ಪುಸ್ತಕನಿಧಿ: - ಡಿ ವಿ ಜಿ ಅವರ e-ಪುಸ್ತಕ 'ಪುರುಷ ಸೂಕ್ತ'

ಪುಸ್ತಕನಿಧಿ: - ಡಿ ವಿ ಜಿ ಅವರ e-ಪುಸ್ತಕ 'ಪುರುಷ ಸೂಕ್ತ'

 

 

ಈ ಎರಡು ಸಂಗತಿಗಳನ್ನು ನೀವು ಎಲ್ಲಿಯಾದರೂ ಓದಿರಬಹುದು.
1) ಅವನಿಗೆ ಸಾವಿರ ತಲೆಗಳು, ಸಾವಿರ ಕಣ್ಣುಗಳು, ಸಾವಿರ ಕೈಗಳು, ಸಾವಿರ  ಕಾಲುಗಳು  ಇತ್ಯಾದಿ
2) ಅವನ ಮುಖದಿಂದ ಬ್ರಾಹ್ಮಣರೂ,  ಅವನ ತೋಳುಗಳಿಂದ ಕ್ಷತ್ರಿಯರೂ  ಅವನ ತೊಡೆಗಳಿಂದ ವೈಶ್ಯರೂ  ಅವನ ಅಡಿಗಳಿಂದ ಶೂದ್ರರೂ  ಹುಟ್ಟಿದರು.   

ಇವು ಪುರುಷಸೂಕ್ತದಲ್ಲಿ ಬರುತ್ತವೆ.  ಇತ್ತೀಚೆಗೆ ಗೂಗಲ್ - e-ಪುಸ್ತಕಗಳಲ್ಲಿ ಡಿ ವಿ ಜಿ ಅವರು ಬರೆದ ಈ ಪುಸ್ತಕವು ಗಮನ ಸೆಳೆಯಿತು. ಗೂಗಲ್ ನ e-ಪುಸ್ತಕಗಳ ಅನುಕೂಲ ವೆಂದರೆ ಖರೀದಿಸುವ ಮೊದಲೇ ಕೆಲವು ಪುಟಗಳನ್ನು sample ಎ೦ದು ಓದುವ ಸೌಲಭ್ಯ ಇದೆ. ಹಾಗೆ ಓದಿ ಪುಸ್ತಕಕ್ಕಾಗಿ ಹಣ ಕೊಡುವ ಬಗ್ಗೆ ನಿರ್ಧರಿಸಬಹುದು.

ಮುನ್ನುಡಿಯು ಹೇಳುವಂತೆ ಇದು ಪರತತ್ವದ ಕುರಿತಾಗಿದೆ. 
ಆರಂಭಿಕ ಪುಟಗಳು ಅನೇಕ ವಿಚಾರಗಳನ್ನು ತುಂಬ ತಿಳಿಯಾಗಿ ತಿಳಿಸುತ್ತವೆ. 

 

೧)  ಅರಿವಿನ ಒರೆಗಲ್ಲು ಬರವಣಿಗೆ.

೨) ಈ ಗ್ರಂಥಕ್ಕೆ ಯಾರು ಅಧಿಕಾರಿಗಳು?

೩)  ನಮ್ಮ ಬದುಕಿನಲ್ಲಿ ಮೂರು ವಸ್ತುಗಳು ಮುಖ್ಯ -೧) 'ನಾನು' ಎಂದು ಕೊಳ್ಳುವ ಜೀವ  ೨) ಈ ಜೀವದ ಅನುಭವಕ್ಕೆ ಬರುವ ಪ್ರಪಂಚ ೩) ಇವೆರಡಕ್ಕೂ ಮೂಲಕಾರಣವಾಗಿ ನಿಯಾಮಕವಾಗಿ  ವಿಶೇಷ ವಸ್ತುವೋ ಶಕ್ತಿಯೋ ಇದ್ದಲ್ಲಿ ಆ ಪರವಸ್ತು , ಈಶ್ವರ .  ಈ ಮೂರರ ಸ್ವರೂಪವನ್ನು ಮತ್ತು  ಪರಸ್ಪರ ಸಂಬಂಧವನ್ನು ತಿಳಿದುಕೊಳ್ಳದೆ ಚೆನ್ನಾಗಿ ಬಾಳುವ ಬಗೆಯನ್ನು ಮನುಷ್ಯ ತಿಳಿಯನು. (ಹೌದೆ?) 

೪) ಜೀವ, ಜಗತ್ತು , ಈಶ್ವರ ಇವುಗಳ ಒಟ್ಟಿನ ಅರಿವೇ ತತ್ವಜ್ಞಾನ. ಪುರುಷ ಸೂಕ್ತವು ಆ ಈಶ್ವರ ಶಕ್ತಿಯ ಬಗೆಗೆ ತಿಳಿಸಿ ಕೊಡುತ್ತದೆ.

