ಪುಸ್ತಕನಿಧಿ - 26. ನೆನಪುಗಳಿಗೇಕೆ ಸಾವಿಲ್ಲ? - J ಬಾಲಕೃಷ್ಣ ಅವರ ಕಥಾಸಂಕಲನ
ಈ ಪುಸ್ತಕವನ್ನು ನಾನು archive.org ತಾಣದಿಂದ ಪುಕ್ಕಟೆ ಇಳಿಸಿಕೊಂಡಿದ್ದೆ . ಆದರೆ ಇದರ ಕೊಂಡಿಯನ್ನು ನಾನು ಈಗ ಕೊಡಲಾರೆ. ಕ್ಷಮಿಸಿ. ಇದು ಹೊಸ ಪುಸ್ತಕವಾಗಿದ್ದು ಸುಮಾರು 160 ಪುಟಗಳಲ್ಲಿ ಸುಮಾರು ಹತ್ತು ಕಥೆಗಳಿವೆ. ಇದರ ಮುನ್ನುಡಿಯಲ್ಲಿ ಕಥೆ ಎಂದರೇನು ಎಂಬ ವಿವೇಚನೆ ಇದೆ. ಓದಲು ತಕ್ಕದಾಗಿದೆ.
ಕಥೆಗಳಿಂದ ನಾವು ಸ್ವತಃ ಅನುಭವಿಸದೆ ಇದ್ದುದನು ತಿಳಿಯಬಹುದು. ಇಲ್ಲಿನ ಕಥೆಗಳು ಹಾಗೆ ಇವೆ. ಬಹುತೇಕ ಮಧ್ಯಮ ವರ್ಗದ ಅಥವಾ ಮೇಲಿನ ವರ್ಗದ ಹಿನ್ನೆಲೆಯನ್ನು ಹೊಂದಿವೆ.
ಇದರಿಂದ ನಾನು ಮಾಡಿಕೊಂಡ ಟಿಪ್ಪಣಿಗಳು ಎರಡು ಸಂಭಾಷಣೆಗಳನ್ನು ಒಳಗೊಂಡಿವೆ. ಅವು ಹೀಗಿವೆ.
1) ಹೊಲದಾಗಾದ್ರೂ ಗೇಯಿ , ಅಥವಾ ಏನಾದ್ರೂ ಬದುಕು ಮಾಡಿ ಊಟಕ್ ಒಂದು ದಾರಿ ಮಾಡಿಕೋ.
2) 'ಅಪ್ಪ, ನಿಮಗೊಂದು ವಿಷಯ ಹೇಳಬೇಕು. ಅದನ್ನ ಯಾರು ಹೇಳುವುದಿಲ್ಲ ಎಂದು ಪ್ರಮಾಣ ಮಾಡಿ'
'ನಿನಗೇ ಗೊತ್ತಲ್ಲ, ನನಗೆ ಎಲ್ಲರ ಕಲ್ಪನೆಯ ದೇವರ ಮೇಲೆ ನಂಬಿಕೆ ಇಲ್ಲ ಅಂತ'
'ಇಲ್ಲ, ನೀವು ಪ್ರಮಾಣ ಮಾಡಲೇಬೇಕು'
'ನನ್ನ ಪ್ರಮಾಣದ ಸ್ಥಿರತೆ ನೀನು ಹೇಳುವ ವಿಷಯದ ಮೇಲೆ ಅವಲಂಬಿಸುತ್ತದೆ. ನಾನು ನನ್ನ ಪ್ರಮಾಣವನ್ನು ಮುರಿಯಬಹುದು. ... ನನ್ನ ಮೇಲೆ ನಂಬಿಕೆ ಇದ್ದರೆ ಹೇಳು, ಇಲ್ಲದಿದ್ದರೆ ಬೇಡ. ನಾನು ಯಾವುದೇ ಪ್ರಮಾಣ ಮಾಡುವುದಿಲ್ಲ. ನನಗೆ ಇದರಲ್ಲೆಲ್ಲ ನಂಬಿಕೆ ಇಲ್ಲ'