ನೀವಾಗದಿರಿ ಪ್ರೀತಿಯ ಪಹರೆದಾರರು ....

ನೀವಾಗದಿರಿ ಪ್ರೀತಿಯ ಪಹರೆದಾರರು ....

 ಒಂದು ಬಿನ್ನಹ

ಪ್ರೀತಿಸುವ ಹೃದಯಗಳ


ನಡುವೆ ಗೋಡೆ ಕಟ್ಟದಿರಿ

 
ನೀವಾಗದಿರಿ ಪ್ರೀತಿಯ ಪಹರೆದಾರರು ....



ಸ್ವಚ್ಚಂದ ಹಕ್ಕಿಗಳ


ರೆಕ್ಕೆ ಪುಕ್ಕ ಕತ್ತರಿಸಿ


ಕಸಿಯದಿರಿ  ಸ್ವಾತಂತ್ರವ. .

 



ಬದುಕುವ ಛಲ ಹೊತ್ತ


ಎಳೆಯ ಮನಗಳ ಚಿವುಟಿ


ಪಾಪದಲ್ಲಿ ಆಗದಿರಿ ಭಾಗೀದಾರರು ...

 



ಸೋತು ಬಸವಳಿದು


ನೊಂದಾಗ ಕ್ರೂರ


ನಗೆ ನಕ್ಕು ನರಕದ


ಕೂಪಕ್ಕೆ  ನೂಕದಿರಿ


ಅದು ನಿಮ್ಮದೇ ಕೂಸು ಎಂಬುದ ಮರೆಯದಿರಿ ......

ಕಮಲ ಬೆಲಗೂರ್

Rating
No votes yet

Comments