ಪರಿಶುದ್ದವಾದ ಪ್ರೀತಿ

ಪರಿಶುದ್ದವಾದ ಪ್ರೀತಿ

ಪ್ರಪಂಚವು ಮಾನವೀಯ ಮೌಲ್ಯಗಳಿಂದ ಕೂಡಿದ್ದು, ಅದರ ಕೊಂಡಿಯು ನಿಷ್ಕಲ್ಮಶವಾದ ಸ್ನೇಹ ಮತ್ತು ಪ್ರೀತಿಯಿಂದ ಬೇಸದಿದೆ. ಅಮ್ಮ ಮಡಿಲಲ್ಲಿ ಬೆಳೆಯುವ ಮಗುವು ಕಪ್ಪಗಿದ್ದರು, ಬೆಳ್ಳಗಿದ್ದರು ತಾಯಿಯ ಪ್ರೀತಿಯು ಎಲ್ಲವನ್ನು ಕಡೆಗಣಿಸಿ, ತನ್ನ ಒಡಲನ್ನು ಹಂಚಿಕೊಂಡು ಹೊರಬಂದ ಮಗುವಿಗೆ ಅಮೃತತ್ವದ ಹಾಲನ್ನು ಹುಣಿಸುವಾಗ ತಾಯಿಯ ಆನಂದಕ್ಕೆ ಎಲ್ಲೆಯೇ ಇಲ್ಲ. ಆ ಮಗುವಿಗೆ ಹೊರ ಪ್ರಪಂಚಕ್ಕೆ ಕಾಲಿಡುವಾಗ ಹೊಸ ದಿಕ್ಕನ್ನು ತೋರಿಸುವ ತಾಯಿಯ ಪ್ರೀತಿ. ಈದರ ಮುಂದೆ ಬೇರ ಎಲ್ಲ ಪ್ರೀತಿಯು ನಶ್ವರವೆನಿಸುತ್ತದೆ.

ಸಂತ ವೆಲನ್ಟಿನ್ ಪ್ರಪಂಚಕ್ಕೆ ಪ್ರೀತಿಯ ಹೊಸ ಷಕೆಯನ್ನು ಪ್ರಾರಂಭಿಸಿದನು, ಅವನ ಪ್ರೀತಿಯ ವೈಶಾಲ್ಯತೆಯನ್ನು ಅರ್ಥ ಮಾಡಿಕೊಳ್ಳದ ಯುವಜನತೆ ದಾರಿ ತಪ್ಪುತ್ತಿದ್ದಾರೆ ಎನಿಸುವುದಿಲ್ಲವೇ???

ಪ್ರೀತಿಯೆಂದರೆ...ಅಪ್ಪ ಅಮ್ಮನಿಗೆ ಮಕ್ಕಳು ತೋರಿಸುವ ಪ್ರೀತಿ, ಅಣ್ಣ ತಂಗಿಗೆ ತೋರಿಸುವ ಪ್ರೀತಿ, ತಮ್ಮ ಅಕ್ಕನಿಗೆ ತೋರಿಸುವ ಪ್ರೀತಿ, ತಾತ ಅಜ್ಜಿ ಮೊಮ್ಮಕ್ಕಳಿಗೆ ತೋರಿಸುವ ಪ್ರೀತಿ. ಸ್ನೇಹಿತರು ಸ್ನೇಹಿತರಿಗೆ ತೋರಿಸುವ ಪ್ರೀತಿ. ಒಬ್ಬ ಕೈಲಾಗದ ಮನುಷ್ಯನಿಗೆ ಸಹಾಯ ಹಸ್ತ ತೋರುವ ಪ್ರೀತಿ, ಬಡಬಗ್ಗರಿಗೆ ದಯೆಯನ್ನು ತೋರಿಸುವ ಪ್ರೀತಿ.....ಹೀಗೆ ನಾನ ರೀತಿಯಲ್ಲಿ ಪ್ರೀತಿಯನ್ನು ವಾಕ್ಯನಿಸಬಹುದು.

