ಬದಲಾಗುವ ದಿನಚರಿ!
ಬದಲಾಗುವ ದಿನಚರಿ!
ನನ್ನಾಕೆ
ಊರಿಗೆ ಹೋಗಿ
ತಿಂಗಳಾಗುತ್ತಾ ಬಂದಿತ್ತು
ನನಗಾದರೋ
ಸ್ವಾತಂತ್ರ್ಯದ ಹೊಸ
ದಿನಚರಿ ರೂಢಿಯೂ ಆಗಿತ್ತು
ನನಗಷ್ಟೇ
ನಾನಾಗಿ, ನನ್ನನರಿಯುವ
ಪರಿಯಲೂ ಉತ್ಸುಕತೆಯಿತ್ತು
ಒಂಟಿತನದ
ಆನಂದದ ಆ ಹೊಸ
ಅನುಭವದಲ್ಲಿ ಸುಖವೂ ಕಂಡಿತ್ತು
ಆದರೆ,
ಅಡುಗೆಮನೆಯಲ್ಲಿ
ಅನಿಲದ ಒಲೆಗಳಿಗೆ
ಅದೇಕೋ ಬೇಸರ ಕಾಡಿತ್ತು
ಪ್ರತಿ ದಿನವೂ
ಮೈತೊಳೆಸಿಕೊಳ್ಳುತ್ತಿದ್ದ
ಮನೆಯ ನೆಲ ಬೇಸರಗೊಂಡಿತ್ತು
ಪ್ರತೀ ಸಂಜೆ
ಆ ದೇವರ ಮೂರ್ತಿ
ಕತ್ತಲಲ್ಲಿ ದೀಪಕ್ಕಾಗಿ ಕಾಯುತ್ತಿತ್ತು
ನೀರು ಕಾಣದ
"ಜೀನ್ಸ್ ಪ್ಯಾಂಟ್"
ನನ್ನನ್ನು ಅದಾಗಲೇ ಶಪಿಸುತ್ತಿತ್ತು
ಮತ್ತೀಗ,
ನನ್ನ ಆ ಹೊಸ
ದಿನಚರಿಗೆ ಬದಲಾಗಿ
ಹಳೆಯದೇ ಜಾರಿಯಾಗಿಹುದು
ಆ ಒಲೆಗಳಲಿ
ಪುರುಸೊತ್ತೇ ಇಲ್ಲದಂತೆ
ಜ್ವಾಲೆ ತಾಂಡವವಾಡುತ್ತಿಹುದು
ಮನೆಯ ನೆಲ
ದಿನ ದಿನವೂ ಸ್ವಚ್ಛಗೊಂಡು
ಮಗುವಿನ ಹಾಲ್ಗೆನ್ನೆಯಂತಾಗಿಹುದು
ದೀಪ ಕಂಡ
ದೇವರ ಮೂರ್ತಿಯ
ಆ ಮುಖದಲ್ಲೂ ಪ್ರಭೆ ಕಾಣುತಿಹುದು
ಒಗೆಸಿಕೊಂಡ ಆ
"ಜೀನ್ಸ್ ಪ್ಯಾಂಟ್ " ಈಗ
ನನಗೆ ಗುರುತೇ ಸಿಗದಂತಾಗಿಹುದು
*******************
Rating
Comments
ಉ: ಬದಲಾಗುವ ದಿನಚರಿ!
In reply to ಉ: ಬದಲಾಗುವ ದಿನಚರಿ! by kavinagaraj
ಉ: ಬದಲಾಗುವ ದಿನಚರಿ!
ಉ: ಬದಲಾಗುವ ದಿನಚರಿ!
In reply to ಉ: ಬದಲಾಗುವ ದಿನಚರಿ! by RAMAMOHANA
ಉ: ಬದಲಾಗುವ ದಿನಚರಿ!
ಉ: ಬದಲಾಗುವ ದಿನಚರಿ!
In reply to ಉ: ಬದಲಾಗುವ ದಿನಚರಿ! by ಭಾಗ್ವತ
ಉ: ಬದಲಾಗುವ ದಿನಚರಿ!
In reply to ಉ: ಬದಲಾಗುವ ದಿನಚರಿ! by asuhegde
ಉ: ಬದಲಾಗುವ ದಿನಚರಿ!
ಉ: ಬದಲಾಗುವ ದಿನಚರಿ!
In reply to ಉ: ಬದಲಾಗುವ ದಿನಚರಿ! by partha1059
ಉ: ಬದಲಾಗುವ ದಿನಚರಿ!
ಉ: ಬದಲಾಗುವ ದಿನಚರಿ!
In reply to ಉ: ಬದಲಾಗುವ ದಿನಚರಿ! by nagarathnavina…
ಉ: ಬದಲಾಗುವ ದಿನಚರಿ!
In reply to ಉ: ಬದಲಾಗುವ ದಿನಚರಿ! by ಗಣೇಶ
ಉ: ಬದಲಾಗುವ ದಿನಚರಿ!
In reply to ಉ: ಬದಲಾಗುವ ದಿನಚರಿ! by nagarathnavina…
ಉ: ಬದಲಾಗುವ ದಿನಚರಿ!
ಉ: ಬದಲಾಗುವ ದಿನಚರಿ!
In reply to ಉ: ಬದಲಾಗುವ ದಿನಚರಿ! by Chikku123
ಉ: ಬದಲಾಗುವ ದಿನಚರಿ!
ಉ: ಬದಲಾಗುವ ದಿನಚರಿ!
In reply to ಉ: ಬದಲಾಗುವ ದಿನಚರಿ! by prasannakulkarni
ಉ: ಬದಲಾಗುವ ದಿನಚರಿ!