ಪ್ರಜಾವಾಣಿಯಲಿ 'ಲ'ದ ಒತ್ತಕ್ಷರಗಳಿಗೆ ಭಾರೀ ಕೊರತೆ?
ಪ್ರಜಾವಾಣಿಯ ಮುದ್ರಿತ ಆವೃತ್ತಿಯಲ್ಲಿ 'ಲ' ದ ಒತ್ತಕ್ಷರವು ತಲೆಬರಹಗಳಲ್ಲಿ ಕಾಣುವುದೇ ಇಲ್ಲ. ಗಮನಿಸಿದ್ದೀರಾ? 'ನಗರದಲ್ಲಿ' 'ನಗರದಲಿ' ಆಗಿ ಕೆಲವೆಡೆ ಕಾವ್ಯಮಯವಾಗಿ ಕಂಡರೆ 'ಇಲ್ಲಿ' 'ಇಲಿ'ಯಾಗಿಬಿಟ್ಟಿದೆ! ಹೀಗೆ ಎಷ್ಟೋ ಆಭಾಸಗಳು. ಸುಮಾರು ೨-೩ ವಾರಗಳಿಂದ ಇದು ನಡೆದಿದೆ. ಪ್ರಜಾವಾಣಿ ಪತ್ರಿಕೆಯವರು ತಮ್ಮ ಪತ್ರಿಕೆಯನ್ನು ಓದುವುದಿರಲಿ, ತಿರುವಿಯೂ ಹಾಕುವುದಿಲ್ಲವೆನೋ ? ಅವರಿಗೆ ನಾನು ಈಮೇಲ್ ಒಂದನ್ನು ಕಳಿಸಿದ್ದೇನೆ.
Rating