ನೀವಾಗದಿರಿ ಪ್ರೀತಿಯ ಪಹರೆದಾರರು ....
ಒಂದು ಬಿನ್ನಹ
ಪ್ರೀತಿಸುವ ಹೃದಯಗಳ
ನಡುವೆ ಗೋಡೆ ಕಟ್ಟದಿರಿ
ನೀವಾಗದಿರಿ ಪ್ರೀತಿಯ ಪಹರೆದಾರರು ....
ಸ್ವಚ್ಚಂದ ಹಕ್ಕಿಗಳ
ರೆಕ್ಕೆ ಪುಕ್ಕ ಕತ್ತರಿಸಿ
ಕಸಿಯದಿರಿ ಸ್ವಾತಂತ್ರವ. .
ಬದುಕುವ ಛಲ ಹೊತ್ತ
ಎಳೆಯ ಮನಗಳ ಚಿವುಟಿ
ಪಾಪದಲ್ಲಿ ಆಗದಿರಿ ಭಾಗೀದಾರರು ...
ಸೋತು ಬಸವಳಿದು
ನೊಂದಾಗ ಕ್ರೂರ
ನಗೆ ನಕ್ಕು ನರಕದ
ಕೂಪಕ್ಕೆ ನೂಕದಿರಿ
ಅದು ನಿಮ್ಮದೇ ಕೂಸು ಎಂಬುದ ಮರೆಯದಿರಿ ......
ಕಮಲ ಬೆಲಗೂರ್
Rating
Comments
ಉ: ನೀವಾಗದಿರಿ ಪ್ರೀತಿಯ ಪಹರೆದಾರರು ....
In reply to ಉ: ನೀವಾಗದಿರಿ ಪ್ರೀತಿಯ ಪಹರೆದಾರರು .... by venkatb83
ಉ: ನೀವಾಗದಿರಿ ಪ್ರೀತಿಯ ಪಹರೆದಾರರು ....