ಪರಿಶುದ್ದವಾದ ಪ್ರೀತಿ: ಯಾರಿಗೂ ಯಾವ ಕೆಡುಕನ್ನು ಬಯಸದೆ, ಯಾರಿಂದನು ಸಹಾಯವನ್ನು ವ್ಯಕ್ತ ಬಡಿಸದೆ ಮತ್ತು ಸಹಾಯವನಿತ್ತು. ಸಾದಾ ಒಳ್ಳೆಯಾ ಚಿಂತನೆ ಮಾಡುತ್ತಾ ಪ್ರೀತಿಸುವವರ ಏಳಿಗೆಯನ್ನು ಬಯಸುತ್ತ ಭಗವತ್ ಪ್ರೀತಿಯನ್ನು ಬಯಸುವ ಪರಿಶುದ್ದ ಹೃದಯವನ್ನು ಹೊಂದಿರುವವವನೆ ಸಂತ ವೆಲನ್ಟಿನ್. ಯಾವ ಸ್ಥಿತಿಯಲ್ಲೂ ತಮ್ಮ ಹಿತಾಸಕ್ತಿಯನ್ನು ಬೇರೆಯವರ ಮೇಲೆ ಹೊದಿಸದೆ, ಪ್ರೀತಿಸುವವರ ಇಚ್ಚಯಂತೆ, ನಡೆಯಂತೆ ಮಾರ್ಪಾಡಾಗುವ ಸ್ವಾಭಾವಉಳ್ಳ ಮನಸ್ಸೇ ಸಂತ ವೆಲನ್ಟಿನ್.

ಆದರೆ ಇಂದು Position, Physic, Popularity ನೋಡಿ ಪ್ರೀತಿಸಿ color blindnessಗೆ ಒಳಗಾಗಿರುವ ಬಾಗ್ಯವಂತರಿಗೆ ನಿಜವಾದ ಪ್ರೀತಿಯ ಅರ್ಥ ತಿಳಿದಿರುವುದೇ???. ಪ್ರೀತಿಸುವವರ ದಿನದಂದು ಯುವ ಪ್ರೇಮಿಗಳು ಎಂಬ ಪಟ್ಟ ಕಟ್ಟಿಕೊಂಡು ಪಬ್ಬ್ , ಕ್ಲಬ್ಬು, ಬೀಚು ಎಂದು ಸುತ್ತುವ ಯುವಜನರನ್ನು ಸಂತ ವೆಲನ್ಟಿನ್ ನೋಡಿದರೆ, ನಾಚಿಕೆ ಪಟ್ಟು ತಲೆ ತಗ್ಗಿಸಿಯಾನು. ನಮ್ಮ ಕನ್ನಡ ಬೆಂಗಳೂರಿನಲ್ಲಿ ಇಂದು ಅಲ್ಪಸ್ವಲ್ಪವಾದರೂ ಉಳಿದಿದೆ ಎಂದರೆ ಕನ್ನಡ ಅಭಿಮಾನಿಗಳು, ಆಟೋಚಾಲಕರ, ಕೂಲಿಕಾರ್ಮಿಕರ,ಬಡ ರೈತರ ಅಧಮ್ಯ ಪ್ರೀತಿಯೇ ಕನ್ನಡವನ್ನು ಕಾಪಾಡುತ್ತ ಬರುತ್ತಿರುವುದು.

ಒಂದು ಮಾತು ಸತ್ಯ ಈ valentines day, ಕೇವಲ ಯುವಜನಾಂಗಕ್ಕೆ ಎಂದರೆ ಸಂತ ವೆಲನ್ಟಿನ್ಗೆ ಅವಮಾನವದೀತು. ಯಾವ ರಾಗ ದ್ವೇಷಗಳಿಲ್ಲದೆ ಎಲ್ಲರು ಎಲ್ಲರನ್ನು ಪ್ರೀತಿಸಬೇಕು ಎಂಬ ಮಹೋನ್ನತ ಇಚ್ಛೆಯನ್ನು ಈ ದಿನದಂದು ಜಗತ್ತಿಗೆ ಸಾರಿದನು.

Valentine day ಯನ್ನು February 14 (Roman Catholic Church) and July 6 (Eastern Orthodox Church) ದಿನಗಳಂದು ಆಚರಣೆ ಮಾಡುತ್ತಾರೆ, ಅವರಲ್ಲೇ ಗೊಂದಲವಿರುವಾಗ ನಮಗೆ ಯಾವುದು ಸಾರಿ ನಮದೋ ಮತ್ತು ಅವರದೋ ನೀವೇ ತೀರ್ಮಾನಿಸಿ???

