ಪುಸ್ತಕನಿಧಿ: 20. ಶೌರ್ಯಸಂಜೀವನ ಅಥವಾ ಚಾಲುಕ್ಯ ಸಾಮ್ರಾಟ್

ಪುಸ್ತಕನಿಧಿ: 20. ಶೌರ್ಯಸಂಜೀವನ ಅಥವಾ ಚಾಲುಕ್ಯ ಸಾಮ್ರಾಟ್

ಈ ಐತಿಹಾಸಿಕ ಕಾದಂಬರಿಯನ್ನು ಬರೆದವರು - ರಾಮಚಂದ್ರ. ತ್ರ್ಯಯಂಬಕ. ಕರ್ಪೂರ. ಈ ಕಾದಂಬರಿಯು ವಾಚಕರ ಪುಣ್ಯದಿಂದ ಪೂರ್ಣವಾಯಿತು ಎಂದು ಲೇಖಕರು ಬರೆಯುತ್ತಾರೆ! ಭೂವಡ ಎಂಬ ಚಾಲುಕ್ಯಸಾಮ್ರಾಟನು ಗುರ್ಜರ (ಗುಜರಾತ್) ಪ್ರಾಂತವನ್ನು ಮೇಲಾದ ಧರ್ಮ-ನೀತಿಗಳ ಬೆಂಬಲದಿಂದಲೇ ಗೆದ್ದುದನ್ನು ಈ ಕಾದಂಬರಿ ಹೇಳುತ್ತದೆ. ಇದರ ವಾಚನದಿಂದ ಕನ್ನಡಿಗರಲ್ಲಿ ಸ್ವಾಭಿಮಾನವು ಜಾಗೃತವಾದರೆ ತಾವು ಕೃತಾರ್ಥರಾಗುವುದಾಗಿ ಲೇಖಕರು ಹೇಳುತ್ತಾರೆ.

ಆರಂಭಿಕ ಪುಟಗಳಲ್ಲಿ ಸುಂದರ ಯುವತಿ ಯೊಬ್ಬಳ ಅಪಹರಣ, ರಕ್ಷಣೆಯ ಸಂಗತಿಯಿದೆ. ನಂತರ ಒಬ್ಬ ಗುಜರಾತಿ ಒಬ್ಬ ಮುದಿ ರಾಜನೂ ಅವನ ಚಿಕ್ಕ ವಯಸ್ಸಿನ ರಾಣಿ ವಿಮಲೆಯ ಸಂಗತಿಯಿದೆ. ಈ ರಾಜನ ಪಾವಗಡ ಕೋಟೆಯ ಮೇಲೆ ಚಾಲುಕ್ಯರ ಸಾಮ್ರಾಟನಾದ ಭೂವಡನು ಸಾಮ್ರಾಜ್ಯ ವಿಸ್ತರಣೆಗಾಗಿ ಮುತ್ತಿಗೆ ಹಾಕಿದ ಸಂಗತಿಯೂ ಆ ಎಳೆವಯಸ್ಸಿನ ರಾಣಿಯು ಇವನಲ್ಲಿ ಆಸಕ್ತಳಾಗಿ ತನ್ನ ಗಂಡನ ಅಧೀನದ ಕೋಟೆಯನ್ನು ಭೂವಡನ ವಶಪಡಿಸುವಳು, ಆದರೆ ಅವಳ ಅನೀತಿಗಾಗಿ ಭೂವಡನು ಅವಳನ್ನು ತಿರಸ್ಕರಿಸುವನು. ಈಗ ವಿಮಲೆಯು ಅವನ ನಾಶಕ್ಕಾಗಿ ಯೋಜಿಸುವಳು. ಅದು ಹೇಗೆ? ಅದರಿಂದ ಈ ಭೂವಡನು ಹೀಗೆ ಪಾರಾಗುವನು, ಮತ್ತು ಆರಂಭದಲ್ಲಿದ್ದ ಸುಂದರಿಯ ರಕ್ಷಣೆ ಹೇಗಾಗುವುದು ಎಂಬುದು ಉಳಿದ ಕತೆ. 

ಅಲ್ಲಿನ ಕೆಲವು ಒಳ್ಳೆಯ ಸಾಲುಗಳು: -

ಲೋಕದಲ್ಲಿ ವೀರರಾದವರಿಗೆ ಅನಾಥರನ್ನೂ ನಿರ್ಬಲರನ್ನೂ ರಕ್ಷಿಸುವುದೇ ಶ್ರೇಷ್ಠ ಧರ್ಮವಾಗಿರುವುದು.

ಇಂಥ ಪುಣ್ಯ ಕೆಲಸಕ್ಕೆ ಸಹಾಯ ಮಾಡದಿರುವುದು ಅನುಚಿತ.

ಪರಸ್ತ್ರೀಯನ್ನು ಹತ್ತಿರ ಇರಿಸಿಕೊಳ್ಳುವುದು ಅಪಕೀರ್ತಿಗೆ ಸಾಧನ.

ಈ ಕಾದಂಬರಿಯನ್ನು ಓದಲು ಮತ್ತು ಡೌನ್ ಲೋಡ್ ಮಾಡಿಕೊಳ್ಳಲು pustaka.sanchaya.net ತಾಣದಲ್ಲಿ ಈ ಕಾದಂಬರಿಯ ಹೆಸರು ಬರೆದು ಹುಡುಕಿರಿ.

Rating
Average: 4 (3 votes)