ನಿಜವಾದ ಭವಿಷ್ಯವಾಣಿಗಳು

ನಿಜವಾದ ಭವಿಷ್ಯವಾಣಿಗಳು

ಒಕ್ಟೋಬರ್ 9ರ  ವಿಜಯವಾಣಿಯಲ್ಲಿ   ಪ್ರೊ। ಪ್ರೇಮಶೇಖರ್ ಅವರು ತಮ್ಮ ಜಗದಗಲ ಅಂಕಣದಲ್ಲಿ "ಇತಿಹಾಸದ ಬೇರಿಲ್ಲದ ವರ್ತಮಾನ ಸೀಳು ಕನ್ನಡಿ" ಎಂಬ ಬರಹದಲ್ಲಿ ಭವಿಷ್ಯವಾಣಿಗಳ ಬಗ್ಗೆ  ಬರೆದಿದ್ದಾರೆ.

ಹರಿದ್ವಾರದ ಆಚಾರ್ಯ ರಾಮತೀರ್ಥರು 1983-84 ರಲ್ಲಿ ಹೇಳಿದ ಮಾತುಗಳಿಂದ ಲೇಖನ ಶುರುವಾಗುತ್ತದೆ. " ಇನ್ನು ಕೆಲವೇ ವರ್ಷಗಳಲ್ಲಿ ಕಮ್ಯೂನಿಸಂ  ಕುಸಿದು ಬೀಳುತ್ತದೆ.  ರಷಿಯಾದಲ್ಲಿ ಕ್ರೈಸ್ತಮತ  ಪುನಃ ಪ್ರವರ್ಧಮಾನಕ್ಕೆ ಬರುತ್ತದೆ.  ವಿಶ್ವಕ್ಕೆ ಅಣುಯುದ್ಧದ ಅಪಾಯವಿಲ್ಲ. ಇದನ್ನು ತಡೆಯಲು ಹಿಮಾಲಯದಲ್ಲಿನ ಮಹಾತ್ಮರು ಕಾರ್ಯಯೋಜನೆ ರೂಪಿಸಿದ್ದಾರೆ."

ಭವಿಷ್ಯವಾಣಿ ನೂರಕ್ಕೆ ನೂರು ಸರಿಯಾಗಿ ಘಟಿಸಿದೆ.   ಪ್ರೊ। ಪ್ರೇಮಶೇಖರರ ಬರಹ ಬಹಳ ಕುತೂಹಲಕಾರಿಯಾಗಿದೆ.  ಒಮ್ಮೆ ಕಣ್ಣಾಡಿಸಿ.
http://epapervijayavani.in/Details.aspx?id=8961&boxid=25334421

ಇದು ಏನನ್ನು ಸೂಚಿಸುತ್ತದೆ ಎಂದರೆ ಭವಿಷ್ಯವಾಣಿಗಳು ಒಬ್ಬ ವ್ಯಕ್ತಿಗೆ ಮಾತ್ರ ಸೀಮಿತವಾಗಬೇಕೆಂದಿಲ್ಲ - ಕುಟುಂಬಗಳನ್ನು, ಇಡೀ ಊರುಗಳನ್ನು, ದೇಶಗಳನ್ನು ಕೂಡಾ ಒಳಗೊಳ್ಳಬಹುದು.

1966 ರಲ್ಲಿ ಬರೆದ ಮಾಡೆಸ್ಟಿ ಬ್ಲೇಯ್ಸ್ ಕಾರ್ಟೂನ್ ಮತ್ತು ಕಾದಂಬರಿಗಳಲ್ಲಿ ಕುವೈಟ್  ಆಕ್ರಮಣ ಮತ್ತು ಸೆಪ್ಟೆಂಬರ್ 11 ತಾರೀಕುಗಳ ಉಲ್ಲೇಖವಿದೆ.

ಇತ್ತೀಚಿಗೆ ನಮ್ಮ ಹಿರಿಯರೊಬ್ಬರ ನಿಧನ ನಿಮಿತ್ತ ಊರಿಗೆ ಹೋಗಿದ್ದಾಗ ಅಲ್ಲಿ ಇದರ ಬಗ್ಗೆ ಮೂರು ವಿಭಿನ್ನ ಮಾಧ್ಯಮಗಳೊಂದಿಗೆ ತನ್ನ ಅನುಭವಗಳನ್ನು ನಮ್ಮ ಅಣ್ಣ ಹೇಳಿಕೊಂಡ.

ಮೊದಲನೆಯದ್ದು ಪ್ಲಾಂಚೆಟ್.   http://mindpowerlab.net/how-to-do-planchet-calling-spirit/