೫) ಜ್ಞಾನವನ್ನು ಸಂಪಾದಿಸಬೇಕೆಂಬ ಆಸೆಯೇ ಜಿಜ್ಞಾಸೆ.  ಇದಕ್ಕಾಗಿ ಪ್ರಯತ್ನ ಪಡುವವನೇ ಜಿಜ್ಞಾಸು. 

೬) ತತ್ಪಾಧ್ಯಯನಕ್ಕೆ ಬೇಕಾದ ಸಂಗತಿಗಳು ನಾಲ್ಕು - ೧) ಈ ಲೋಕದಲ್ಲಿ ಶಾಶ್ವತವಾದದ್ದು ಯಾವುದು ? ನಾಶವಾಗಿ ಹೋಗುವುದು ಯಾವುದು ? ಎಂಬ ವಿವೇಚನೆ, ವಿವೇಕ. ೨) ತಾನು, ತನ್ನದು,  ತನ್ನ ಸೌಖ್ಯ, ತನ್ನ ಲಾಭ, ತನ್ನ ಹೆಸರು ಎಂಬ ಸ್ವಾರ್ಥಗಳನ್ನು ಹದ್ದಿನಲ್ಲಿರಿಸುವುದು. ೩) ತನಗೆ ಬಂದ ಕಷ್ಟ ನಿಷ್ಠುರಗಳನ್ನು ಸಹಿಸಿ, ಕೋಪ,ತಾಪ,ಮದ,ಮತ್ಸರಗಳನ್ನು ತಡೆದು ಮನಸ್ಸನ್ನು ಸಮಾಧಾನ ಸ್ಥಿತಿಯಲ್ಲಿ ಇರಿಸಿಕೊಳ್ಳುವುದು ೪) ವೇದ ಶಾಸ್ತ್ರಗಳನ್ನು ಶೃದ್ಧೆ ನಂಬಿಕೆಗಳಿಂದ ಕೇಳುವುದು, ಅಧ್ಯಯನ ಮಾಡುವುದು - ಇದೇ ಮೋಕ್ಷದ ಅಪೇಕ್ಷೆ. ಅದಕ್ಕಾಗಿ ಬಹುಕಾಲದ ಸಾಧನೆ - ಅದೇ ತಪಸ್ಸು .  
ಇವೆಲ್ಲ ಇಲ್ಲದಿರಲು ಈ ಪುಸ್ತಕ ಅಂಥವರಿಗೆ ನಿಷ್ಪ್ರಯೋಜಕ.

೭) ವೇದಾಧ್ಯಯನಕ್ಕೆ ಅಧಿಕಾರಿಗಳು ಯಾರು ? ಎಲ್ಲರಿಗೂ ವೇದಗಳ ಅಧ್ಯಯನಕ್ಕೆ ಅಧಿಕಾರ ಇಲ್ಲದಿದ್ದರೂ  ಅವುಗಳ ವಿಷಯವನ್ನು ತಾತ್ಪರ್ಯವನ್ನು ತಿಳಿಯಲು ಎಲ್ಲರಿಗೂ ಅಧಿಕಾರ ಇದೆ.

೮) ಪುರುಷ ಸೂಕ್ತವು ಪುರುಷ ಎಂದರೆ ಪರಮಾತ್ಮನನ್ನು ಕುರಿತದ್ದು. ಅದಕ್ಕಾಗಿ ಗಾಯತ್ರಿ ಮಂತ್ರದ ಹಾಗೆ ಮಹತ್ವದ್ದು,  ಇದನ್ನು ಪಾರಾಯಣ ಮಾಡಬೇಕು . ಪಾರಾಯಣ ಎಂದರೆ ಪರಾಯಣತೆ, ಅದೊಂದರಲ್ಲೆ  ನಿಷ್ಠೆ ಹೊಂದಿ ಅರ್ಥದ ಮನನ ಮಾಡುವಿಕೆ.

ಮುಂದೆ ಪುರುಷಸೂಕ್ತದ ತಾತ್ಪರ್ಯವೂ , ಛಾಯಾನುವಾದವೂ ಇದೆ.

ಅತ್ಯಂತ ಸುದ್ದಿ ಮಾಡಿರುವ, ಆರಂಭದಲ್ಲಿ ನಾನು ತಿಳಿಸಿದ 'ಅವನ ಮುಖದಿಂದ ..... ' ಎಂಬುದರ ಬಗ್ಗೆಯೂ ವಿವರವಾದ ಸ್ಪಷ್ಟನೆ ಇದೆ.

ಆದರೆ ನಾವು ಚೆನ್ನಾಗಿ ಬಾಳಿ ಬದುಕಲು  ಸೃಷ್ಟಿಕರ್ತನ ಕುರಿತಾದ ಅಂಥ ತಿಳುವಳಿಕೆಯ ಅಗತ್ಯ ಇಲ್ಲ ಎ೦ದು ಗೌತಮ ಬುದ್ಧನು ಹೇಳಿದ್ದನ್ನೂ ನಾವು ತಿಳಿದಿರಬೇಕು ಅಂತ ನನ್ನ ಅನಿಸಿಕೆ.  

 

 

 

 

 

 

Rating
Average: 5 (6 votes)