ಪುಸ್ತಕನಿಧಿ - 21. ಕೃಷ್ಣಾನಂದ ಕಾಮತ್
(ಈ ಪುಸ್ತಕವನ್ನು ಓದಲು /ಇಳಿಸಿಕೊಳ್ಳಲು pustaka.sanchaya.net ತಾಣದಲ್ಲಿ 'ಕೃಷ್ಣಾನಂದ ಕಾಮತ್' ಎಂದು ಬರೆದು ಹುಡುಕಿ.
ಈ ಪುಸ್ತಕವನ್ನು ಓದುವಾಗ ನಮ್ಮ ಬದುಕಿಗೆ ಮಾರ್ಗದರ್ಶಕವಾಗಬಹುದಾದ ಅನೇಕ ವಿಚಾರಗಳು ದೊರೆತವು . ಅವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಕೃಷ್ಣಾನಂದ ಲಕ್ಷ್ಮಣ ಕಾಮತ್ ಅವರು ತಮಗೆ ಇಷ್ಟವಾದದ್ದನ್ನು ಮಾಡಿದರು, ಓದಿದರು, ಬರೆದರು, ಬದುಕಿದರು.ಬಯಸಿದಂತೆ ಬದುಕಿದ ಅವಧೂತರು. ನಿಜವಾದ ಅರ್ಥದಲ್ಲಿ ಜೀವಿಸಿದರು.
... ಗೌರವಕ್ಕೆ ಅರ್ಹರಾಗಿದ್ದರೂ ಅದನ್ನು ಪಡೆಯದೇ ಹೋದವರು ಕಾಮತರು. ಕಾಮತರು ಈ ಬಗ್ಗೆ ತಲೆಕೆಡಿಸಿಕೊ೦ಡವರೇ ಅಲ್ಲ. ಅವರಿಗೆ ತಾವಾಯಿತು ತಮ್ಮ ಕೆಲಸವಾಯಿತು. ಜನಸಂಪರ್ಕ ಕಡಿಮೆ. ಜನರೊಡನೆ ಮಾತನಾಡಿದ್ದು ಕಡಿಮೆ. ಹರಟೆ ಹೊಡೆಯುವ ಜಾಯಮಾನದವರಲ್ಲ.
ಪ್ರತಿಯೊಂದು ವಿಷಯದಲ್ಲಿಯೂ ಆಸಕ್ತಿಯಿತ್ತು. ಅವರಲ್ಲಿ ಮಗುವಿನಲ್ಲಿರ ಬೇಕಾದ ಮುಗ್ಧತೆಯೂ ಇತ್ತು. ತಿಳಿದುಕೊಳ್ಳಬೇಕೆಂಬ ಕುತೂಹಲವಿತ್ತು.
ಹಾಗಾಗಿ ಅವರು ವಿಭಿನ್ನ ವಿಷಯಗಳ ಮೇಲೆ ಅನೇಕ ಪುಸ್ತಕಗಳನ್ನು ಬರೆದರು. ಪ್ರವಾಸ ಕಥನ, ಕಲೆ, ಪರಿಸರ, ಪ್ರಬ೦ಧ, ಕಾದ೦ಬರಿ, ಪ್ರಾಣಿ-ಪಕ್ಷಿಗಳ 22 ಪುಸ್ತಕಗಳು.
"ಹೊಟ್ಟೆ ಹೊರೆಯುವುದಕ್ಕಾಗಿ ಶಿಕ್ಷಣ ಎ೦ದು ಹೇಳುವುದು ತಪ್ಪು ಗ್ರಹಿಕೆ. ವಿದ್ಯಾಭ್ಯಾಸದ ಮೂಲ ಉದ್ದೇಶ ಮಾನವನ ಮಾನಸಿಕ ವಿಕಾಸ. ಮಾನವನಿಗೆ ಸುಖ-ಸಂಪತ್ತುಗಳಿಗಿಂತ ಆತ್ಮಗೌರವ, ದೇಶಾಭಿಮಾನಗಳು ಹೆಚ್ಚಿನ ನೆಮ್ಮದಿ ಕೊಡಬಲ್ಲವು.
ಕೃಷ್ಣಾನಂದ ಕಾಮತ್ ಮತ್ತು ಜ್ಯೋತ್ಸ್ನಾ ಕಾಮತರ ಜೋಡಿ ಅನುರೂಪ ದಾಂಪತ್ಯಕ್ಕೊಂದು ಮಾದರಿ.
ನಮ್ಮಲ್ಲಿ ಹುದುಗಿಕೊ೦ಡಿರುವ ಕ್ರಿಯಾಶಕ್ತಿ ಹೊರಹೊಮಬೇಕಾದರೆ ಅದಕ್ಕೆ ಪ್ರೋತ್ಸಾಹ ಅತ್ಯವಶ್ಯ.
