ಪುಸ್ತಕನಿಧಿ - 12.ಕುಸುಮಾಕರ ದೇವರಗೆಣ್ಣೂರು ಅವರ ಕಾದಂಬರಿ 'ನಾಲ್ಕನೆಯ ಆಯಾಮ'
ಕುಸುಮಾಕರ ದೇವರಗೆಣ್ಣೂರು -ಇವರು ಸುಪ್ರಸಿದ್ಧ ಸಾಹಿತಿಯಂತೆ. ಅಂತರ್ಜಾಲದಲ್ಲಿ ಹುಡುಕಿದರೆ ನಿಮಗೆ ಹೆಚ್ಚಿನ ಮಾಹಿತಿ ತಿಳಿದೀತು. ಈ ಪುಸ್ತಕವನ್ನು ಕರ್ನಾಟಕ ಸರಕಾರವು ಬಹಳ ಕಡಿಮೆ ಬೆಲೆ (೨೫ ರೂ ) ಗೆ ಮಾರಾಟ ಮಾಡಿತು - ಕರ್ನಾಟಕಕ್ಕೆ 50 ವರ್ಷಗಳ ಆದ ಸಂದರ್ಭದಲ್ಲಿ,
ಮೊದಲು ಕತೆ - ಒಬ್ಬ ಶಾಲಾ ಕಾಲೇಜು ವಿದ್ಯಾರ್ಥಿಯ ಕತೆ ಇದು . ತುಂಬ ಸಹಜವಾಗಿ ಇದೆ. ಆತನ ಮನಸ್ಸಿನ ತುಂಬ ತಂದೆಯ ಬಗ್ಗೆ , ಸಮಾಜದ ಬಗ್ಗೆ ಬಹಳಷ್ಟು ಅತೃಪ್ತಿ ಇದೆ. ತನ್ನ ತಂದೆ ತನಗೆ ಯಾವುದೇ ಸ್ವಾತಂತ್ರ್ಯ ಕೊಡುತ್ತಿಲ್ಲ , ಪ್ರೋತ್ಸಾಹ ಕೊಡುತ್ತಿಲ್ಲ ಇತ್ಯಾದಿ. ಇದರಿಂದಾಗಿ ತನ್ನ ಏಳಿಗೆ ಆಗುತ್ತಿಲ್ಲ ಎಂಬ ಭಾವನೆ . ಇದರಿಂದಾಗಿ ತನ್ನ ಬದುಕಿಗೂ ಹಾನಿ ಮಾಡಿಕೊಳ್ಳುತ್ತಾನೆ, ಸಮಾಜ ವಿರೋಧಿ ಎನ್ನುವಂತಹ ಋಣಾತ್ಮಕ ಧೋರಣೆಯನ್ನು ಬೆಳೆಸಿಕೊಳ್ಳುತ್ತಾನೆ. ತನ್ನ ಮಾನಸಿಕ ಸ್ಥಿತಿಯನ್ನು ಕೆಡಿಸಿಕೊಂಡು ಬದುಕನ್ನು ಹಾಳುಗೆಡವುತ್ತಾನೆ. ಆಶ್ಚರ್ಯವೆಂದರೆ ಇಂಥದೇ ಪರಿಸ್ಥಿತಿಯಲ್ಲಿರುವ ಈತನ ಒಂದಿಬ್ಬರು ಗೆಳೆಯರು ಇವನಂತೆ ಋಣಾತ್ಮಕ ಧೋರಣೆ ತಾಳದೆ, ತಮ್ಮ ಬದುಕನ್ನು ಈತನ ಕಣ್ಣ ಮುಂದೆಯೇ ಸುಧಾರಿಸಿಕೊಂಡು ಯಶಸ್ಸು ಪಡೆಯುತ್ತಾರೆ.
ಕೊನೆ ಕೊನೆಯ ಪುಟಗಳಲ್ಲಿ ಕಾದಂಬರಿಯ ಹೆಸರು ಆದ ನಾಲ್ಕನೆಯ ಆಯಾಮದ ಬಗ್ಗೆ ಉಲ್ಲೇಖ ಇದೆ. ಏನಿದು ನಾಲ್ಕನೆಯ ಆಯಾಮ ( Dimension !) ? ಇದು ಬದುಕಿನದು, ವಿಜ್ಞಾನದ್ದಲ್ಲ. ನಮ್ಮ ಬದುಕಿಗೆ ಮೂರೇ ಆಯಾಮಗಳೇ? - Birth, copulation and death ? (ಅಥವಾ ನಮ್ಮಲ್ಲಿ ಸಂಕ್ಷಿಪ್ತವಾಗಿ ಹೇಳುವಂತೆ - ಉ.ಮ. ಹೇ ? ) ಇವರ ಹೊರತಾಗಿ ಇನ್ನೇನೂ ಇಲ್ಲವೇ ? ಈ ನಾಲ್ಕನೇ ಆಯಾಮಕ್ಕಾಗಿ ಈತನ ತಹತಹ.
ಕತೆಯನ್ನು ಅವನ ಮೂಲಕವೇ ತುಂಬ ಸಹಜವಾಗಿ ಹೇಳಲಾಗಿದೆ. ಯಾವುದೇ ತೀರ್ಮಾನವನ್ನು ಕಾದಂಬರಿಕಾರರು ಎಲ್ಲೂ ಕೊಡುವುದಿಲ್ಲ. ಈ ಕಾದಂಬರಿಯ ಕುರಿತಾಗಿ ಪ್ರಾರಂಭದಲ್ಲಿ ಕೊಟ್ಟಿರುವ ಒಂದು ಪುಟವನ್ನು ನಿಮಗಾಗಿ ಇಲ್ಲಿ ಕೊಟ್ಟದ್ದೇನೆ - ನನ್ನಂತಹ ಸಾಮಾನ್ಯ ಓದುಗರಿಗೆ ಸ್ವಲ್ಪ ಸಂಕೀರ್ಣವಾದದ್ದು . ನೀವು ಅದರಲ್ಲಿ ಹೇಳಿರುವುದನ್ನು ಓದಿ ತಿಳಿದು ಮೆಚ್ಚಬಹುದು.