ನಾನು ಸಂಪದಕ್ಕೆ ಬಂದ ಮೇಲೆ - ಪ್ರತಿಕ್ರಿಯೆಗಳ ಸುತ್ತ

ನಾನು ಸಂಪದಕ್ಕೆ ಬಂದ ಮೇಲೆ - ಪ್ರತಿಕ್ರಿಯೆಗಳ ಸುತ್ತ

ಸಂಪದಕ್ಕೆ ನಾನು ಬಂದು ೨೦ ದಿನಗಳಾದವು. ಈಗೆರಡು ದಿನಗಳಿಂದ ನಾನು ಹೇಳಬೇಕೋ ಬೇಡವೋ ಎಂಬ ಗೊಂದಲವಿದ್ದರೂ, ಸಂಪದದ ಸದಸ್ಯೆಯಾಗಿ ಪ್ರತಿಕ್ರಿಯೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದ ನಾನು, ನನ್ನ ಪಾತ್ರವೂ ಇದರಲ್ಲಿ ಇದೆಯೆಂದು ಮಾತಾಡುತ್ತಿದ್ದೇನೆ. ನನಗೆ ಯಾರನ್ನೂ ಅವಮಾನಿಸುವ ಯೋಚನೆಯಾಗಲೀ, ನೋಯಿಸುವ ಇರಾದೆಯಾಗಲೀಇಲ್ಲ. ದಯವಿಟ್ಟು ತಪ್ಪುಗಳಿದ್ದರೆ ತಿದ್ದಿ, ಒಪ್ಪಿಕೊಳ್ಳುತ್ತೇನೆ. ಸಂಪದ ಒಂದು ಕುಟುಂಬವಿದ್ದಂತೆ. ಇಲ್ಲಿ ಸರಸ-ವಿರಸ, ನೋವು-ನಲಿವು, ಎಲ್ಲವೂ ಇದೆ. ಕೆಲವರಿಗೆ ಧರ್ಮದ ವಿಷಯಗಳಲ್ಲಿ ಆಸಕ್ತಿಯಿದ್ದರೆ, ಇನ್ನೂ ಕೆಲವರಿಗೆ ಪ್ರಚಲಿತ ವಿದ್ಯಮಾನಗಳಲ್ಲಿ ಬಹಳ ಆಸಕ್ತಿ. ಕೆಲವರಿಗೆ ಹಾಸ್ಯ ಬರಹಗಳನ್ನು ಬರೆಯುವುದರಲ್ಲಿ ಆಸಕ್ತಿಯಿದ್ದರೆ, ಇನ್ಣೂ ಕೆಲವರಿಗೆ ಅದಕ್ಕೆ ಪ್ರತಿಕ್ರಿಯಿಸುವುದರಲ್ಲಿ ಆಸಕ್ತಿ ಹೀಗೆ. ನನಗೆ ಫೋಟೋಗ್ರಫಿ ಬಗ್ಗೆ ಅಥವಾ ಧರ್ಮದ ಬಗ್ಗೆ ಹೆಚ್ಚಾಗಿ ಗೊತ್ತಿಲ್ಲ. ಹಾಗಾಗಿ ಅದಕ್ಕೆ ಪ್ರತಿಕ್ರಿಯೆ ನೀಡುತ್ತಿರಲಿಲ್ಲವೇ ಹೊರತು ಅದರ ಬಗ್ಗೆ ಇಷ್ಟವಿಲ್ಲವೆಂದಲ್ಲ. ಹಾಗಾಗಿ ಅವರವರು ಅವರವರಿಗೆ ಇಷ್ಟವಾದ ಬ್ಲಾಗ್ ಗಳಲ್ಲಿ ಪ್ರತಿಕ್ರಿಯಿಸುತ್ತಿದ್ದರೆ ವಿನಹಾ ಯಾರಿಗೂ ಇದರಿಂದ ನೋವಾಗುತ್ತಿರಲಿಲ್ಲವೆಂದು ನನ್ನ ಭಾವನೆ. ಹಾಗಾಗಿ ಸಮಾನಮನಸ್ಕರು ಅವರವರಿಗೆ ಸಂಬಂಧಪಟ್ಟ ಬ್ಲಾಗಿನಲ್ಲಿ, ಇಲ್ಲವೇ ಲೇಖನಗಳಲ್ಲಿ ಉತ್ತರಿಸುತ್ತಿದ್ದಾರೆ. ಹಾಗಾಗಿ ಖಂಡಿತವಾಗಿಯೂ ನಾವವರನ್ನು ನೋಡಿರದಿದ್ದರೂ ಒಂದೇ ಕುಟುಂಬದವರಂತೆ ಸಲಿಗೆಯಂತೂ ಇದ್ದೇ ಇದೆ.

