ಪೂರ್ವಗ್ರಹಗಳು

ಪೂರ್ವಗ್ರಹಗಳು

ಇದು ನಾನು ಇತ್ತೀಚೆಗೆ ಸಂಪದದಲ್ಲಿ ಬರೆದ ಬ್ಲಾಗ್‍ನ ಒಂದು ವೈಯುಕ್ತಿಕ critic. ಜೊತೆಗೆ http://sampada.net/node/532#comment-689 ನಲ್ಲಿ ಇಸ್ಮಾಯಿಲರ ಅನಿಸಿಕೆಗಳಿಗೆ ಸಂಬಂಧಿಸಿದಂತೆ ನನ್ನ ಯೋಚನೆಗಳು. ಪತ್ರಕರ್ತರು ಬರೆಯುವ ವರದಿಗಳು biased ಆಗಿದ್ದರೂ ಕೊನೇಪಕ್ಷ ಅವರಿಗೆ ಅದರ ಅರಿವಾದರೂ ಇರುತ್ತದೆಯಲ್ಲವೆ. ನಮ್ಮಂತಹ ಜನಸಾಮನ್ಯರು ಯಾವುದೋ ಆದರ್ಶಕ್ಕೆ ಶರಣಾಗಿ ತಮಗೆ ಗೊತ್ತಿಲ್ಲದೇ ತಮ್ಮ ಮಾತುಕಥೆಗಳಲ್ಲಿ ಆ ಆದರ್ಶದ ಪ್ರತಿಪಾದಕರಾಗುತ್ತೇವೆ. ನಮ್ಮ ಲೇಖನಗಳಲ್ಲಿಯೂ ಇದೇ ನ್ಯೂನತೆಗಳಿದ್ದೇ ಇರುತ್ತವೆ. ಸಣ್ಣಪುಟ್ಟ ಕಾರ್ಯಗಳಲ್ಲಿ ಇದರ ಪರಿಣಾಮಗಳು ಹೆಚ್ಚೇನು ಆಗದಿದ್ದರೂ, scientific papers, journals ಮುಂತಾದವುಗಳ ಗತಿಯೇನು? ಇಲ್ಲಿ ಪತ್ರಿಕೋದ್ಯಮದ ಗಂಧವೇ ಇಲ್ಲದ ವಿಷಯಪರಿಣಿತರು ತಮ್ಮ ಪೂರ್ವಗ್ರಹಗಳಿಂದ ಪ್ರೇರಿತರಾಗಿ ಸಮಾಜದ ಮೇಲೆ ಗಾಢವಾದ ಪ್ರಭಾವ ಬೀರಬಹುದಾದ ವಿಷಯಗಳಲ್ಲಿ ತಮ್ಮ ಸ್ವಂತದ evangelical ಆದರ್ಶಗಳನ್ನು ಸೇರಿಸಿ ಬರೆಯುವುದು ಎಷ್ಟರ ಮಟ್ಟಿಗೆ ಸರಿ... ಉದಾಹರಣೆಗೆ ನನ್ನ ಲೇಖನಗಳಲ್ಲಿ ಸಮಾಜವಾದ ಕಮ್ಯೂನಿಸಮ್ ಗಳ ಛಾಯೆ ಕಾಣುವುದನ್ನು ನನಗೆ ತಪ್ಪಿಸಲಾಗುವುದಿಲ್ಲ.. ಆದರೆ ಈ ಬರಹಗಳಲ್ಲಿ ಬರುವ ವಾದಗಳು ಇದೇ ಸರಿ ಎಂಬಂತೆ ತೋರುವುದು ಓದುಗರ ಮನಸ್ಸನ್ನು ಈ ಆದರ್ಶಗಳತ್ತ ಸೆಳೆಯುವ cheap ವಿಧಾನವಾಗಿರುತ್ತವೆ. ವಿಷಯದ ಬಗ್ಗೆ ಆಳವಾದ ಜ್ಞಾನವಿರುವಂತೆ ಬರೆಯುವ ಲೇಖಕ, ವಿಷಯದ ಜೊತೆಗೇ ತನಗೆ ಅಷ್ಟು ಚೆನ್ನಾಗಿ ಗೊತ್ತಿರದ ಆದರ್ಶಗಳನ್ನು ಗೊತ್ತಿಲ್ಲದೇ (ಅದರ ಮೋಹದಿಂದ ಆಕರ್ಷಿತನಾಗಿ) ಸೇರಿಸುತ್ತಾನೆ. ವಿಷಯದ ಮಹತ್ವ ಮರೆತು ಕೊನೆಗೆ ಇದು ಆದರ್ಶಗಳ ಸಮರವಾಗುತ್ತದೆ. ಇದಕ್ಕೆ ಅತ್ಯಂತ ಸೂಕ್ತ ಉದಾಹರಣೆ outlook ಪತ್ರಿಕೆಯಲ್ಲಿ ಬಂದ ಒಂದು ಲೇಖನ. ಲೇಖಕರು ಹೇಳಬೇಕಾದದ್ದು, ಭಾರತದಲ್ಲಿ ಅಭಿವೃದ್ಧಿ ಕೇವಲ ನಗರದ elite ಗಳಿಗೆ ಸೇರಿದೆ. ಗ್ರಾಮೀಣ ಭಾರತ ಇನ್ನೂ ಕಡುಬಡತನದಲ್ಲಿದೆ. ಆದರೆ ಪತ್ರಕರ್ತರಿಗೆ ಇದರ ಯೋಚನೆಯೇ ಇಲ್ಲ. ಗ್ರಾಮೀಣ ಭಾರತವನ್ನು ಇವರು ಕಡೆಗಣಿಸಿದ್ದಾರೆ ಎಂದು.