ಬೆತ್ತಲೆ ಲೋಕದಲ್ಲಿ ....

ಬೆತ್ತಲೆ ಲೋಕದಲ್ಲಿ ....

ಮೊನ್ನೆಯ ದಿನ ಕಚೇರಿಯಲ್ಲಿ  ನಾಲ್ಕೈದು ಘಟನೆಗಳು ಸಾಲಾಗಿ ನಡೆದವು.

ಕಚೇರಿಗೆ ಹೋಗುತ್ತಿದ್ದಂತೆ ನೋಡಿದೆ, ಏನೂ ಅಲ್ಲದ ಸಣ್ಣ ವಿಷಯದಲ್ಲಿ ಹಠ ಮಾಡಿಕೊಂಡು ತಲೆ ಕೆಡಿಸಿಕೊಂಡು  ಜಗಳ ಮಾಡಿಕೊಂಡಿದ್ದರು-ಐದಾರು ಜನರು!

ಒಬ್ಬ ಸಹೋದ್ಯೋಗಿ - ಕಂಪ್ಯೂಟರ್ ಗೆ ಸಂಬಂಧಿತ ತಕ್ಕ ಮಟ್ಟಿಗೆ ದೊಡ್ಡ ಅಧಿಕಾರಿ, ಈ ಉದ್ಯೋಗದಲ್ಲಿ ೧೫ ವರ್ಷದಿಂದ ಇದ್ದಾನೆ. ಕಂಪ್ಯೂಟರ್ ನಲ್ಲಿ ಯಾವುದೋ ಪ್ರಮೋಷನ್ ಪಟ್ಟಿ ನೋಡುತ್ತಿದ್ದ. ಏನು ಮಾಡ್ತಾ ಇದ್ದೀರಿ ಅಂದಾಗ 'ಪಟ್ಟಿ ನೋಡುತ್ತಿದ್ದೆ, ನಮ್ಮ ಕಚೇರಿಯ ಶ್ರೀಯುತ .............ರವರ ಹೆಸರು ಇದ್ದ ಹಾಗಿಲ್ಲ' ಎಂದ .  ನಾನು ಹಣಿಕೆ ಹಾಕಿದೆ. ಅಂದರೆ ಇಣುಕಿ ನೋಡಿದೆ. ೨೫ ಪುಟಗಳ PDF ಅದು. ಒಂದು  ಸಾವಿರ ಹೆಸರುಗಳು ಇದ್ದಿರಬಹುದು. 'ಸರ್ಚ್ ಮಾಡಿ ನೋಡಿರಲ್ಲ?' ಅಂತ ನನ್ನ ಬಾಯಿಂದ ಬರುತ್ತಿದ್ದಂತೆ ನನಗೆ ಗಮನಕೆ ಬಂದದ್ದು- ಅವನು ಒಂದೊಂದಾಗಿ ಹೆಸರುಗಳ್ನ್ನು ಓದುತ್ತ ಹುಡುಕುತ್ತಿದ್ದ!.

ಆಮೇಲೆ ಇನ್ನೂ ದೊಡ್ಡ ಕಂಪ್ಯೂಟರ್ ಅಧಿಕಾರಿ ನನ್ನ ಬಳಿಗೆ ಬಂದ.   'ನಮ್ಮ ಸರ್ವರ್ ಕಂಪ್ಯೂಟರ್ - ಹೆಚ್ಚು  ಶಕ್ತಿಯ ಕಂಪ್ಯೂಟರ್ - ಗೆ ಏನೋ ತೊಂದರೆ ಇತ್ತು.  ಅದರ ಕಂಪನಿಯ  ಸಪೋರ್ಟ್ ಇಂಜಿನಿಯರ್  ಒಂದು ಕಮ್ಯಾಂಡ್  ತಿಳಿಸಿದ್ದ. ಅದರ ಔಟ್ಪುಟ್ಟನ್ನು  ಅವನಿಗೆ ಕಳಿಸಬೇಕಂತೆ.  ಕಳಿಸಿದ್ದೀನಿ. ಅದರ ಹೆಸರು  .lst ಇದೆ.  ಈಗ ಅದನ್ನು  ಓದಲು ಯಾವ ಸಾಫ್ಟ್ ವೇರ್ ನಲ್ಲಿ ತೆರೆಯಬೇಕು ? ಅಂತ ಕೇಳುತ್ತಿದ್ದಾನೆ'  ಅಂತ ನನ್ನ ಮುಖ ನೋಡಿದ- ಪರಿಹಾರಕ್ಕಾಗಿ. 'ಉಂ........ ನೀವು ಅದನ್ನು ತೆರೆಯಬಲ್ಲಿರಾ?' ಅಂತ ಕೇಳಿದೆ . 'ಹೂಂ. ಅದನ್ನು ವರ್ಡ್(MS-WORD) ನಲ್ಲಿ ತೆರೆದಿದ್ದೀನಿ. ' ಅಂದ.  'ಅದನ್ನೇ ಹೇಳಿಬಿಡಿ' ಅಂದೆ. ಹಾಂ-ಹೌದಲ್ಲಾ ಅಂತ ಅವರಿಗೆ ಹೊಳೆದು ಏನೂ ಹೇಳದೆ ಸುಮ್ಮನೆ ಹೋಗಿಬಿಟ್ಟರು. ನಮ್ಮವರು ಹೋಗಲಿ ಬಿಡಿ. ಆ ಖಾಸಗೀಕ್ಷೇತ್ರದ ಯುವ  ಕಂಪ್ಯೂಟರ್ ಇಂಜಿನೀಯರ್ ಗೆ ತಿಳಿಯಬಾರದೆ?.  ಸಾಮಾನ್ಯವಾಗಿ ಬಳಸುವ ನಾಲ್ಕೈದು ಅಪ್ಲಿಕೇಶನ್ -ನೋಟ್-ಪ್ಯಾಡ್,  ವರ್ಡ್, ