ಪಟಾಕಿ!

ಪಟಾಕಿ!

ಸುಮಾರು ೨೪ ವರುಷಗಳ ಹಿಂದೆ ೧೯೮೫ರಲ್ಲಿ ರಾಜೀವ ಗಾಂಧಿ ಪ್ರಧಾನಿಯಾಗಿ ತನ್ನ ಸಚಿವ ಸಂಪುಟ ರಚಿಸಿದಾಗ ಈ ಕವನ ಬರೆದಿದ್ದೆ.

ಸಖೀ,
ನಮ್ಮ ರಾಜೀವ
ಈತ
ಬಹಳ ಚಾಲಾಕಿ,
ಸದ್ದಿಲ್ಲದೆ
ಸಿಡಿಯುವುದು
ಇವನ ಪಟಾಕಿ.
ಮುದಿ ಮಂತ್ರಿಗಳ
ಈತ ಮನೆಗಟ್ಟಿಸಲಾರ,
ಹೊರಿಸಿದ್ದಾನೆ
ಯುವ ಮಂತ್ರಿಗಳ
ಮೇಲೇ ಎಲ್ಲಾ ಭಾರ.
ಕ್ಯಾಬಿನೆಟ್
ಮಂತ್ರಿಗಳಾಗಿದ್ದೂ
ಅವರಿಗೆ ಏನೂ
ಇಲ್ಲ ಬೆಲೆ.
ಏಕೆಂದರೆ,
ಈ ಸಹಾಯಕ
ಮಂತ್ರಿಗಳದ್ದೆಲ್ಲಾ
ಭಾರೀ ತಲೆ.
ಸಿಂಧಿಯಾ -
ನೆಹರೂ - (ಅರುಣ್)
ಸಿಂಗ್ - (ಅರುಣ್)
ಟೈಟ್ಲರ್ -
ಪೈಲಟ್.
ಸೇರಲಿದ್ದಾರೆ
ಇವರು
ವರುಷಗಳಲಿ
ಕೇಂದ್ರದ
ಕ್ಯಾಬಿನೆಟ್!
*-*-*-*-*-*

ಈಗ ರಾಹುಲ ಗಾಂಧಿಯ ಮೇಲ್ವಿಚಾರಣೆಯಲ್ಲಿ ಕೇಂದ್ರ ಸಂಪುಟ ಅಸ್ಥಿತ್ವಕ್ಕೆ ಬಂದಿರುವಾಗ ಚರಿತ್ರೆ ಮರುಕಳಿಸುತ್ತಿದೆ ಅಂತ ಅನಿಸಿತು. ಹಾಗಾಗಿ ಈ ಕವನವನ್ನು ಸಂಪದಿಗರೊಂದಿಗೆ ಹಂಚಿಕೊಳ್ಳುವ ಮನಸ್ಸಾಯಿತು.

Rating
No votes yet

Comments