ನೀನಿಲ್ಲದಿರುವಾಗ

ನೀನಿಲ್ಲದಿರುವಾಗ

ನೀನಿಲ್ಲದಿರುವಾಗ
ಬೆಳದಿಂಗಳ ಬೆಳಕಿಲ್ಲ
ಆ ಚಂದ್ರನ ತಂಪಿಲ್ಲ
ಮುತ್ತು ಚೆಲ್ಲುವ ಮಾತಿಲ್ಲ
ಕಿಲ ಕಿಲ ನಗೆಯಿಲ್ಲ

ನೀನಿಲ್ಲದಿರುವಾಗ
ಮೊಗ್ಗು ಅರಳುವದಿಲ್ಲ
ಭಾವ ಹಿಗ್ಗುವದಿಲ್ಲ
ನಮ್ಮ ಮನ ಗರಿಬಿಚ್ಚಿ
ಹಾರುವದಿಲ್ಲ

ನೀನಿಲ್ಲದಿರುವಾಗ
ಆ ಮಾತಿನ ಮಿಂಚಿಲ್ಲ
ಕೊಳಲು ನುಡಿಯುವದಿಲ್ಲ
ನವಿಲು ಕುಣಿಯುವದಿಲ್ಲ
ಹಕ್ಕಿ ತಾ ರೆಕ್ಕೆ ಬಿಚ್ಚಿ
ಹಾರುವದಿಲ್ಲ

ನೀನಿಲ್ಲದಿರುವಾಗ
ನನ್ನತನದ ಗೆಳತನವಿಲ್ಲ
ಆ ಮಣ್ಣಿನ ವಾಸನೆಯಿಲ್ಲ
ನನ್ನವರೆಂಬ ಮೋಹಯಿಲ್ಲ
ತನ್ನವರೆಂಬ ಸಲುಗೆಯಿಲ್ಲ

ನೀನಿಲ್ಲದಿರುವಾಗ
ಇಲ್ಲಿ ಮಾತಿಲ್ಲ
ಅಲ್ಲಿ ಮಿಂಚಿಲ್ಲ
ಮೋಡ ತಾ ಮಳೆಯಾಗಿ
ಸುರಿಯುವದಿಲ್ಲ

ನೀನು ಹೋಗದೆ ವಿಧಿಯಿಲ್ಲ
ನಮಗೆ ಮನದಲ್ಲಿ ಗೆಲುವಿಲ್ಲ
ನೀನು ನಮ್ಮೊಂದಿಗೆ ಇರುವದಿಲ್ಲ
ಆದರೂ ನಾವೆಂದೂ
ನಿನ್ನ ಮರೆಯುವದಿಲ್ಲ.

*********************
ಎಮ್.ಡಿ.ಎನ್.ಪ್ರಭಾಕರ್
******************

Rating
No votes yet

Comments