ಪುಸ್ತಕನಿಧಿ: ಸೀತಾ ರಾಮ-ಫ. ಗು. ಹಳಕಟ್ಟಿ ?

ಪುಸ್ತಕನಿಧಿ: ಸೀತಾ ರಾಮ-ಫ. ಗು. ಹಳಕಟ್ಟಿ ?

ಈ ಪುಸ್ತಕವು archive.org ತಾಣದಲ್ಲಿದ್ದು ಇದನ್ನು pustaka.sanchaya.net ಜಾಲತಾಣದಲ್ಲಿ 'ಸೀತಾ ರಾಮ' ಎಂದು ಹುಡುಕುವ ಮೂಲಕ ಪಡೆಯಬಹುದು.

ಇದನ್ನು ಫ.ಗು. ಹಳಕಟ್ಟಿ ಅವರು ಬರೆದಿರಬಹುದು. ಬರೆದಿರಬಹುದು ಅಂತ ಯಾಕೆ ನಾನು ಹೇಳುತ್ತಿದ್ದೇನೆ ಅಂದರೆ ಈ ಪುಸ್ತಕದಲ್ಲಿ ಆ ಬಗ್ಗೆ ಮಾಹಿತಿ ಇಲ್ಲ. ಆದರೆ pustaka.sanchaya.net ತಾಣದಲ್ಲಿ ಲೇಖಕ ಫ. ಗು. ಹಳಕಟ್ಟಿ ಅಂತ ಒಂದು ಕಡೆ ಹೇಳಿದ್ದಾರೆ ಮತ್ತು  ಹಳಕಟ್ಟೆಯವರ ಹೆಸರು ನಾವು ಕೇಳಿದ್ದೀವಿ.

 

ಇರಲಿ. ಈ ಪುಸ್ತಕದ ವಿಶೇಷವೇನು ಅದನ್ನು ನೋಡೋಣ. ಇಲ್ಲಿ ರಾಮಾಯಣದ ಕಥೆ ಇದ್ದು ರಾವಣನನ್ನು ಕೊಂದು ರಾಮಚಂದ್ರನು ಸೀತೆಯೊಂದಿಗೆ ಬಂದು ಭರತನಿಂದ ಅಧಿಕಾರ ವಹಿಸಿಕೊಂಡ ತನಕ ಅಷ್ಟೇ ಇದೆ. ರಾಮಾಯಣದ ಕಥೆ - ಸೀತಾ ಪರಿತ್ಯಾಗ ಇದರಲ್ಲಿ ಇಲ್ಲ.

 

ಪುಸ್ತಕವು ನೂರೇ ಪುಟಗಳಷ್ಟು ಇದೆ.  ಹನುಮಂತನು ಹಾರಿದ ಸಂಗತಿ ಒಂದೇ ಕಡೆ ಇದೆ.  ಅಲ್ಲಲ್ಲಿ ರಾಮಾಯಣವು ಪದ್ಯ ರೂಪದಲ್ಲಿದೆ. ಇದು ಯಾರು ಬರೆದದ್ದು ಅಂತ ಗೊತ್ತಾಗುವುದಿಲ್ಲ. 

 

ಇಲ್ಲಿ ಅಹಲ್ಯಳು ಕಲ್ಲಾಗಿ  ಬಿದ್ದಿರುವುದಿಲ್ಲ. ಆದರೆ  ಕಲ್ಲಿನಂತೆ ಇರುತ್ತಾಳೆ. ಹಾಗೆ ಕಲ್ಲಿನಂತೆ ಇರಲು ಅವಳಿಗೆ ಶಾಪವನ್ನು ಕೊಡಲಾಗಿದೆ.

 

Rating
Average: 4 (1 vote)