ಪುಸ್ತಕ ನಿಧಿ - ಮಾಸ್ತಿ ವೆಂಕಟೇಶ ಅಯ್ಯಂಗಾರರ ಅದ್ಭುತ ಕತೆಗಳು
ಈ ಪುಸ್ತಕದಲ್ಲಿ ನೀವು ಸ್ವಲ್ಪ ಮೋಸ ಹೋಗುವ ಸಾಧ್ಯತೆಗಳಿವೆ . ಇದು ನಿಜಕ್ಕೂ ಅನೇಕ ಕಥಾಸಂಕಲನಗಳ ಸಂಕಲನ . ಒಂದು ಪುಸ್ತಕ ಮುಗಿಯಿತು ಎಂದು ತಿಳಿಯಬಹುದು . ನಂತರ ಒಂದೆರಡು ಖಾಲಿ ಪುಟಗಳ ನಂತರ ಇನ್ನೊಂದು ಶುರುವಾಗುತ್ತದೆ ಆಯಾ ಭಾಗದ ಪರಿವಿಡಿಗಳೂ ಬೇರೆ. ಒಟ್ಟು ೫೬೭ ಪುಟಗಳ ಪುಸ್ತಕ ಎಂಬುದನ್ನು ಮರೆಯಬೇಡಿ.
ಮಾಸ್ತಿಯವರ ಬರವಣಿಗೆಯೇ ಸುಖಕರ . ಏನು ತಿಳಿವಳಿಕೆ , ಏನು ವಿಶಾಲಹೃದಯ , ಏನು ಕರುಣೆ? . ನಾನು ಎಂದೂ ಮರೆಯದ ಅನೇಕ ಕತೆಗಳು ಇಲ್ಲಿವೆ . ಪರಿವಿಡಿಗಳು ೧೨ , ೧೮೦ , ೨೬೪ , ೩೨೭ , ೪೨೬ ಪುಟಗಳಲ್ಲಿವೆ ಎಂಬುದನ್ನು ಮರೆಯದಿರಿ.
ನನ್ನ ಮೆಚ್ಚಿನ ಕತೆಗಳು ಇವು .
೧. ರಂಗಸ್ವಾಮಿಯ ಅವಿವೇಕ
೨. ಬಾದಷಹನ ದಂಡನೆ
೩. ಮಸುಮತ್ತಿ
೪. ಸಾರಿಪುತ್ರನ ಕಡೆಯ ದಿನಗಳು
೫. ಜೋಗ್ಯೊರ ಅಂಜಪ್ಪನ ಕೋಳಿ ಕತೆ
೬. ಮಲೆನಾಡಿನ ಒಂದು ಪಿಶಾಚ - ನಿಮ್ಮ ಗುಂಡಿಗೆ ಗಟ್ಟಿ ಇದ್ದರೆ ಓದಿ
೭ ಹೇಮಕೂಟದಿಂದ ಬಂದ ಮೇಲೆ
ಎಲ್ಲ ಕತೆಗಳನ್ನು ಓದಿದರೆ ಒಳ್ಳೇದು . ಆದರೆ ಇವನ್ನು ಮಾತ್ರ ಓದಲೇಬೇಕು ಎಂದು ನನ್ನ ಶಿಫಾರ್ಸು! ಈ ಪುಸ್ತಕ ಇಲ್ಲಿದೆ.
Comments
ಉ: ಪುಸ್ತಕ ನಿಧಿ - ಮಾಸ್ತಿ ವೆಂಕಟೇಶ ಅಯ್ಯಂಗಾರರ ಅದ್ಭುತ ಕತೆಗಳು
ಉ: ಪುಸ್ತಕ ನಿಧಿ - ಮಾಸ್ತಿ ವೆಂಕಟೇಶ ಅಯ್ಯಂಗಾರರ ಅದ್ಭುತ ಕತೆಗಳು