ಪುಸ್ತಕನಿಧಿ : ಭಿ ಪ. ಕಾಳೆ ಅವರ 'ಯೋಗಾಯೋಗ' ಕಾದಂಬರಿ

ಪುಸ್ತಕನಿಧಿ : ಭಿ ಪ. ಕಾಳೆ ಅವರ 'ಯೋಗಾಯೋಗ' ಕಾದಂಬರಿ

ಏನನ್ನೋ ಹುಡುಕುವಾಗ ಬುಕ್ ಬ್ರಹ್ಮ ವೆಬ್ ತಾಣದಲ್ಲಿ " ಮರಾಠಿ ಲೇಖಕ ನ. ಚಿ. ಕೇಳಕರ್ ಅವರ ಕಾದಂಬರಿಯನ್ನು ಭಿ.ಪ. ಕಾಳೆ ಅವರು ಕನ್ನಡಕ್ಕೆ ಅನುವಾದಿಸಿದ ಕೃತಿಯೇ- ಯೋಗಾಯೋಗ ಅಥವಾ ಕಾಕತಾಳೀಯ ನ್ಯಾಯ. ಜೀವನದ ಅತ್ಯುನ್ನತ ಮೌಲ್ಯಗಳನ್ನು ಪ್ರತಿಪಾದಿಸುವ ಸಾಮಾಜಿಕ ಕಾದಂಬರಿ ಇದಾಗಿದೆ ಎಂದು ಲೇಖಕರು ಪ್ರಸ್ತಾವನೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ. " ಎಂಬ ಮಾಹಿತಿ ಇತ್ತು. ಅದರ pdf ಓದಿ ಎಂದು ಇದ್ದ ಕೊಂಡಿ ಕೆಲಸ ಮಾಡುತ್ತಿರಲಿಲ್ಲ . ಅದನ್ನು ಸ್ವಲ್ಪ ತಿದ್ದಿಕೊಂಡು ನೋಡಿದಾಗ https://archive.org/details/dli.osmania.4265/page/n9/mode/2up ತಾಣದಲ್ಲಿ ಪುಸ್ತಕ ಸಿಕ್ಕು ಬಿಟ್ಟಿತು.

ಕಥೆಯ ಸಾರಾಂಶ ಹೀಗೆ. ಇದು ಬ್ರಿಟಿಷ್ ಕಾಲದ ಕಥೆ. ಜಮೀನ್ದಾರ್ ನ ಮಗನೊಬ್ಬನು ಐಸಿಎಸ್ ಪರೀಕ್ಷೆ ಕಟ್ಟಿ ಫಲಿತಾಂಶದ ಹಾದಿ ನೋಡುತ್ತಿದ್ದಾನೆ. ಒಂದು ಬೆಳಗ್ಗೆ ಪಿಸ್ತೂಲನ್ನು ತೆಗೆದುಕೊಂಡು ಬೇಟಿ ಆಡಲು ಹೋಗಿ ಎರಡು ಪಕ್ಷಿಗಳಿಗೆ ಗುಂಡು ಹೊಡೆಯುವನು. ಆಗ ಒಬ್ಬ ಶಿಷ್ಯನೊಂದಿಗೆ ಅಲ್ಲಿಗೆ ಬಂದ ಸನ್ಯಾಸಿಯು ಅದನ್ನು ಅಕ್ಷೇಪಿಸಿದನು. ನೀನು ಮಾಡಿದ ಈ ಹಿಂಸೆಗೆ ನಿನಗೆ ಇದಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಈ ದಿನವನ್ನು ಮತ್ತು ಈ ವೇಳೆಯನ್ನು ನೆನಪಿಟ್ಟುಕೋ ಎಂದು ಒದರಿದನು. ಜಮೀನ್ದಾರನ ಮಗನು ಮನೆಗೆ ಮರಳಿದ. ಅವತ್ತೇ ಸಂಜೆಗೆ ಆತನು ಐಸಿಎಸ್ ಪಾಸಾದ ಸಂಗತಿಯು ಬಂದು ತಲುಪಿತು. ಆಮೇಲೆ ಕೆಲ ದಿನಗಳ ನಂತರ ಒಂದು ಪತ್ರವು ಅವನನ್ನು ತಲುಪಿತು . ಅದರಲ್ಲಿ ಅವನು ಪ್ರೀತಿಸಿದ್ದ ಮತ್ತು ಮದುವೆಯಾಗಲು ಬಯಸಿದ್ದ ಲಂಡನ್ನಿನ ಹುಡುಗಿ ಅವನು ಆ ಪಕ್ಷಿಗಳಿಗೆ ಗುಂಡು ಹೊಡೆದ ಸಮಯದಲ್ಲಿ ಸತ್ತಿದ್ದಳು. ಇದನ್ನು ಅವನು ಯಾರಿಗೂ ಹೇಳಲಿಲ್ಲ. ಅವನಲ್ಲಿ ಒಂದು ತರಹದ ವೈರಾಗ್ಯ ಉದಯಿಸಿ ಮರುದಿನ ಆ ಸನ್ಯಾಸಿಯನ್ನೂ ಅವನ ಶಿಷ್ಯನನ್ನು ಮನೆಗೆ ಕರೆತಂದು ಇಟ್ಟುಕೊಂಡನು. ಅವನು ತನ್ನ ಸ್ವಭಾವವನ್ನು ಬದಲಿಸಿಕೊಂಡ. ಮೋಸ ಮಾಡುವುದನ್ನು ಮತ್ತು ಕುಡಿಯೋದನ್ನು ಬಿಟ್ಟುಬಿಟ್ಟ. 

ಆದರೆ ಈ ಸನ್ಯಾಸಿ ಮತ್ತು ಅವನ ಶಿಷ್ಯ ಎಂತಹವರು ? ಪೊಲೀಸಿನಲ್ಲಿ ಕೆಲಸ ಮಾಡುತ್ತಿದ್ದ ಇವನ ಸಂಬಂಧಿ ಒಬ್ಬನು ಸಹಜವಾಗಿ ಎಂಬಂತೆ ಇವರ ಮನೆಗೆ ಭೇಟಿ ಕೊಟ್ಟನು. ಮುಂದೆ ನಡೆದುದೇನು ? ಆತನಕ ನಡೆದುದರ ವಿಶ್ಲೇಷಣೆಯೂ ಮುಖ್ಯವೇ . ಅದು ಇಲ್ಲಿದೆ. ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವ ರೀತಿ, ಅವುಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ರೀತಿ ಓದಿ ತಿಳಿಯಲು ಅರ್ಹವಾಗಿದೆ. ಆ ಜಮೀನ್ದಾರನ ಮಗನ ಗುರುಭಕ್ತಿ, ಶೃದ್ಧೆ , ವೈರಾಗ್ಯಗಳು ದೂರವಾದದ್ದು ಹೇಗೆ ಎಂಬುದು ಕುತೂಹಲಕಾರಿಯಾಗಿದೆ.

Rating
Average: 4 (2 votes)