ಇದು ನಡೆದದ್ದು 1972 ರಲ್ಲಿ.  ಆಗ ನಮ್ಮ ಇನ್ನೊಬ್ಬ ಹಿರಿಯರಾದ ಡಾ। ಎಮ್ ಅವರು ಬೆಂಗಳೂರಿನ ಸರಕಾರೀ ಮೆಡಿಕಲ್ ಕಾಲೇಜಿನಲ್ಲಿ ಹೆರಿಗೆ ಶಾಸ್ತ್ರದ ಪ್ರೊಫೆಸರ್  ಆಗಿದ್ದು ಬೇರೆಡೆ ವರ್ಗಾವಣೆಯಾಗುವದನ್ನು ಕಾಯುತ್ತಿದ್ದರು.   ಪ್ಲಾಂಚೆಟ್ನಲ್ಲಿ ಈ ಬಗ್ಗೆ ಯಾವ ಊರಿಗೆ ವರ್ಗವಾಗಬಹುದು ಎಂದು ಕೇಳಿದಾಗ ಬಂದ ಉತ್ತರ : DAV...  ಆದರೆ ಇದು ಅಸಾಧ್ಯವಾಗಿತ್ತು ಯಾಕೆಂದರೆ ದಾವಣಗೆರೆಯಲ್ಲಿದ್ದದ್ದು ಖಾಸಗಿ ಕಾಲೇಜು.  ಈ ಉತ್ತರ ಬಂದ ಎರಡೇ ತಿಂಗಳಲ್ಲಿ ಅವರಿಗೆ ದಾವಣಗೆರೆಗೇನೇ ವರ್ಗವಾಯಿತು - ಸಂಸ್ಥೆಯನ್ನೇ ಮುಚ್ಚ್ಚುವ ಸ್ಥಿತಿಯಲ್ಲಿದ್ದ ಅಲ್ಲಿನ ಕಾಲೇಜಿನ ಆಡಳಿತಮಂಡಳಿ ರಾಜ್ಯಸರಕಾರದ ಸಹಾಯ ಕೇಳಿ ತಮಗೆ ಬೇಕಾದ ಸಿಬ್ಬಂದಿಗಳನ್ನು ಸರಕಾರದಿಂದ ಪಡೆದಿತ್ತು.  ಭವಿಷ್ಯವಾಣಿ ನಿಜವಾಯಿತು.

ಎರಡನೇ ಮಾಧ್ಯಮ: ಜನ್ಮದಿನಾಂಕ ಮತ್ತು ಸಮಯ.
The Philosophy of Astrology ಯನ್ನು ಬರೆದ ರಾಕೇಶ್ ಶರ್ಮಾ IIT ಕಾನ್ಪುರದಲ್ಲಿ ಓದಿ ಅಮೇರಿಕೆಯಲ್ಲಿ ನೆಲಸಿದ ಇವರು ಕೆಲವರ್ಷಗಳ ಹಿಂದೆ ಹುಬ್ಬಳ್ಳಿಯ ಮದುವೆ  ಸಮಾರಂಭವೊಂದಕ್ಕೆ ಬಂದಿದ್ದಾಗ  ನಮ್ಮಣ್ಣನಿಗೆ ಅಲ್ಲಿ ಸಿಕ್ಕಿದ್ದರು. ಅವರಿಗೆ ತನ್ನ ಮಗನ ಜನನ ಸಮಯ ಮತ್ತು ದಿನಾಂಕ ಕೊಟ್ಟ ನಮ್ಮಣ್ಣನಿಗೆ ಶರ್ಮಾ ಅವರು ಹೇಳಿದ ಭವಿಷ್ಯ ಹೀಗೆ:-
ಕಂಪೆನಿ ಡೈರೆಕ್ಟರ್ ಆಗಿ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಮಗ ಒಂದೆರಡು ವರ್ಷಗಳಲ್ಲೇ ಕೆಲಸ ಬಿಟ್ಟು ಉನ್ನತಶಿಕ್ಷಣ ಪಡೆಯಲು ವಿದೇಶಕ್ಕೆ ತೆರಳುವನು ಎಂದು.  ಇದು ಕೂಡಾ ನಂಬಲು ಸಾಧ್ಯವೇ ಇರಲಿಲ್ಲ ಯಾಕೆಂದರೆ ಮಗನಿಗೆ ವಿದ್ಯೆಯ ಬಗ್ಗೆ ಅಭಿರುಚಿಯೇ ಇರಲಿಲ್ಲ.  ಆದರೆ ಕೆಲಸಮಯಲ್ಲೇ ಇದು ನಿಜವಾಗಿ ಹುಡುಗನು ಆಕ್ಲೆಂಡ್ ಗೆ ತೆರಳಿದ.

ಮೂರನೇ ಮಾಧ್ಯಮ:  ಸತ್ಯದೇವತೆ ಕಲ್ಲುರ್ಟಿಯ ದೈವಪಾತ್ರಿ

ಮಂಗಳೂರಿನ ಹತ್ತಿರ ಫಲ್ಗುಣಿ ನದಿಯ ದಂಡೆಯಲ್ಲಿ ಗುರುಪುರ ಎಂಬ ಸಣ್ಣ ಊರಿದೆ.  ಅಲ್ಲಿ ಸತ್ಯದೇವತೆ ಧರ್ಮದೇವತೆ  ಮಂದಿರವಿದೆ.  ಇಲ್ಲಿನ ದೈವಪಾತ್ರಿಯ ಬಳಿ ಪ್ರಶ್ನೆಗಳನ್ನು, ತಮ್ಮ ಕಷ್ಟಗಳನ್ನು ಹೇಳಿಕೊಳ್ಳಲು ದಿನಾಲೂ ನೂರಾರು ಜನ ಬರುತ್ತಾರೆ.   ಹೇಳಿದ ಭವಿಷ್ಯಗಳಲ್ಲಿ ಹೆಚ್ಚಿನವು ನಿಜವಾಗಿವೆ.  http://shrisathyadevathamandir.com/history.htm

ನಂಬಿಕೆ ಇರುವವರು, ಇಲ್ಲದವರು ಎಲ್ಲರೂ ಗುರುಪುರಕ್ಕೆ ಬಂದು ಕಣ್ಣಾರೆ ನೋಡಬಹುದು.

