ನಾವು ಮಾಡಿದವರು ನಮಗೆ (ಎಡರೊತ್ತಿನಲ್ಲಿ) ಆಗಲ್ಲ - ತಿಳಿವು/ನೀತಿ
ಈ ಮಾತನ್ನ ನಮ್ಮ ತಂದೆಯವರು ನಂಗೆ ಯಾವಾಗಲೂ ಹೇಳುತ್ತಿದ್ದರು. ನಾವು ಒಬ್ಬರಿಗೆ ನೆರವು ಕೊಡುವಾಗ ಅವರಿಂದ ಮುಂದೆ ಯಾವುದೇ ನೆರವನ್ನ ಎದುರು ನೋಡಬಾರದು. ಒಂದು ವೇಳೆ ಆ ತರ ಮಾಡಿದರೆ ಅದು ನಮ್ಮ ತಪ್ಪಾಗುತ್ತದೆ. ನೆರವು ಮಾಡಲೇಬೇಕೆಂಬ ಒಂದೇ ಒಂದು ಒಳ್ಳೆಯ ಗುರಿಯಿಂದ ನಾವು ಬೇರೆಯವರಿಗೆ ನೆರವು ಮಾಡಬೇಕು. ಆದರೆ ಹಲವು ಸರ್ತಿ ನಮ್ಮಿಂದ ನೆರವು ತೆಗೆದುಕೊಂಡಿರದವರೇ ನಮ್ಮ ಎಡರೊತ್ತಿನಲ್ಲಿ ನಮಗೆ ನೆರವಾಗುವರು.ಇದೊಂದು ಬರೆದಿರದ ಕಟ್ಟಳೆ(ಅಲಿಖಿತ ನಿಯಮ).ಆದರೂ ಸಾಮಾನಿಯ ಮನ್ಸರಾದ ನಾವು ನೆರವು ಕೊಟ್ಟವರಿಂದ ಏನನ್ನಾದರೂ ಎದುರು ನೋಡತ್ತಲೇ ಇರುತ್ತೇವೆ. ಇದೊಂದು ನಮ್ಮ ಮನಸ್ಸಿನಲ್ಲಿ ನೆರೆಯೂರಿತ್ತೆ. "ಅಯ್ಯೊ, ನಾನು ಅವ್ನಿಗೆ ಆಟೋಂದು ಮಾಡ್ದೆ. ಅವ್ನು ನನ್ನ ನೋಡುದ್ರು ನೋಡ್ದೆದಂಗೆ ವೋದ" ಅಂತ ಮರುಗುತ್ತ ಏಟೋಂದು ಮಂದಿ ಹೇಳಿರುವುದನ್ನ ನಾನು ನೋಡಿವ್ನಿ. ಅಚ್ಚರಿಯೆಂದರೆ ಒಟ್ಟಿನಲ್ಲಿ ಕಡೆಗೆ ನಮ್ಮ ಎಡರೊತ್ತಿನಲ್ಲಿ ಯಾರಾದ್ರೂ ನಮಗೆ ನೆರವು ಕೊಟ್ಟೇ ಕೊಡುತ್ತಾರೆ. ಆದರೂ ನಾವು ಈ ಮೇಲಿನ ಬಗೆಯಲ್ಲಿ ಮರುಗುವುದನ್ನ ಬಿಡುವುದಿಲ್ಲ. ನಾವು ಸಲೀಸಾಗಿ ಹೇಳಿಬಿಡಬೋದು "ನೆರವು ಕೊಡ್ಬೇಕಾದ್ರೆ ಹಿಂದೆ ಮುಂದೆ ನೋಡ್ದೆ ಸುಮ್ನೆ ಕೊಡ್ಬೆಕು. ತುಂಬ ತಲೆ ಕೆಡ್ಸಿಕೊಳ್ಳಬಾರದು, ಮುಂದೇನೂ ಕೂಡ" ಆದರೆ ನಮ್ಮ ಮನದಾಳದಲ್ಲಿ ಅದು ಕೂತೇ ಇರುತ್ತೆ. "ಯಾರಿಗೆ ಯಾರು ಬಲ್ಲವರ್ಯಾರೋ.." ಅಂತ ಒಂದು ಸಿನಿಮಾ ಹಾಡಿದೆ. ಏನಾದ್ರೂ ನಿರಾಸೆಯಾದ್ರೆ ಈ ಬಗೆಯಲ್ಲಿ ಹಾಡು ಹೇಳ್ಕಂಡ್ ಸುಮ್ಮನೆಯಾಗದೆ ಬೇರೆ ದಾರಿಯಿಲ್ಲ ಅಲ್ವ?