ನಮ್ಮ ಸಂಸ್ಕೃತಿಯನ್ನು ಮರೆತಿರುವ ಜನಕ್ಕೆ, ನಮ್ಮ ದೇಶದ ಒಳ್ಳೆಯಾ ವಿಷಯಗಳನ್ನು ಚಲನಚಿತ್ರಣ ಗೊಳಿಸದೆ,ಬಾಲಿವುಡ್ನಲ್ಲಿ ಅರಬ್ಬರ ಸಂಗೀತದ ಅಬ್ಬರ, ಪಾಶ್ಚಿಮಾತ್ಯ ಜಗತ್ತಿನ ಸ್ವೆಚ್ಚಾಚಾರದ ವಿಷಯಾಸಕ್ತಿಗಳನ್ನು ಬಹುಮುಖಿಯಾಗಿಸಿ, ಇದು ಒಂದು ದುಡ್ಡು ಮಾಡುವ ವ್ಯವಾಹರಿಕ ತಂತ್ರವಾಗಿದೆ. ಇನ್ನು ಹೀರೋ ಹೀರೋಯಿನ್ ಗಳೆನಿಸುವ ಮಾಹಾನುಭಾವರು, ಸಮಾಜಕ್ಕೆ ಕೆಟ್ಟ ಪರಿಣಾಮ ಬಿರುವ ಸನ್ನಿವೇಶಗಳಿಗೆ ತಲೆದೂಗಿ ತಮ್ಮ ವಯಕ್ತಿಕ ಬದುಕನ್ನೇ ಬೀದಿಪಾಲು ಮಾಡಿಕೊಂಡಿದ್ದಾರೆ. ಇಂತವರನ್ನು follow ಮಾಡುವ ನಮ್ಮವರಿಗೆ ನಿಜವಾದ ಮೌಲ್ಯಗಳು ತಿಳಿದಿವಿಯೇ?? ನಮ್ಮ ರಾಜ್ಕುಮಾರ್ ಚಲನಚಿತ್ರಗಳಂತೆ ಒಳ್ಳೆ ಪರಿಣಾಮಬೀರುವ ಚಿತ್ರಗಳೆಲ್ಲಿವೆ ಇಂದು???

ಇನ್ನು ಬಂಡವಾಳಶಾಯಿ ಬಹುರಾಷ್ಟ್ರೀಯ ಕಂಪೆನಿಗಳು ಈ ದಿನವನ್ನು ತಮ್ಮ ಹಣ ಮಾಡುವ ಕೊಳ್ಳುಬಾಕತನಕ್ಕೆ ಸಾವಿರಾರು ಯುವಕ ಯುವತಿಯರು ಬಲಿಯಾಗುತಿದ್ದಾರೆ ಎಂದರೆ ನನ್ನ ಮನಸ್ಸಿಗೆ ಖೇದ ಉಂಟಾಗುತ್ತದೆ. ಅಮೇರಿಕಾ ಒಂದರಲ್ಲೇ ಸುಮಾರು ೨ ಬಿಲಿಯನ್ $ ಗ್ರೀಟಿಂಗ್ಸ್ನ ವಹಿವಾಟು ನಡೆಯುತ್ತದೆ, ಇನ್ನು ಪ್ರಪಂಚದ್ಯಾಂತ ಲೆಕ್ಕ ಹಾಕಿ ಇದು ನಮ್ಮ ನಮಗೆ ಸೋಜಿಗವೇನಿಸುವುದಿಲ್ಲವೇ.

ನಿಜವಾದ ಸತ್ಯವನ್ನು ನಿಮ್ಮ ಮುಂದೆ ಇಟ್ಟಿದೇನೆ. ಅರಿಯುವ ಮನಸ್ಸು, ಅರ್ಥಮಾಡಿಕೊಳ್ಳುವ ಹೃದಯವಿದ್ದಲ್ಲಿ ಜಗತ್ತು ಪವನವಾದಿತು!!!

Rating
No votes yet

Comments