 

Rating
No votes yet

Comments

Submitted by partha1059 Wed, 10/23/2013 - 18:40

ಕೆಲವೊಮ್ಮೆ ನಮ್ಮ/ಬೇರೆಯವರ‌ ಕೆಲವು ಮಾತುಗಳು ಭವಿಷ್ಯದ‌ ಆತಂಕ‌ ಸೂಚಿಸುತ್ತವೆ. ಅದನ್ನು ಆಕಸ್ಮಿಕ‌ ಅಥವ‌ ನಮ್ಮ ಮೂಢನಂಬಿಕೆ ಎಂದೊ ಇನ್ನೇನೊ ಹೇಳಬಹುದು
ತುಂಬಾ ವರ್ಷದ‌ ಹಿಂದೆ ನಾನಾಗ‌ ಪಿಯೂ ಓದುತ್ತಿದ್ದ ಸಮಯ‌, ನಮ್ಮ ಚಿಕ್ಕಜ್ಜಿಯ‌ ಜೊತೆ ಮಾತನಾಡುತ್ತಿರುವಂತೆ ಹಬ್ಬದ‌ ಸಂದರ್ಬದಲ್ಲಿ ನುಡಿದೆ, 'ಅದೇನು ಹಬ್ಬಗಳೊ ಒಂದು ವರ್ಷ‌ ಅತ್ಲಾಗೆ ಯಾವ‌ ಹಬ್ಬಾನು ಮಾಡಬಾರದು',
ಸರಿ ಆಕೆ ಬೈದರು, ಥೂ ನಿನಗೇನಾಯಿತು ಹಾಗೆಲ್ಲ ಮಾತನಾಡಬಾರದು, ಬಿಡ್ತು ಅನ್ನು, ದೇವರಿಗೆ ನಮಸ್ಕಾರ‌ ಮಾಡಿ ಎದ್ದು ಹೋಗು,
ನಾನು ಬಿಡ್ತೂನು ಅನ್ನಲಿಲ್ಲ ನಮಸ್ಕಾರನು ಮಾಡಲಿಲ್ಲ ಸುಮ್ಮನೆ ಎದ್ದುಹೋದೆ.
ಸ್ವಲ್ಪ ದಿನವಷ್ಟೆ ಆಗಿತ್ತು ನಮ್ಮ ತಂದೆ ತೀರಿಕೊಂಡರು ಆ ವರ್ಷ‌ ನಾವು ಯಾವ‌ ಹಬ್ಬವನ್ನು ಮಾಡಲಿಲ್ಲ.
ನಾನು ಮೂಡನಂಬಿಕೆ ಹೆಚ್ಚಿಸಲು ಈ ವಿಷಯ‌ ಹೇಳ್ತಾ ಇಲ್ಲ ಇದೊಂದು ಆಕಸ್ಮಿಕವೂ ಇರಬಹುದು....
ಆದರೆ ನಡೆದಿದ್ದಂತು ಸತ್ಯ

Submitted by Shreekar Thu, 10/24/2013 - 14:17

In reply to by partha1059

ಪಾರ್ಥ‌ ಸರ್,
ಅತೀಂದ್ರಿಯ ಶಕ್ತಿಯ ಅಂಶ ಜೀವಿಗಳಲ್ಲಿ ಹೆಚ್ಚೋ, ಕಡಿಮೆಯೋ ಇರುತ್ತದೆ ಎಂದು ನಾನು ನಂಬುತ್ತೇನೆ.
ಆ ಶಕ್ತಿಯೇ ನಿಮ್ಮ ಬಾಯಿಯಿಂದ ಆ ಮಾತನ್ನು ಹೇಳಿಸಿತೋ ಏನೋ !
ಅಳುವ ನಾಯಿಯ ನೈಜ ಕತೆ (?) ಇಲ್ಲಿ ಓದಿ. http://www.psychologytoday.com/blog/canine-corner/200905/can-dogs-sense-...
ನಮ್ಮಮ್ಮ ನಮ್ಮ ಬಾಲ್ಯದಲ್ಲಿ ನಮಗೆ ಹೇಳುತ್ತಿದ್ದ ಮಾತು ನೆನಪಿಗೆ ಬಂತು -- ಕೆಟ್ಟದ್ದನ್ನು ಆಡಬಾರದು ಯಾಕೆಂದರೆ ಮೇಲೆ ತಥಾಸ್ತು ದೇವತೆಗಳು ಸದಾ ತಥಾಸ್ತು, ತಥಾಸ್ತು ಅನ್ನುತ್ತಿರುತ್ತಾರೆ !