ಜೀವನದಲ್ಲಿ ಅತೀವ ಶ್ರದ್ಧೆ ಮತ್ತು ಆಸಕ್ತಿಯನ್ನು ಬೆಳೆಸಿಕೊ೦ಡು ಅದರ ಆಳವನ್ನು ಅರಿಯಲು ಸದಾಕಾಲ ಹವಣಿಸುತ್ತಿದ್ದ ಮನಸ್ಸು ಅವರದ್ದಾಗಿತ್ತು.
ಸರಳವಾದ ಉಡುಗೆ, ಸರಳವಾದ ನಡವಳಿಕೆ ಅವರ ಹೆಗ್ಗುರುತು.
ಮಿತಭಾಷಿಯಾಗಿ, ಕಾಡುಹರಟೆಗಳಿಂದ ಮೈಲಿ ದೂರವಿದ್ದು, ಸದಾ ಏನಾದರೂ ಕೆಲಸವನ್ನು ಹಚ್ಚಿಕೊಂಡು ಇರುತ್ತಿದ್ದರು. ತನ್ನ ಸುತ್ತಮುತ್ತಲಿನ ಆಗುಹೋಗುಗಳನ್ನು, ಜನರ ಚಲನವಲನಗಳನ್ನು ಸೂಕ್ಷ ವಾಗಿ ಗಮನಿಸುತ್ತಿದ್ದರು. ದೊಡ್ಡಸ್ತಿಕೆ ಎನ್ನುವುದು ಅವರ ಹತ್ತಿರವೂ ಸುಳಿಯುತ್ತಿರಲಿಲ್ಲ.
ಸಾಮಾನ್ಕರಿಂದ ಅತೀ ಸಾಮಾನ್ಕರವರೆಗೆ ಎಲ್ಲರೊಂದಿಗೆ ಸಮಾನ ರೀತಿಯಲ್ಲಿ ಬೆರೆಯುವ ಸ್ವಭಾವ. ಅವರ ಪ್ರಕಾರ ಕಷ್ಟದಲ್ಲಿ ಇರುವವರಿಗೆ ನೆರವಾಗುವುದು ಮಾನವಧರ್ಮ. “ನಮ್ಮ ಸುಖ-ಸಂಪತ್ತುಗಳನ್ನು ಅಭಾಗಿಗಳೊಂದಿಗೆ ಹಂಚಿಕೊ೦ಂಡಾಗಲೇ ಜೀವನಕ್ಕೆ ಒ೦ದು ಅರ್ಥ ಬರುತ್ತದೆ” ದಾನಶೀಲತೆಯನ್ನು ವೈಭವೀಕರಿಸದೆ, ಅದು ನಿತ್ಯದ ಸಂಗತಿಗಳಲ್ಲಿ ಒಂದು ಎಂಬ ನಡವಳಿಕೆಯನ್ನು ರೂಢಿಸಿಕೊಂಡಿದ್ದ ಕೃಷ್ಣಾನಂದರು ಈ ಪ್ರವೃತ್ತಿ ತನ್ನಲ್ಲಿ ಸದಾಕಾಲ ಉಳಿದುಕೊಂಡಿರಲಿ, ನಿರ್ಭಾಗ್ಯರ ಹೃದಯದಲ್ಲಿ ನಮ್ಮಂಥವರಿಗೆ ಸ್ಥಾನವಿರುತ್ತಲ್ಲ ಅಷ್ಟು ಸಾಕು ಎನ್ನುತ್ತಿದ್ದ ಸಹೃದಯಿ.
ಐಷಾರಾಮಿ ಬದುಕು ಹಾಗೂ ಕೊಳ್ಳುಬಾಕ ಸಂಸ್ಕೃತಿಯ ಕುರಿತು ಕಿ೦ಚಿತ್ತೂ ಒಲವು ತೋರದ ಕೃಷ್ಣಾನಂದರು ಯಾರಿಂದಲೂ, ಯಾವುದರಿಂದಲೂ ಏನನ್ನೂ ಅಪೇಕ್ಷಿಸಿದವರಲ್ಲ. ನಿರೀಕ್ಷೆ ಮನುಷ್ಯರಲ್ಲಿ ನಿರಾಶೆಯನ್ನು ಹುಟ್ಟಿಸುತ್ತದೆ. ಎಂಬ ಮಾತನ್ನು ಬದುಕಿಗೆ ಅನ್ನಯಿಸಿಕೊಂಡಿದ್ದರಿ೦ದ ಬದುಕನ್ನು. ಸಹನೀಯಗೊಳಿಸುವುದು ಅವರಿಗೆ: ಸಾಧ್ಯವಾಯಿತು.
ಕೈಗೊಳ್ಳುವ ಕೆಲಸ ಕಾರ್ಯಗಳ ಉದ್ದೇಶ ಹಾಗೂ ಫಲಿತಾಂಶ ಮುಖ್ಯವೆಂದು ಪರಿಗಣಿಸಿದ್ದರಿ೦ದ ಲಾಭನಷ್ಟಗಳ ಲೆಕ್ಕಾಚಾರದ ಕಡೆಗೆ ಅವರ ಗಮನ ಹರಿಯಲಿಲ್ಲ.