ಪುಸ್ತಕನಿಧಿ : ಮಾರ್ಚ್ 2025ರ ಮಯೂರ ಮಾಸಿಕ ಸಂಚಿಕೆ

ಇದೀಗ ಮಯೂರ ಮಾಸಿಕದ ಮಾರ್ಚ್ 2025ರ ಸಂಚಿಕೆಯನ್ನು ತಿರುವಿ ಹಾಕಿದೆ. ಕೆಲವು ಕಥೆಗಳನ್ನು ಓದಿದೆ. ಕಥೆಗಳನ್ನು ಓದುವುದರ ಲಾಭ ಎಂದರೆ ಬೇರೆಯವರ ಜೀವನದ ಪರಿಸ್ಥಿತಿಯನ್ನು ಅದರ ನೋವಿಲ್ಲದೆ ನಾವು ತಿಳಿದಂತಾಗುತ್ತದೆ.
ಪದ್ದಮ್ಮನ ಮೂಗುತಿ ಎಂಬ ಕತೆಯಲ್ಲಿ ಒಂದು ಸಾವಿನ ಸಂಪೂರ್ಣ ಸಂಗತಿ ಇದೆ. ಹಾಗೆಯೇ ಅಪ್ಪಂದಿರ ದಿನಾಚರಣೆ ಎಂಬ ಕತೆಯಲ್ಲಿ ಟಿವಿ ಕಾರ್ಯಕ್ರಮವೆಂದರೆ ಹಿನ್ನೆಲೆಯಲ್ಲಿ ಒಬ್ಬ ಅಂದುಕೊಳ್ಳುವುದು ಏನೆಂದರೆ 'ಇವರೆಲ್ಲ ನನ್ನಪ್ಪ ಹಾಗೆ ಹೀಗೆ ಎಂದು ಹೋಗಳುತ್ತಿದ್ದಾರೆ. ನನಗೋ ನನ್ನಪ್ಪನು ಹೇಗೆ ಇರಬಾರದು ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದ್ದಾನೆ!'. ಈ ಕತೆಯಲ್ಲೂ ನಮಗೆ ತುಂಬಾ ಅನುಭವ ದಕ್ಕುವುದು.
ಇನ್ನೊಂದು ಕಥೆ 'ಚೌಕಟ್ಟು ಮುರಿದು'. ಇದರಲ್ಲಿ ಸ್ವತಂತ್ರ ವಿಚಾರಧಾರೆಯ ಒಬ್ಬ ಹೆಣ್ಣು ಇದ್ದಾಳೆ. ಅವಳಿಗೆ ಮದುವೆಯಾಗದೆ ತಾಯಿ ಆಗಬೇಕೆಂಬ ಆಸೆ. ಆದರೆ ಆ ಮಗುವಿನ ಜನನಕ್ಕೆ ಕಾರಣವಾದ ಮನುಷ್ಯನ ಜೊತೆ ಯಾವುದೇ ಸಂಪರ್ಕ, ಅವನ ಯಾವುದೇ ನಿಯಂತ್ರಣ ಒಲ್ಲಳು. ಮುಂದೆ? ನೀವೇ ಕತೆಯನ್ನು ಓದಿ.
ಅಂದಹಾಗೆ ಇದು ಮಹಿಳಾ ಸಂಚಿಕೆ.