Submitted by Shreekar Thu, 10/24/2013 - 14:52

In reply to by Shreekar

ಗುರುಪುರದ ಸತ್ಯದೇವತೆಯ ಬಗ್ಗೆ.
ಮಂಗಳೂರಿನ ಅತ್ಯಂತ ಶ್ರೀಮಂತ ಮುಸ್ಲಿಂ ಉದ್ಯಮಿಯೊಬ್ಬರು ಕೂಡಾ ಈ ದೇವತೆಯನ್ನು ನಂಬುತ್ತಾರೆ ಎಂದು ಕೇಳಿದ್ದೇನೆ.
ನಮ್ಮ ದೂರದ ಸಂಬಂಧಿಯೊಬ್ಬರು ಮರ್ಚೆಂಟ್ ನೇವಿಯಲ್ಲಿದ್ದವರು ಜಲವಾಸ ಸಾಕಾಗಿ ನೆಲವಾಸವನ್ನು ಆಶೆಪಟ್ಟು ಕೆಲಸಕ್ಕೆ ರಾಜೀನಾಮೆ ಕೊಡಹೊರಟವರು ದೈವಚಿತ್ತವೇನಿದೆ ಎಂದು ತಿಳಿಯಲು ಗುರುಪುರಕ್ಕೆ ಸಪತ್ನೀ ಸಮೇತ ಹೋದರು. ದೈವ ಹೇಳಿದ್ದು : "ಈಗಲೇ ರಾಜೀನಾಮೆ ಬೇಡ, ಎರಡು ವರ್ಷ ಕಳೆಯಲಿ. ಗಂಡಾಂತರ ಕಳೆಯಲು ಪತ್ನಿಯು ಪ್ರತೀ ತಿಂಗಳೂ ಇಲ್ಲಿಗೆ ಬಂದು ಪೂಜೆ ಸಲ್ಲಿಸಲಿ."
ಕಾರಣಾಂತರಗಳಿಂದ ಪತ್ನಿ ಹಾಗೆ ಮಾಡಲಿಲ್ಲ. ಕೆಲವೇ ತಿಂಗಳ ನಂತರ ಪತಿ, ಪತ್ನಿಯರು ತಿರುಪತಿಯಿಂದ ವಾಪಸಾಗುತ್ತಿದ್ದಾಗ ಪತ್ನಿ ಚಲಾಯಿಸುತ್ತಿದ್ದ ಕಾರು ಬೆಂಗಳೂರಿನ ಫ್ಲೈ ಓವರ್ ನ ಮೇಲಿನಿಂದ ಕೆಳಗೆ ಬಿದ್ದು ಪತಿ ತತ್ ಕ್ಷಣ, ಮತ್ತು ಪತ್ನಿ ಕೆಲದಿನಗಳ ಬಳಿಕ ನಿಧನ ಹೊಂದಿದರು.
ಇನ್ನೊಂದು ತಮಾಷೆಯ ಸಂಗತಿ:- ಶೇರುಮಾರುಕಟ್ಟೆಯ ಆಟಗಾರರೊಬ್ಬರು ಸಹ ಇಲ್ಲಿಗೆ ಟಿಪ್ಸ್ ಪಡೆಯಲು ಬರುತ್ತಾರಂತೆ ! :-))))

Submitted by ಗಣೇಶ Thu, 10/24/2013 - 23:34

In reply to by Shreekar

>> ಅಳುವ ನಾಯಿಯ ನೈಜ ಕತೆ..
-ನಮ್ಮ ಮನೆಯಲ್ಲಿ ಕೆಲಸಕ್ಕಿದ್ದ ಅಜ್ಜಿ ಒಬ್ಬರು "ಯಾರೋ ಮಹಾಪುರುಷರನ್ನ ಕರಕೊಂಡು ಹೋಗಲು ಯಮ ಬರುತ್ತಿದ್ದಾನೆ" ಅಂತ ನಾಯಿ ವಿಚಿತ್ರ ದನಿಯಲ್ಲಿ ಅಳುವಾಗ ಹೇಳಿದ್ದರು. ಕೇಳಿದಾಗ ನಾಯಿಗಳಿಗೆ ಯಮ ಕಾಣಿಸುವನು ಅಂದಿದ್ದರು!
>>ನಮ್ಮಮ್ಮ ನಮ್ಮ ಬಾಲ್ಯದಲ್ಲಿ ನಮಗೆ ಹೇಳುತ್ತಿದ್ದ ಮಾತು ನೆನಪಿಗೆ ಬಂತು -- ಕೆಟ್ಟದ್ದನ್ನು ಆಡಬಾರದು....
-ಶ್ರೀಕರ್‌ಜಿ, ವೈರಿಗೂ ನಾನು ಕೆಟ್ಟದ್ದನ್ನು ಹೇಳುತ್ತಿರಲಿಲ್ಲ. ಸಹಿಸಲಾಗದಷ್ಟು ತೊಂದರೆ ಆದರೆ- "ದೇವರು ನೋಡಿಕೊಳ್ಳುವನು" ಎನ್ನುತ್ತಿದ್ದೆ. ಅದನ್ನೂ ತಿದ್ದಿದ ತಂದೆಯವರು "ದೇವರು ಆತನಿಗೆ ಒಳ್ಳೆಯ ಬುದ್ಧಿ ಕೊಡಲಿ ಅನ್ನು" ಅಂದಿದ್ದರು.

