ಪುಸ್ತಕನಿಧಿ- ಬರ್ಕ್ ವೈಟ್ ಕಂಡ ಭಾರತ- ಸ್ವಾತಂತ್ರ್ಯದೆಡೆಗೆ ಅರೆಪಯಣ

ಪುಸ್ತಕನಿಧಿ- ಬರ್ಕ್ ವೈಟ್ ಕಂಡ ಭಾರತ- ಸ್ವಾತಂತ್ರ್ಯದೆಡೆಗೆ ಅರೆಪಯಣ

ಚಿತ್ರ

 

ಭಾರತವು ಸ್ವಾತಂತ್ರ್ಯ ಪಡೆಯುವ ಹೊತ್ತಿನಲ್ಲಿ ಭಾರತಕ್ಕೆ ಬಂದ ಫೋಟೋ ಜರ್ನಲಿಸ್ಟ್ ಬರ್ಕ್ ವೈಟ್ ಆ ಸಮಯದಲ್ಲಿ ಭಾರತದಲ್ಲಿ ಕಂಡುದನ್ನು ಫೋಟೋ ತೆಗೆದಳು ಅಷ್ಟೇ ಅಲ್ಲ ಹಾಫ್ ವೇ ಟು ಫ್ರೀಡಂ (ಸ್ವಾತಂತ್ರ್ಯದೆಡೆಗೆ ಅರೆಪಯಣ) ಎಂಬ ಪುಸ್ತಕವನ್ನು ಬರೆದಳು. ಇದನ್ನು ಒಂದು ಸೃಜನಶೀಲ ದಾಖಲೆ ಎಂದು ಪರಿಗಣಿಸಲಾಗುತ್ತದೆ.

 

ಮಹಾತ್ಮಾ ಗಾಂಧಿ , ಜವಾಹರ ಲಾಲ್ ನೆಹರು, ಸರದಾರ್ ಪಟೇಲ್, ಜಿನ್ನಾ, ಅಂದಿನ ಕಾಲದ ಪ್ರಮುಖ ಕೈಗಾರಿಕೋದ್ಯಮಿಗಳಾದ ಟಾಟಾ , ಬಿರ್ಲಾ, ಕಾಶ್ಮೀರದ ಸಿಂಹ ಶೇಖ್ ಅಬ್ದುಲ್ಲಾ ಎಂಥವರು ? ಅವರುಗಳ ಬಗ್ಗೆ ನಮ್ಮ ಪೂರ್ವ ಗ್ರಹಿಕೆಗಳು ಏನೇ ಇರಲಿ, ಅವನ್ನು ಬದಿಗಿಟ್ಟು ಮುಕ್ತ ಮನಸ್ತಿನಿಂದ ಈ ಪುಸ್ತಕವನ್ನು ನಾವು ಓದಬೇಕು. ಆಗ ನೆಹರು ಮತ್ತು ಪಟೇಲರು ಹಾಗೂ ಟಾಟಾ ಮತ್ತು ಬಿರ್ಲಾ ಇವರುಗಳ ನಡುವಣ ಹೋಲಿಕೆ ಮಾಡದಿರಲು ಸಾಧ್ಯವಿಲ್ಲ.

 

 ಆ ಸಮಯದಲ್ಲಿ ಕಾಶ್ಮೀರದಲ್ಲಿನ ಪರಿಸ್ಥಿತಿ ಹೇಗಿತ್ತು, ಕಾಶ್ಮೀರಿಗಳು ಹೇಗೆ ಧರ್ಮಾತೀತರಾಗಿದ್ದರು, ಕಾಶ್ಮೀರ ಸಮಸ್ಯೆಗೆ ಪಾಕಿಸ್ತಾನ ಹೇಗೆ ಕಾರಣ, ಎಂಬುದು ನಮ್ಮ ಅರಿವಿಗೆ ಬರುತ್ತದೆ. ಶೇಖ್ ಅಬ್ದುಲ್ಲಾ ಹೇಗೆ ಧರ್ಮಾತೀತವಾಗಿ ಜನರನ್ನು ಸಂಘಟಿಸಿದರು, ರೈತ ಕಾರ್ಮಿಕ ಬಡವರ ಹಿತಕ್ಕಾಗಿ ಪ್ರಜಾಪ್ರಭುತ್ವದ ಮೂಲಕ ಜನರ ಹಕ್ಕುಗಳಿಗಾಗಿ ಹೋರಾಡಿದರು, ಪಾಕಿಸ್ತಾನದ ಆಕ್ರಮಣದ ವಿರುದ್ಧ ಹೇಗೆ ಕಾಶ್ಮೀರವನ್ನು ಉಳಿಸಿಕೊಂಡರು ಎಂಬುದು ಗಮನಾರ್ಹ. ಅವರು ನಿಜಕ್ಕೂ ಒಬ್ಬ ಇತಿಹಾಸ ಪುರುಷ, ಸ್ವತಂತ್ರ ಭಾರತದ ಮೊದಲನೆಯ ಜನಪ್ರಿಯ ಮುಖ್ಯಮಂತ್ರಿ ಎಂದು ಲೇಖಕಿ ಹೇಳುತ್ತಾರೆ. ಭಾರತ ಉಪಖಂಡದಲ್ಲಿ ಭಾರತಕ್ಕಿಂತ ಮೊದಲು ಲಿಖಿತ ಸಂವಿಧಾನವು ರಚನೆಯಾಗಿದ್ದು ಕಾಶ್ಮೀರದಲ್ಲಿ ಅಂತೆ. ಅದು ಎಲ್ಲರಿಗೂ ಧಾರ್ಮಿಕ ಸ್ವಾತಂತ್ರ್ಯ , ಸಮಾನತೆಯನ್ನು ಕೊಟ್ಟಿತ್ತು.  

 

ಈ ಪುಸ್ತಕದಲ್ಲಿ ರಾಜಮಹಾರಾಜರುಗಳು, ಹಿಂದೂ ಮುಸ್ಲಿಂ ದಂಗೆಗಳು, ಕಾರ್ಮಿಕರು. ಬಾಲ ಕಾರ್ಮಿಕರು ಹಾಗೂ ರೈತರು ಇವರುಗಳ ಪರಿಸ್ಥಿತಿ ಹೇಗಿತ್ತು ಎಂಬ ಸಂಗತಿಗಳು ಸಾಕಷ್ಟು ವಿವರವಾಗಿ ಇವೆ.

 

ಈ ಪುಸ್ತಕವನ್ನು ಕನ್ನಡಕ್ಕೆ ಡಾ. ಕೆ. ಆರ್. ಸಂಧ್ಯಾರೆಡ್ಡಿ ಅನುವಾದಿಸಿದ್ದು ಕನ್ನಡ ಪುಸ್ತಕ ಪ್ರಾಧಿಕಾರವು ಪ್ರಕಟಿಸಿದೆ. ಅವರ ಜಾಲತಾಣದಿಂದ ಪುಸ್ತಕವನ್ನು ತರಿಸಿಕೊಳ್ಳಬಹುದು.

Rating
Average: 4.5 (2 votes)