ಪುಸ್ತಕನಿಧಿ:24. 'ಭಾಸನ ಭಾರತ' ಜಿ. ಪಿ. ರಾಜರತ್ನಂ ಅವರ ಪುಸ್ತಕ

ಪುಸ್ತಕನಿಧಿ:24. 'ಭಾಸನ ಭಾರತ' ಜಿ. ಪಿ. ರಾಜರತ್ನಂ ಅವರ ಪುಸ್ತಕ

ಇವತ್ತು ಹಿಂದೆ ಇಳಿಸಿಕೊಂಡಿದ್ದ 'ಭಾಸನ ಭಾರತ' ಎಂಬ ಸುಮಾರು 100 ಪುಟಗಳ ಪುಸ್ತಕವನ್ನು ಓದಿದೆ. 

ಇದನ್ನು ಜಿ. ಪಿ. ರಾಜರತ್ನಂ ಅವರು ಬರೆದಿದ್ದಾರೆ. 

ಭಾಸನು ಸಂಸ್ಕೃತದಲ್ಲಿ 13 ನಾಟಕಗಳನ್ನು ಬರೆದಿದ್ದಾನೆ. ಅವುಗಳಲ್ಲಿ ಆರು ನಾಟಕಗಳು ಮಹಾಭಾರತದ ವಸ್ತುವನ್ನು ಹೊಂದಿವೆ. ಇವುಗಳಲ್ಲಿ ಐದು ಏಕಾಂಕ ನಾಟಕಗಳು. ಅವು ಯಾವುವು ಎಂದರೆ ಮಧ್ಯಮವ್ಯಾಯೋಗ, ದೂತ ವಾಕ್ಯ, ದೂತ ಘಟೋತ್ಕಚ, ಕರ್ಣ ಭಾರ ಮತ್ತು ಊರುಭಂಗ. 

ಇವುಗಳಲ್ಲಿ ಕರ್ಣಭಾರವು ನಾವು ಕಲಿಯುವಾಗ ಸಂಸ್ಕೃತ ಪಠ್ಯಪುಸ್ತಕದಲ್ಲಿ ಇತ್ತು.

ಈ ನಾಟಕಗಳ ಗದ್ಯಾನುವಾದ ಪುಸ್ತಕದಲ್ಲಿದೆ.

ಇವುಗಳಲ್ಲಿ ಊರುಭಂಗ ನಾಟಕವು ಇಷ್ಟವಾಯಿತು. ಇದರಲ್ಲಿ ದುರ್ಯೋಧನ ಭೀಮರ ಗದಾಯುದ್ಧದ ಕಥೆ ಇದೆ. ದುರ್ಯೋಧನನು ಸ್ವರ್ಗಕ್ಕೆ ಹೋದನಂತೆ. ಅವನು ಸಾಯುವಾಗ ಅವನಲ್ಲಿ ವೈರ ಭಾವ ಉಳಿದಿರಲಿಲ್ಲ. ತಾಯಿ ಗಾಂಧಾರಿಯನ್ನು ಜನ್ಮ ಜನ್ಮಕ್ಕೂ ನೀನೇ ತಾಯಿಯಾಗು ಎಂದು ಬೇಡಿಕೊಂಡನು. 

ನಿನ್ನೆ ಕೃಷ್ಣಾವತಾರದ ಕೊನೆಯ ಗಳಿಗೆಗಳು ಎಂದು ಪುಸ್ತಕದಲ್ಲಿ ರಾಮಾಯಣ, ಮಹಾಭಾರತ ಹಾಗೂ ಭಾಗವತಗಳನ್ನು ಸಂಪೂರ್ಣವಾಗಿ ಯಾರೂ ಪಾರಾಯಣ ಮಾಡುವುದಿಲ್ಲ ಎಂಬ ಸಂಗತಿಯನ್ನು ಓದಿದ್ದೆ . ಈ ಪುಸ್ತಕದಲ್ಲಿ ನಾನು ಓದಿದ ಪ್ರಕಾರ ವ್ಯಾಸರ ಮಹಾಭಾರತದಲ್ಲಿ 18 ಪರ್ವಗಳಿದ್ದು, 10ನೇ ಪರ್ವದಲ್ಲಿ ಕೌರವ ಪಾಂಡವರ ಯುದ್ಧವಾಗಿ ಕೌರವರು ಸೋಲು ಉಂಟಾಗುತ್ತದಂತೆ. ಹಾಗಾದರೆ ಮುಂದಿನ ಎಂಟು ಪರ್ವಗಳಲ್ಲಿ ಇರುವುದು ಏನು? ಮುಂದೊಮ್ಮೆ ನನಗೆ ತಿಳಿದೀತು.

 

ಈ ಪುಸ್ತಕವು archive.org ತಾಣದಲ್ಲಿ https://archive.org/details/dli.osmania.3600/mode/1up ಕೊಂಡಿಯಲ್ಲಿ ಲಭ್ಯವಿದೆ.

ಬ್ಲಾಗ್ ವರ್ಗಗಳು
Rating
Average: 4 (1 vote)