Submitted by venkatb83 Thu, 10/24/2013 - 15:17

ಶ್ರೀಕರ್ ಸರ್ . ನಿಮ್ಮಿಂದ ಬಹು ದಿನಗಳ ನಂತರ ಒಂದು ಬರಹ ..!! ನಿಮ್ಮ ಬೇರೆಯವರ ಬರಹಗಳ ಬಗೆಗಿನ ಸಕ್ರಿಯ ಪ್ರತಿಕ್ರಿಯೆ ಮಾತ್ರ ಆಗಾಗ ಓದುತ್ತಿದ್ದೆ ...
ಪ್ರೇಮ ಶೇಖರ್ ಅವರು ವಿಜಯವಾಣಿಯಲ್ಲಿ ಬರೆಯುವ ಜಗದಗಲ ಅಂಕಣ ಬರಹಗಳನ್ನು ನಾ ಓದುತ್ತಿರುವೆ .. ಹಾಗೆಯೇ ತುಷಾರ ಮಾಸಿಕದಲ್ಲಿ ಭಾರತದ ನೆರೆಹೊರೆಯ ದೇಶಗಳು ಮಾಲಿಕೆಯನ್ನು ಬಹಳ ಸೊಗಸಾಗಿ ಮಹತ್ವದ ಮಾಹಿತಿಗಳೊಂದಿಗೆ ಬರೆಯುತ್ತಿರುವರು ..
ನಿನ್ನೆಯಸ್ತೆ ಅವರ ಆ ತುಷಾರ ಮಾಲಿಕ ಬರಹ ಪಾಕಿಸ್ತಾನದ ಬಗ್ಗೆ ಓದಿದೆ ..
ಹಾಗೆಯೆ ಅವರ ಬ್ಲಾಗ್ ಸಹಾ ಫಾಲೋ ಮಾಡುತಿರುವೆ ..
ಶುಭವಾಗಲಿ
\।/

Submitted by Shreekar Thu, 10/24/2013 - 16:34

In reply to by venkatb83

ಶ್ರೀ ಏಳು ಗುಡ್ಡದ ಅಯ್ಯನವರಿಗೆ ನಮಸ್ಕಾರಗಳು.
ಸಂಪದದಲ್ಲಿ ನಿಮ್ಮ ಹೆಸರು ಬದಲಾವಣೆ ಬಹಳ ಹಿಡಿಸಿತು.
ನಿಮ್ಮ ಓದಿನ ಹರಹು, ವಿಸ್ತಾರಗಳನ್ನು ತಿಳಿದು ತುಂಬಾ ಸಂತೋಷವಾಯಿತು.
ಪ್ರೊ। ಪ್ರೇಮಶೇಖರರು ಸಂಪದದಲ್ಲೂ ಬರೆಯುತ್ತಿದ್ದರು. ಯಾಕೋ ನಿಲ್ಲಿಸಿದ್ದಾರೆ.
ಏಳುಗುಡ್ಡದ ಬಾಲಾಜಿಯ ಶ್ರೀ ರಕ್ಷೆ ನಿಮ್ಮ ಮೇಲೆ ಸದಾ ಇರಲಿ.

Submitted by makara Thu, 10/24/2013 - 18:18

@ಪಾರ್ಥ ಸರ್ ಮತ್ತು @ಶ್ರೀಕರ್‌ಜಿ,
ಸತ್ಯವಂತನ ಮಾತು ಯಾವಾಗಲೂ ಸತ್ಯವೇ ಆಗುತ್ತವೆ. ಒಂದು ವೇಳೆ ಅವನ ಬಾಯಲ್ಲಿ ತಪ್ಪು ಮಾತು ಬಂದರೆ ಅದೂ ಸತ್ಯವಾಗುತ್ತದೆ. ಇದನ್ನು ಹೇಳುತ್ತಿರುವುದು ನಾನಲ್ಲ. ಇದನ್ನು ಮಹರ್ಷಿ ಪತಂಜಲಿಯೇ ತನ್ನ ಯೋಗಸೂತ್ರದಲ್ಲಿ ಹೇಳಿದ್ದಾನೆ. ಇದಕ್ಕೆ ಒಂದು ಅತ್ಯುತ್ತಮ ಉದಾಹರಣೆ ಎಂದರೆ ಬೆಂಗಳೂರಿನಲ್ಲಿ ಶ್ರೀಯುತ ಎಚ್.ಡಿ. ದೇವಗೌಡರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಅವರ ಅಧ್ಯಕ್ಷತೆಯಲ್ಲಿ ಸತ್ಯಸಾಯಿ ಬಾಬಾ ಅವರ ಒಂದು ಕಾರ್ಯಕ್ರಮವಿತ್ತು. ಅದರಲ್ಲಿ ಎರಡು ಮೂರು ಬಾರಿ ಸತ್ಯಸಾಯಿಯವರು ದೇವೇಗೌಡರನ್ನು ಮುಖ್ಯಮಂತ್ರಿ ಎಂದು ಸಂಭೋದಿಸುವುದರ ಬದಲು ಅಚಾತುರ್ಯದಿಂದ ಪ್ರಧಾನ ಮಂತ್ರಿಗಳೇ ಎಂದು ಸಂಭೋದಿಸಿದರು. ಅದಾಗಿ ಕೆಲವೇ ತಿಂಗಳುಗಳಲ್ಲಿ ದೇವೇಗೌಡರು ಪ್ರಧಾನ ಮಂತ್ರಿಯಾಗಿದ್ದು ಈಗ ಇತಿಹಾಸ.
ವಂದನೆಗಳೊಂದಿಗೆ,ಶ್ರೀಧರ್ ಬಂಡ್ರಿ

