ನಿಂತ ನೀರಾಗದಿರು (ಶ್ರೀ ನರಸಿಂಹ 62)
ನಿಂತ ನೀರಾಗದಿರು ನೀನು ಸಾಧನೆಯ ಹಾದಿಯಲಿ
ನಿನ್ನಲ್ಪ ಮತಿಗೆ ತಿಳಿದುದನೆ ನೀ ಸತ್ಯವೆಂದೆನುತಲಿ
ಎಲ್ಲವನು ಅರಿತಿಹೆನೆಂಬಹಮಿಕೆಯಲಿ ಮೆರೆಯದಿರು
ಎಲ್ಲವನು ಜರಿಯುತಲೆಲ್ಲರನು ನೀ ನಿಂದಿಸದಿರು
ಎಲ್ಲದರಲಿ, ಎಲ್ಲರಲಿ ಸಮದೃಷ್ಠಿಯನು ಇರಿಸೆಂದು
ಗೀತೆಯಲಿ ಪರಮಾತ್ಮ ಶ್ರೀಕೃಷ್ಠ ನುಡಿದಿಹನಂದು
ತಿಳಿಯದಲೆ ವೇದ, ಗೀತೆಗಳ ಪೂರ್ಣ ಸಾರವನು
ಸರಿಯಿಲ್ಲವವೆನುತಲಿ ಜರಿಯದಿರು ಅವುಗಳನು
ಸುಡುವ ಬೆಂಕಿಯನೆ ಬೆಳಕೆನುತಲಿ ನಂಬದಿರು ನೀನು
ನಂಬು,ನಂಬದಿರು ಶ್ರೀ ನರಸಿಂಹ ಸಲಹುವನೆಲ್ಲರನು
Rating
Comments
ನಿಜ ಯಾವಾಗಲು ನಮಗೆ
ನಿಜ ಯಾವಾಗಲು ನಮಗೆ ತಿಳಿದಿರುವದಷ್ಟೆ ಸತ್ಯ ಉಳಿದುದೆಲ್ಲ ಮಿಥ್ಯ ಎ0ಬ ಭಾವನೆ ,
ನಾವು ಬೆಳೆಯಲು ಸಹಕಾರಿಯಲ್ಲ
In reply to ನಿಜ ಯಾವಾಗಲು ನಮಗೆ by partha1059
ಧನ್ಯವಾದಗಳು ಪಾರ್ಥಸಾರಥಿಯವರೇ ...
ಧನ್ಯವಾದಗಳು ಪಾರ್ಥಸಾರಥಿಯವರೇ .....ಸತೀಶ್
In reply to ಧನ್ಯವಾದಗಳು ಪಾರ್ಥಸಾರಥಿಯವರೇ ... by sathishnasa
>+1
<<ಸುಡುವ ಬೆಂಕಿಯನೆ ಬೆಳಕೆನುತಲಿ ನಂಬದಿರು ನೀನು
ನಂಬು,ನಂಬದಿರು ಶ್ರೀ ನರಸಿಂಹ ಸಲಹುವನೆಲ್ಲರನು>>+1
In reply to >+1 by Premashri
ಧನ್ಯವಾದಗಳು ಪ್ರೇಮ ರವರೇ ....
ಧನ್ಯವಾದಗಳು ಪ್ರೇಮ ರವರೇ .....ಸತೀಶ್
ಸಮತ್ವ- ಸಾಧಕನ ಅಸ್ತ್ರ!
ಸಮತ್ವ- ಸಾಧಕನ ಅಸ್ತ್ರ!
In reply to ಸಮತ್ವ- ಸಾಧಕನ ಅಸ್ತ್ರ! by kavinagaraj
ಸತ್ಯವಾದ ಮಾತು ನಾಗರಾಜ್ ರವರೇ
ಸತ್ಯವಾದ ಮಾತು ನಾಗರಾಜ್ ರವರೇ ಧನ್ಯವಾದಗಳೊಂದಿಗೆ ..........ಸತೀಶ್
ತಿಳಿಯದೆಲೆ ವೇದ, ಗೀತೆಗಳ ಪೂರ್ಣ
ತಿಳಿಯದೆಲೆ ವೇದ, ಗೀತೆಗಳ ಪೂರ್ಣ ಸಾರವನು, ಸರಿಯಿಲ್ಲವವೆನುತಲಿ ಜರಿಯದಿರು ಅವುಗಳನು +೧
In reply to ತಿಳಿಯದೆಲೆ ವೇದ, ಗೀತೆಗಳ ಪೂರ್ಣ by ಮಮತಾ ಕಾಪು
ಧನ್ಯವಾದಗಳು ಮಮತಾ ರವರೇ ...
ಧನ್ಯವಾದಗಳು ಮಮತಾ ರವರೇ ....ಸತೀಶ್
ನಿಂದಕರಿರಬೇಕು...; ಕವನ
ನಿಂದಕರಿರಬೇಕು...; ಕವನ ಚೆನ್ನಾಗಿದೆ.
In reply to ನಿಂದಕರಿರಬೇಕು...; ಕವನ by ಗಣೇಶ
ಎಲ್ಲ ತರದ ಪಾತ್ರಗಳು ಇದ್ದಾಗಲೆ
ಎಲ್ಲ ತರದ ಪಾತ್ರಗಳು ಇದ್ದಾಗಲೆ ನಾಟಕ ಕಳೆ ಕಟ್ಟುವುದು ಅಲ್ಲವೇ ? ಧನ್ಯವಾದಗಳು ಗಣೇಶ್ ರವರೇ .....ಸತೀಶ್
In reply to ಎಲ್ಲ ತರದ ಪಾತ್ರಗಳು ಇದ್ದಾಗಲೆ by sathishnasa
ಮರೆಯದಿರು, ಜೀವನ ತತ್ವವನು ಎಂದು
ಮರೆಯದಿರು, ಜೀವನ ತತ್ವವನು ಎಂದು ಸಾರುವ ನಿಮ್ಮ ಮಾತು ಚನ್ನಾಗಿದೆ
In reply to ಮರೆಯದಿರು, ಜೀವನ ತತ್ವವನು ಎಂದು by Prakash Narasimhaiya
ಧನ್ಯವಾದಗಳು ಪ್ರಕಾಶ್ ರವರೇ ...
ಧನ್ಯವಾದಗಳು ಪ್ರಕಾಶ್ ರವರೇ ....ಸತೀಶ್