ಅವರು ಕೊಡುವ ಉದಾಹರಣೆಗಳು ಮಾತ್ರ, ಅವರ ಪೂರ್ವಗ್ರಹದಿಂದಲೋ ಎಂಬಂತೆ ಕೇವಲ ಆಂಧ್ರ ಮತ್ತು ಅದೇ ತರಹದ ಬಲ ಪಂಥೀಯ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಿಗೆ ಸಂಬಂಧಿಸಿರುವಂತಾದ್ದು. ಬಂಗಾಲ ಅಥವ ಕೇರಳದಲ್ಲಿ ಸಾಕಷ್ಟು ಬಡತನ ಮತ್ತು ಇತರ ನ್ಯೂನತೆಗಳಿದ್ದರೂ ಇವುಗಳನ್ನು ಲೇಖಕ ಪ್ರಸ್ತಾಪಿಸುವುದಿಲ್ಲ. ಸೂಕ್ಷ್ಮವಾಗಿ ನೋಡಿದರೆ, ಲೇಖಕರ bias ಎದ್ದು ಕಾಣುತ್ತದೆ. ಆದರೆ, ಇದೇ ವರದಿಗೆ ಓದುಗರು ತಮ್ಮ ಅಭಿಮತ ವ್ಯಕ್ತಪಡಿಸಬೇಕಾದರೆ, ಗ್ರಾಮೀಣ ಭಾರತದ ತೊಂದರೆಗಳು ಮುಖ್ಯವಾಗದೇ ಲೇಖಕರ ಪೂರ್ವಾಗ್ರಹಗಳೇ ಹೆಚ್ಚು ಮಹತ್ವ ಪಡೆಯುತ್ತವೆ. ಲೇಖಕರ ವ್ಯಕ್ತಿತ್ವದ ಮೇಲೆ ದಾಳಿಯಾಗುತ್ತದೆ. ಆದರ್ಶಗಳಲ್ಲಿ ಯಾವುದು ದೊಡ್ಡದು, ಯಾವುದು ಕ್ಷುಲ್ಲುಕ ಎಂಬುದರ ಚರ್ಚೆಗಳು ಶುರುವಾಗುತ್ತವೆ. ಆದರೆ ಗ್ರಾಮೀಣ ಭಾರತದ ಪರಿಸ್ಥಿತಿ (ಕೊನೆಗೆ ಸತ್ಯವಾಗು ಉಳಿಯುವುದೂ ಇದೊಂದೇ) ಓದುಗರಿಗೆ ಮರತೇ ಹೋಗುತ್ತದೆ. ಜಗತ್ತಿನಲ್ಲಿ ಇಂದು ನಾವು ಸೆಣೆಸುತ್ತಿರುವ ಮಹತ್ತರ ತೊಂದರೆಗಳಲ್ಲೆಲ್ಲಾ ತಳದಲ್ಲಿ ಮನುಕುಲ ಎದುರಿಸುತ್ತಿರುವ ನಿಜವಾದ ತೊಂದರೆಗಳಾಗದೆ ಐಷಾರಾಮಿನಲ್ಲಿ ಕುಳಿತ ಕೆಲವೇ ಕೆಲವು ಜನರ ವೈಯುಕ್ತಿಕ ಆದರ್ಶಗಳ ಹಣಾಹಣಿಯಷ್ಟೆ. ಆದ್ದರಿಂದ ಪತ್ರಕರ್ತರಿಗಿದ್ದಷ್ಟೇ (ಅಥವ ಇನ್ನೂ ಹೆಚ್ಚು) ಪೂರ್ವಗ್ರಹಗಳು ವೈಯುಕ್ತಿಕ ಗುರಿಗಳು ವಿಷಯಪರಿಣಿತರಿಗೂ ಇರುತ್ತವೆ. ಇದರಿಂದಾಗಿ ನಿಜವಾದ ವಿಷಯ ಮುಚ್ಚಿ ಹೋಗುವ ಸಂಭವನೀಯತೆಯೂ ಹೆಚ್ಚೇ. ಇದನ್ನು ಶ್ರೀಸಾಮಾನ್ಯ ಮೆಟ್ಟಿನಿಲ್ಲಬೇಕಾದರೆ ಅವನ ಅನಿಸಿಕೆಗಳನ್ನು ತೊಡರಿಲ್ಲದೇ ವ್ಯಕ್ತಪಡಿಸುವ ಅವಕಾಶ ಸಿಗಬೇಕು. ಇವತ್ತಿಗೂ ತಂತ್ರಾಂಶಗಳು ಅವನಿಗೆ ತೊಡಕೇ. ಶ್ರೀಸಾಮಾನ್ಯ ಇದಕ್ಕೆ ಹೇಗೆ ಉತ್ತರಿಸುವನೋ ನೋಡಬೇಕು.

Rating
No votes yet

Comments