Submitted by Shreekar Thu, 10/24/2013 - 20:40

In reply to by makara

ಶ್ರೀ ಶ್ರೀಧರ್ ಜೀ,
".... ಸತ್ಯವಂತನ ಮಾತು ಯಾವಾಗಲೂ ಸತ್ಯವೇ ಆಗುತ್ತವೆ. ಒಂದು ವೇಳೆ ಅವನ ಬಾಯಲ್ಲಿ ತಪ್ಪು ಮಾತು ಬಂದರೆ ಅದೂ ಸತ್ಯವಾಗುತ್ತದೆ. ....."
ಒಳ್ಳೆಯ ಉದಾಹರಣೆ ಕೊಟ್ಟಿದ್ದೇರಿ. ಕ್ರತಜ್ಞತೆಗಳು.
ನೀವು ಹೇಳಿದ್ದನ್ನೇ ನನ್ನ ಹಳೆಯ ಬರಹೊಂದು ಪೋಸ್ಟ್ ನಲ್ಲಿ ಬರೆದಿದ್ದೆ.
..ವಾಕ್ ಸಿದ್ಧಿ ಸಾಧಿಸಬೇಕೆ? ಇಲ್ಲಿದೆ ಸಾಧನೋಪಾಯhttp://sampada.net/%E0%B2%B5%E0%B2%BE%E0%B2%95%E0%B3%8D-%E0%B2%B8%E0%B2%...
ಕೊನೆಯ ಪಂಚ್ ಲೈನ್ ಕೂಡಾ ಓದಿ . :-))))

Submitted by nageshamysore Thu, 10/24/2013 - 18:39

ನನಗೊಬ್ಬ ಎಂಬಿಏ / ಐಐಟಿ ಹಿನ್ನಲೆಯ ಮಹಾನ್ ವಾಗ್ಮಿ ಬಾಸ್ ಇದ್ದರು. ಅವರಿಗೆ ಕಂಪನಿಯ , ವ್ಯಕ್ತಿಗಳ, ಮತ್ತೆಲ್ಲಾ ತರದ ಆಗುಹೋಗುಗಳ ಕುರಿತು 'ಭವಿಷ್ಯ' ನುಡಿವ ಖಯಾಲಿ; ಕೆಲವು ವಾರ / ತಿಂಗಳ ನಂತರ ಕೆಲವು ಅದರಲ್ಲಿ ನಿಜವಾದಾಗ, ಅದರ ಕುರಿತು ಅರ್ಧಗಂಟೆ ಭಾಷಣ, ಕಾಲರ್ ಮೇಲೆತ್ತಿಕೊಂಡು 'ನೊಡಿದೆಯಾ? ನಾನು ಹೇಳಿರಲಿಲ್ಲವಾ?!' ಮುಂತಾಗಿ ಪೋಸ್ ಕೋಡುವುದು ಸಾಧಾರಣ ನಡೆಯುತ್ತಿದ್ದ ದೃಶ್ಯ. ತಮಾಷೆಯೆಂದರೆ, ಅವರು ಊಹಿಸಿದ್ದರಲ್ಲಿ ಅರ್ಧಕ್ಕರ್ಧ ನಿಜವಾಗುತ್ತಲೆ ಇರಲಿಲ್ಲ. ಆ ಕುರಿತು ಬಾಯೆ ಬಿಡದೆ, ಬರಿ ನಿಜವಾದವುಗಳ ಉವಾಚ ಮಾತ್ರ ಸಾಗಿರುತ್ತಿತ್ತು! ತಿಂಗಳುಗಟ್ಟಲೆ ಹಿಂದಿನದೆಲ್ಲ ಯಾರು ನಿಖರವಾಗಿ ನೆನಪಿಡುತ್ತಾರೆ? ತಮಗಿದ್ದ ವಾಕ್ಚಾತುರ್ಯದಿಂದ ಏನನ್ನಾದರೂ ನಂಬಿಸಬಲ್ಲ ಸಾಮರ್ಥ್ಯವಿದ್ದ ಆತ, ಮಾಡುತ್ತಿದ್ದುದು ನಿಜಕ್ಕೂ ಬುದ್ದಿವಂತಿಕೆಯ ಊಹೆ ಮಾತ್ರ. 50:50 ನಿಜವಾಗುವ ಸಾಧ್ಯತೆ ಹೇಗೂ ಇದ್ದೇ ಇರುತ್ತದೆ; ಬರಿ ನಿಜವಾದುದ್ದನ್ನು ಎತ್ತಿ ಆಡಿದರೆ ಸಾಕಲ್ಲ..ಬಾಸ್ ಆದ ಕಾರಣ, ನಿಜವಾಗದ ಕೇಸುಗಳನ್ನು ಗೊತ್ತಿದ್ದರೂ ಎತ್ತಿ ಆಡುವಂತಿಲ್ಲವಲ್ಲ!
ಇದು ಭವಿಷ್ಯವಾಣಿಯ ಮತ್ತೊಂದು ತರದ ಆಧುನಿಕ ಮುಖ :-)

