ನಿಂತ ನೀರಾಗದಿರು (ಶ್ರೀ ನರಸಿಂಹ 62)

ನಿಂತ ನೀರಾಗದಿರು (ಶ್ರೀ ನರಸಿಂಹ 62)

ನಿಂತ ನೀರಾಗದಿರು ನೀನು ಸಾಧನೆಯ ಹಾದಿಯಲಿ


ನಿನ್ನಲ್ಪ ಮತಿಗೆ ತಿಳಿದುದನೆ ನೀ ಸತ್ಯವೆಂದೆನುತಲಿ


ಎಲ್ಲವನು ಅರಿತಿಹೆನೆಂಬಹಮಿಕೆಯಲಿ ಮೆರೆಯದಿರು


ಎಲ್ಲವನು  ಜರಿಯುತಲೆಲ್ಲರನು ನೀ  ನಿಂದಿಸದಿರು


 


ಎಲ್ಲದರಲಿ, ಎಲ್ಲರಲಿ ಸಮದೃಷ್ಠಿಯನು ಇರಿಸೆಂದು


ಗೀತೆಯಲಿ ಪರಮಾತ್ಮ ಶ್ರೀಕೃಷ್ಠ ನುಡಿದಿಹನಂದು


ತಿಳಿಯದಲೆ ವೇದ, ಗೀತೆಗಳ ಪೂರ್ಣ ಸಾರವನು


ಸರಿಯಿಲ್ಲವವೆನುತಲಿ ಜರಿಯದಿರು  ಅವುಗಳನು


 


ಸುಡುವ ಬೆಂಕಿಯನೆ ಬೆಳಕೆನುತಲಿ ನಂಬದಿರು ನೀನು


ನಂಬು,ನಂಬದಿರು ಶ್ರೀ ನರಸಿಂಹ ಸಲಹುವನೆಲ್ಲರನು

Rating
No votes yet

Comments

Submitted by partha1059 Tue, 02/05/2013 - 12:42

ನಿಜ‌ ಯಾವಾಗಲು ನಮಗೆ ತಿಳಿದಿರುವದಷ್ಟೆ ಸತ್ಯ ಉಳಿದುದೆಲ್ಲ ಮಿಥ್ಯ ಎ0ಬ‌ ಭಾವನೆ ,
ನಾವು ಬೆಳೆಯಲು ಸಹಕಾರಿಯಲ್ಲ