ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 36

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 36

 
335)ಮೂಲ ಹಾಡು : ಇಸ್ ಪ್ಯಾರ್ ಸೇ ಮೇರಿ ತರಫ ನ ದೇಖೋ

ನನ್ನ ಅನುವಾದ:
ಇಷ್ಟು ಪ್ರೀತಿಯಿಂದ ನೀನು
ನನ್ನ ಕಡೆಗೆ ನೋಡ್ಬೇಡ
ಪ್ರೀತಿ ಆಗಿ ಬಿಟ್ಟಿತು
ಈ ಪ್ರೀತಿ ಆಗಿ ಬಿಟ್ರೆ
ನಿನ್ನ ಹೃದಯ ಚೂರು ಆಗಿಬಿಟ್ಟೀತು

336)ಮೂಲ ಹಾಡು :  ದಿಲ್ ತೋ ಖೋಯಾ ಹೈ ತೂ  ಜರಾ  ಬತಾದೇ

ನನ್ನ ಅನುವಾದ:
ಗಂ : ಹೃದಯ ಕಳೆದು ಹೋಗಿದೆ ಇಲ್ಲೆ ಎಲ್ಲಿಯೋ
ನೀನು ಬಲ್ಲೆಯಾ?
ಹೆ : ನಿನ್ನ ಹೃದಯ ಸಡಿಲು ಬಹಳ
ನಾನೇನು ಬಲ್ಲೆನು?

337)ಮೂಲ ಹಾಡು : ಪಿಂಜರೇ ಕೇ ಪಂಛೀ ರೇ

ನನ್ನ ಅನುವಾದ:
ಪಂಜರದಾ ಗಿಣಿಯೇ
ನಿನ್ನ ನೋವನು ಬಲ್ಲವರಾರು
ಹೊರಗೆ ನೋಡಲು ಸುಮ್ಮನೆ ಇರುವಿ
ಒಳಗೊಳಗೇ ನೀ ಅಳುವಿ
ನಿನ್ನ ನೋವನು ಬಲ್ಲವರಾರು

338)ಮೂಲ ಹಾಡು : (ಪಹಲಾ ನಶಾ ) ಹಾಡಿನಲ್ಲಿ 'ಉಡತಾ ಹೀ ಫಿರೂ' ದಿಂದ

ನನ್ನ ಅನುವಾದ:
ಹಾರುತ ಸಾಗಲೇ
ಈ ಗಾಳಿಯಲ್ಲಿ ನಾನು
ಉಯ್ಯಾಲೆ ಆಡಲೇ
ಈ ಮೋಡಗಳಲಿ ನಾನು
ಆಗಸ ಭೂಮಿಯ
ಒಂದಾಗಿ ಮಾಡಲೇ
ಹೇಳಿ ಗೆಳೆಯರೇ
ನಾ ಏನು ಮಾಡಲಿ

339)ಮೂಲ ಹಾಡು : ಹಮ್ ತುಮ್ ಸೆ ಜುದಾ ಹೋಕೆ

ನನ್ನ ಅನುವಾದ:
ನಾ ಅಗಲಿ ನಿನ್ನನ್ನು
ಸಾಯುವೆ ಅತ್ತು ಅತ್ತು

340)ಮೂಲ ಹಾಡು : ಜಿನ್ಹೆ ಹಂ ಭೂಲನಾ ಚಾಹೇ

ನನ್ನ ಅನುವಾದ:
ಯಾರನ್ನ ನಾನು ಮರೆಯಬಯಸುವೆನು
ಆಕೆ ಮತ್ತೆ ಮತ್ತೆ ನೆನಪಾಗ್ತಾಳೆ

341)ಮೂಲ ಹಾಡು : ಮೈ ಪ್ಯಾರ್ ಕಾ ರಾಹೀ ಹೂಂ

ನನ್ನ ಅನುವಾದ:
ಗ:- ನಾ ಪ್ರೇಮಪಯಣಿಗನು
ನಿನ ಹೆರಳ ನೆರಳಲ್ಲಿ ಕೊಂಚ ಕಾಲ ನಿಲ್ಲುವೆನು

ಹೆ:-  ನೀ ಪ್ರೇಮಪಯಣಿಗನು
ಯಾವಾಗ ಹೊರಡುವಿಯೋ

342)ಮೂಲ ಹಾಡು : ಬೋಲ ರೀ ಕಟಪುತಲೀ

ನನ್ನ ಅನುವಾದ:
ಗ :  ಹೇಳು,  ಸೂತ್ರದ ಗೊಂಬೆ, ನಿನ್ನ
       ಸೂತ್ರ ಯಾರಲ್ಲಿದೆ
        ಹೇಳು ನಿಜವ
         ಯಾರಿಗಾಗಿ ನರ್ತಿಸುವೆ
ಹೆ: ನಾನು,  ಸೂತ್ರದ ಗೊಂಬೆ,
ಸೂತ್ರ ಬಂಧಿಸಿದೆ ಪ್ರಿಯನೊಡನೆ
ನಾನು ನರ್ತಿಸುವೆ ಪ್ರಿಯನಿಗೋಸ್ಕರ

343)ಮೂಲ ಹಾಡು : ದಿಲ್ ಪ್ರಕಾರೇ ಆರೇ ಆರೆ ಆರೆ

ನನ್ನ ಅನುವಾದ:
ಹೃದಯ ಕರೆದಿದೆ
ಬಾರೆ ಬಾರೆ ಬಾರೆ

344)ಮೂಲ ಹಾಡು : ಚಾಹಾ ತೋ ಬಹುತ

ನನ್ನ ಅನುವಾದ:
ಬಯಸಿದೆ ಬಹಳ ನಿನ್ನ ಬಯಸದೆ ಇರಲು
ಬಯಕೆಯ ಮುಂದೆ ಏನೂ ಸಾಗದು

Rating
Average: 4 (1 vote)