Submitted by ಗಣೇಶ Thu, 10/24/2013 - 23:12

ಶ್ರೀಕರ್‌ಜಿ,
ಕಾಲೇಜು ದಿನಗಳಲ್ಲಿ ನಾವು ಕೆಲ ಮಿತ್ರರು "ಪ್ಲಾಂಚೆಟ್" ಮೂಲಕ ಸ್ಪಿರಿಟ್ ಕರೆಯುವುದನ್ನು ಪರೀಕ್ಷಿಸಲು ಮಾಡಿದ್ದೆವು. ಹುಟ್ಟಿದ ದಿನ, ಸ್ಥಳ ಇತ್ಯಾದಿ ಸಿಂಪ್‌ಲ್ ಪ್ರಶ್ನೆಗಳನ್ನು ಕೇಳಿ, ಉತ್ತರ ಸರಿಯಾಗಿದ್ದಾಗ ಆಶ್ಚರ್ಯ ಪಟ್ಟರೂ, ಕೈ ಇಟ್ಟಿರುವವರಲ್ಲಿ ಯಾರಿಗೋ ಒಬ್ಬರಿಗೆ ಗೊತ್ತಿದ್ದು ಸರಿಯಾಗಿರಬಹುದು ಅಂದುಕೊಂಡೆವು. ನಾವು ಯಾರೂ ಬಲ ಹಾಕದಿದ್ದರೂ, ಗ್ಲಾಸ್ ವೇಗವಾಗಿ ಮೂವ್ ಆಗಲು ಪ್ರಾರಂಭಿಸಿದಾಗ ಸ್ಪಿರಿಟ್ ಇರುವುದು ಖಾತ್ರಿಯಾಯಿತು. ಹೆಚ್ಚಿನ ಪರೀಕ್ಷೆಗೆ ಮುಂದಾಗದೇ ಗೌರವಯುತವಾಗಿ ಅದನ್ನು ಹಿಂದೆ ಕಳುಹಿಸಿದೆವು.

Submitted by Shreekar Fri, 10/25/2013 - 22:15

In reply to by ಗಣೇಶ

ಗಣೇಶಣ್ಣಾ,
ಕಾಲೇಜು ಮುಗಿಸಿದ ಮೇಲೆ ಪ್ಲಾಂಚೆಟ್ ಪ್ರಯೋಗ ಬಿಟ್ಟು ಬಿಟ್ಟಿರಾ?
ಪ್ರೇತಾತ್ಮಗಳ ಜೊತೆ ಸಂಭಾಷಣೆ ಬೇಡವೆನಿಸಿತೇ? :-)))
ಪ್ಲಾಂಚೆಟ್ ನಲ್ಲಿ ದೊರಕಿದ ಎಲ್ಲ ಉತ್ತರಗಳೂ ನಿಜವಿರುವುದಿಲ್ಲ ಎಂದು ನನ್ನ ಅಭಿಪ್ರಾಯ.

Submitted by ಗಣೇಶ Fri, 10/25/2013 - 00:02

>>ಎರಡನೇ ಮಾಧ್ಯಮ: ಜನ್ಮದಿನಾಂಕ ಮತ್ತು ಸಮಯ.
ಜ್ಯೋತಿಷ್ಯದಲ್ಲಿ ನನಗೆ ನಂಬಿಕೆ ಇರಲಿಲ್ಲ. ದೇವರ ಭಕ್ತಿನೂ ಅಷ್ಟಕಷ್ಟೇ ಇದ್ದ ಕಾಲ. ನನ್ನ ತಾಯಿಗೆ ತುಂಬಾ ನಂಬಿಕೆ. ಬೆಂಗಳೂರಲ್ಲಿ ಕೆಲಸ ಸಿಕ್ಕಿ ತಾಯಿಗೆ ತಿಳಿಸಿದಾಗ "ಪಕ್ಕದಲ್ಲಿ ಕಬ್ಬಿಣದ ಕೆಲಸದ ಅಂಗಡಿ ಇದೆಯಾ?" ಎಂದು ವಿಚಾರಿಸಿದರು. "ಇಲ್ಲಾ" ಎಂದಿದ್ದೆ. "ಜ್ಯೋತಿಷ್ಯರು ಹೇಳಿದ್ರು" ಅಂದಾಗ ಹಾಸ್ಯ ಮಾಡಿದ್ದೆ. ಮಾರನೇ ದಿನ ಹೋಗಿ ನೋಡಿದಾಗ ಕಬ್ಬಿಣದ ಗಾಡ್ರೆಜ್, ಕಪಾಟು ಇತ್ಯಾದಿ ತಯಾರಿಸಿ ಬೇರೆ ಕಡೆ ಮಾರಾಟ ಮಾಡುವ ಹೆಸರಿಲ್ಲದ ಅಂಗಡಿ ಹಿಂಬದಿಯಲ್ಲೇ ಇತ್ತು. ಈಗ ಅದು ಇಲ್ಲವಾದರೂ ಒಂದಲ್ಲ ಒಂದು ಕಬ್ಬಿಣದ ಕೆಲಸದ ಅಂಗಡಿ ಅಕ್ಕಪಕ್ಕದಲ್ಲಿ ಇಂದಿನವರೆಗೂ ಇದ್ದೇ ಇದೆ! (ಸಪ್ತಗಿರಿವಾಸಿಗೆ ಕ್ಲೂ ೩೦೧ :) )

