ಬಾಲ್ಯ

ಬಾಲ್ಯ

ಬಾಲ್ಯ

ಅಮ್ಮನ ಸೆರಗಿನ ಹಿಂದಿನ
ಆದಿನಗಳು
ಕಾಮನ ಬಿಲ್ಲಿನ ಹಾಗೆ
ಮೂಡಣದ ನಡುವಿನ ಸೂರ್ಯ
ಗೊತ್ತಿಲ್ಲದೇ
ನೆತ್ತಿಯ ಮೇಲೇರಿದ ಹಾಗೆ.

ಮದುಮಗಳ ಹಿಂದಿಂದ
ಮಾವಿನೆಲೆ ಬಾಲ!
ಹಿಂತಿರುಗುವಷ್ಟರಲ್ಲೇ
ವರಮಾಲೆ ಕೈಯಲ್ಲಿ!

ಅಪ್ಪನ ಛಡಿಯೇಟು
ಅಣ್ಣನ ಕಣ್ಗೆಂಪು
ಜೊತೆಯಲ್ಲಿ ಐಸ್ಕೆಂಡಿ
ಕೈ ಒಣಗುವ ಮೊದಲೇ
ಅರಿಶಿನದ ನರುಗೆಂಪು!

ಅಮ್ಮನ ಮಡಿಲಿನ
ರಾಕ್ಷಸನ ಕಥೆಯಲ್ಲೇ
ಮೈ ಬೆದರಿ ಎದ್ದಾಗ
ಎದುರಿಗೇ ಬದುಕು!

ಬಾಲ್ಯವೆಂಬುದು ಕರಗಿ
ಬದುಕ ಹೋರಾಟಕ್ಕಿಳಿದು
ನಳಪಾಕದಡಿಗೆಯಲಿ
ನನ್ನೆಲ್ಲ ಕನಸುಗಳು
ಮತ್ತೆ ಮೂಡುತ್ತಿವೆ
ಮುಗ್ಧ ನಗೆಯಾಗಿ
ಬಾಳ ಬೆಳಕಾಗಿ.

Rating
No votes yet

Comments