ಹೀಗಿರುವಾಗಲೇ ಪ್ರಚಲಿತ ವಿದ್ಯಮಾನಗಳಲ್ಲಿ ಒಂದಾದ ಪಬ್ ಪ್ರಕರಣ ನಮ್ಮ ಸಂಪದದಲ್ಲಿ ಸ್ವಲ್ಪ ಹೆಚ್ಚಾಗಿಯೇ ಪ್ರಾಮುಖ್ಯತೆ ಪಡೆಯಿತು ಎಂಬುದು ನನ್ನ ಭಾವನೆ(ಕೆಲವು ಸದಸ್ಯರಿಗೆ ಇದರಲ್ಲಿ ಬಹಳ ಆಸಕ್ತಿಯಿತ್ತು) ಹಾಗೂ ಇಡೀ ಭಾರತದ ಮಹಿಳೆಯರನ್ನೆಲ್ಲಾ generalize ಮಾಡಿ ನಾವೆಲ್ಲರೂ ಪಬ್ ಗಳಿಗೆ ಹೋಗುತ್ತಿದ್ದೇವೆ ಇಲ್ಲವೇ ಕೆಲವು ಇಲ್ಲಿ ಹೇಳುವುದಕ್ಕೆ ಅಸಹ್ಯವಾದಂಥ ಶಬ್ದಗಳಿಂದ ನಮ್ಮನ್ನು ಗೇಲಿ ಮಾಡಿ ನಕ್ಕರು. ಆಗ ನನಗೆ ತುಂಬಾ ನೋವಾಗಿತ್ತು. ಎಲ್ಲೋ ಕೆಲವರನ್ನು ಬಿಟ್ಟರೆ (ಅವರಿಗೆಲ್ಲಾ ನಾನು ಋಣಿ) ಯಾರೂ ಕೂಡ ಅವರ ವಿರುದ್ದ ಚಕಾರವನ್ನೂ ಎತ್ತಲಿಲ್ಲ.

ನೀವು ಮದುವೆಯಾಗುವ ಹುಡುಗಿ ಹೇಗಿರಬೇಕೆಂಬ ಪ್ರಶ್ನೆಗೆ ಹೇಮಾ ವೆಂಕಟ್ ನವರಿಗೆ ಪ್ರತಿಕ್ರಿಯಿಸಿದ್ದು ಅವರೊಟ್ಟಿಗಿನ ಸಲಿಗೆಯಲ್ಲಿ ಏಕೆಂದರೆ ಅದರ ಹಿಂದಿನ ದಿವಸವೇ ಅವರು ಹೇಮಾಳ ಪ್ರತಿ ಬ್ಲಾಗಿನಲ್ಲಿಯೂ ಪ್ರತಿಕ್ರಿಯಿಸಿದ್ದರು. ಮತ್ತು ಹೇಮಾ ಅವರ ಪ್ರತಿಕ್ರಿಯೆಯಲ್ಲಿ ಯಾರನ್ನೂ ನೋಯಿಸುವ ಉದ್ದೇಶವಾಗಲೀ, ಬರೆಯಬಾರದಂಥ ಅಸಹ್ಯವಾದ ಪದಗಳಾಗಲೀ ಯಾವುದೂ ಇರಲಿಲ್ಲ. ಆದರೂ ಅಷ್ಟು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು ಏಕೆ. ಅದು ಸರಿಯಾದರೆ, ನಮಗೆಲ್ಲ generalize ಮಾಡಿ ಬರೆದ ಮೇಲಿನ ಬ್ಲಾಗ್ ಗಳಲ್ಲಿ ಯಾರೂ ಯಾಕೆ ಇಷ್ಟು ತೀಕ್ಷ್ಣವಾಗಿ ಪ್ರತಿಕ್ರಿಯಿಸಲಿಲ್ಲ.

ದಯವಿಟ್ಟು ಸಂಪದಿಗರೇ ಉತ್ತರಿಸಿ ಮತ್ತು ನನ್ನ ಗೊಂದಲವನ್ನು ದೂರ ಮಾಡಿ :-(

Rating
No votes yet

Comments