Submitted by ಗಣೇಶ Fri, 10/25/2013 - 00:03

>>ಎರಡನೇ ಮಾಧ್ಯಮ: ಜನ್ಮದಿನಾಂಕ ಮತ್ತು ಸಮಯ.
ಜ್ಯೋತಿಷ್ಯದಲ್ಲಿ ನನಗೆ ನಂಬಿಕೆ ಇರಲಿಲ್ಲ. ದೇವರ ಭಕ್ತಿನೂ ಅಷ್ಟಕಷ್ಟೇ ಇದ್ದ ಕಾಲ. ನನ್ನ ತಾಯಿಗೆ ತುಂಬಾ ನಂಬಿಕೆ. ಬೆಂಗಳೂರಲ್ಲಿ ಕೆಲಸ ಸಿಕ್ಕಿ ತಾಯಿಗೆ ತಿಳಿಸಿದಾಗ "ಪಕ್ಕದಲ್ಲಿ ಕಬ್ಬಿಣದ ಕೆಲಸದ ಅಂಗಡಿ ಇದೆಯಾ?" ಎಂದು ವಿಚಾರಿಸಿದರು. "ಇಲ್ಲಾ" ಎಂದಿದ್ದೆ. "ಜ್ಯೋತಿಷ್ಯರು ಹೇಳಿದ್ರು" ಅಂದಾಗ ಹಾಸ್ಯ ಮಾಡಿದ್ದೆ. ಮಾರನೇ ದಿನ ಹೋಗಿ ನೋಡಿದಾಗ ಕಬ್ಬಿಣದ ಗಾಡ್ರೆಜ್, ಕಪಾಟು ಇತ್ಯಾದಿ ತಯಾರಿಸಿ ಬೇರೆ ಕಡೆ ಮಾರಾಟ ಮಾಡುವ ಹೆಸರಿಲ್ಲದ ಅಂಗಡಿ ಹಿಂಬದಿಯಲ್ಲೇ ಇತ್ತು. ಈಗ ಅದು ಇಲ್ಲವಾದರೂ ಒಂದಲ್ಲ ಒಂದು ಕಬ್ಬಿಣದ ಕೆಲಸದ ಅಂಗಡಿ ಅಕ್ಕಪಕ್ಕದಲ್ಲಿ ಇಂದಿನವರೆಗೂ ಇದ್ದೇ ಇದೆ! (ಸಪ್ತಗಿರಿವಾಸಿಗೆ ಕ್ಲೂ ೩೦೧ :) )

Submitted by partha1059 Fri, 10/25/2013 - 07:56

In reply to by ಗಣೇಶ

ನಿಮ್ಮ ಕತೆ ಓದುವಾಗ‌ ಮತ್ತೊಂದು ನೆನಪಿಗೆ ಬಂದಿತು ! :‍)
ನಾನಾಗ‌ ಪಿಯೂ ನಮ್ಮ ತಂದೆ ಕುಣಿಗಲ್ ಹತ್ತಿರದ‌ ಹಳ್ಳಿಯೊಂದರಲ್ಲಿ ಹೈಸ್ಕೂಲ್ ಹೆಡ್ ಮಾಸ್ಟರ್ ನಾನು ಆಗಾಗ‌ ತುಮಕೂರಿನಿಂದ‌ ಅಲ್ಲಿಗೆ ಹೋಗುತ್ತಿದ್ದೆ, ನಾವಿದ್ದ ಪಕ್ಕದ‌ ಮನೆಯಲ್ಲಿ ಭವಿಷ್ಯ ಹೇಳುವರೊಬ್ಬರಿದ್ದರು , ಪ್ರಸಿದ್ದರೇನಲ್ಲ ಬಿಡಿ, ಸುತ್ತಲ‌ ಹಳ್ಳಿಯವರೆಲ್ಲ ಅವರಲ್ಲಿಗೆ ಬರುತ್ತಿದ್ದರು , ಅವರಿಗೆ ಎರಡು ಕಣ್ಣು ಕಾಣಿಸುತ್ತಿರಲಿಲ್ಲ ಕುರುಡರು. ಬೆಳಗಿನ ಹೊತ್ತು ಪುರುಸತ್ತಿನಲ್ಲಿದ್ದಾಗ‌ ಅವರು ತಮ್ಮ ಜೀವನದಲ್ಲಿ ಹೇಳಿದ‌ ಭವಿಶ್ಷದ‌ ಕೆಲವು ಪ್ರಸಂಗ ತಿಳಿಸುತ್ತ ಇದ್ದರು. ಒಮ್ಮೆ ನಮ್ಮ ತಾಯಿ ಅವರಿಗೆ ಕೇಳಿದರು, ಇವನು ಮುಂದೆ ಕಾಲೇಜ್ ನಲ್ಲಿ ಮೇಷ್ಟರಾಗಬೇಕು ಅಂತ‌ ಆಸೆ ಬೀಳ್ತಾನೆ ಆಗ್ತಾನ‌ ? . ಅವರು ಅದೇನು ಲೆಕ್ಕಹಾಕಿದರೊ ಗೊತ್ತಿಲ್ಲ ಹೇಳಿದರು
"ಇಲ್ಲ ಇವನು ಆ ಕೆಲಸ‌ ಮಾಡಲ್ಲ , ಇವನು ಟೆಕ್ನಿಕಲ್ ಕಡೆಗೆ ಕೆಲಸಕ್ಕೆ ಹೋಗ್ತಾನೆ ಯಂತ್ರಗಳ‌ ನಡುವೆ" .....
ಅವರ‌ ಮಾತು ನಿಜವಿತ್ತು, ಸುಮಾರು ಏಳುವರ್ಷದ‌ ನಂತರ‌ ನಾನು ಕೆಲಸಕ್ಕೆ ಸೇರಿದೆ, ಕಾಲೇಜ್ ಲೆಕ್ಚರರ್ ಆಗುವ‌ ನನ್ನ ಆಸೆ ಈಡೇರಲೆ ಇಲ್ಲ.