್ಬಿಟ್ಟು ಹಿರೀಕ್ರೆ ಹೇಳ್ಭಿಟ್ಟಿದ್ದಾರೆ. ಅದೂ ಅಲ್ದೆ

 

ಅಸ್ಯ ಶ್ರೀನಸ್ಯಸ್ತೋತ್ರಮಿತಿ

ಮಹಾಮಂತ್ರಸ್ಯ

ಹೊಗೇಸೊಪ್ಪೆ ದಿವಿಜಂ

ಡಬ್ಬೀಂ ಋಷಿಃ

ಮಮ ನಸ್ಯಧಾರಣ ಪ್ರಸಾದ

ಸಿದ್ಧ್ಯರ್ಥೆ ಜಪೇ ವಿನಿಯೋಗಃ| ಅಂದ. ಅಂದರೇ  

 

ರಜತ ಕರಂಡಾಂ ನಸ್ಯಮಾದಾಯ,

ಬೆಳ್ಳಿ ಡಬ್ಬಿ ತಗೋಳ್ಳೋದೂ ಹಾಗೇಂತ ಅರ್ಥ.

ಚೂರ್ಣಂ ಕಾಯತ್ವಾ, ಅಂದರೆ

ಸುಣ್ಣ ಹಚ್ಚೂದು ಹಾಗೇಂತ ಅರ್ಥ

ನಸ್ಯಂ ಗೃಹೀತ್ವಾ, ಅಂದರೆ 

ನಸ್ಯ ಬಗ್ಗಿಸ್ಕೊಳ್ಳೋದು ಹಾಗೇಂತ ಅರ್ಥ

ಅಂಗುಷ್ಠ ತರ್ಜನೀಭ್ಯಾಂ

ಮರ್ದೈತ್ವಾ

ಅವಿರಳ ಮಾಸ್ತೀರ್ಯ ಒಡಗುಂ ಕೃತ್ವಾ

ಏಕರಾಶಿಂ ಕೃತ್ವಾ

ತದನಂತರೇ ಅಭ್ಯಾಗತಾನಾಂ ಬ್ರಾಹ್ಮಣಾನಂ

ಕಿಂಚಿತ್ ಕಿಂಚಿತ್ ದತ್ವಾ

ತತ್ ಶೇಷ ಏಕ ಚಿಟಿಕಂ ಬ್ರಹ್ಮರಂಧ್ರಂ

ಸಮರ್ಪಯಾಮಿ

ಓಂ ತತ್ಸತ್ ಬ್ರಹ್ಮಾರ್ಪಣಮಸ್ತು

 

......................ನಸ್ಯ, ತಂಬಾಕಿನ ಮೂರನೆಯ ರೂಪ (ಮೊದಲನೆಯದು ಹೊಗೆಸೊಪ್ಪು ಹಾಗೂ ಕಡ್ಡಿಪುಡಿ, ಎರಡನೆಯದು ಬೀಡಿ ಸಿಗರೇಟ್) ಒಂದಾನೊಂದು ಕಾಲದಲ್ಲಿ ಅತ್ಯಂತ ಜನಪ್ರಿಯವಾಗಿತ್ತು. ಇತ್ತೀಚಿನ ದಿನಗಳಲ್ಲಿ ನಸ್ಯ ಹಾಕುವವರನ್ನು ನಾನು ಬೆಂಗಳೂರಿನಲ್ಲಿ ನೋಡಿಲ್ಲ. ಆದರೆ ನಸ್ಯ ಹಾಕುತ್ತಿದ್ದ ಕಾಲದಲ್ಲಿ, ನಸ್ಯ ಹಾಕುವ ರಿಚುವಲ್ ಬಹಳ ಪ್ರಸಿದ್ಧಿಯಾಗಿತ್ತು! ಅದಕ್ಕೆ ಪುರಾವೆಯಾಗಿ ಈ ಮೇಲಿನ ಅಣಕು ಪದ್ಯ.

ಈ ಪದ್ಯವನ್ನು ಯಾರು ಬರೆದರು ಎಂದು ನಮಗೆ ತಿಳಿದಿಲ್ಲ. ಆದರೆ ಇದನ್ನು ಮಹಮದ್ ಪೀರ್ ಅವರು ಒಂದು ಗ್ರಾಮಫೋನಿನಲ್ಲಿ ಹಾದಿದ್ದಾರೆ. ಬಹುಶಃ ಯಾವುದೋ ನಾಟಕದ ಹಾಸ್ಯ ಸನ್ನಿವೇಶದ ಹಾಡಿರಬೇಕು. ಇದರಿಂದ ನಸ್ಯವು, ಅಮ್ದಿನ ದಿನಗಳಲ್ಲಿ ಎಂತಹ ಪ್ರಭಾವವನ್ನು ಬೀರಿತ್ತು ಎಂದು ಊಹಿಸಬಹುದು. ನಸ್ಯಕ್ಕೆ ‘ಜ್ಞಾನಚೂರ್ಣ’ ಎಂಬ ಅಡ್ಡ ಹೆಸರಿತ್ತು. 

ಇದನ್ನು ಯಾರಾದರೂ ‘ವೈದಿಕರು’ ಛಂದೋಬದ್ಧವಾಗಿ ಹಾಡಿ ಯುಟ್ಯೂಬಿನಲ್ಲಿ ಹಾಕಿ ಕನ್ನಡಿಗರಿಗೆ ಕೇಳಿಸಿದರೆ ನಮ್ಮ ಬಾಳು ಪಾವನವಾದೀತು!

ಸಂಗ್ರಹ

ನಾಸೋ 

Rating
No votes yet

Comments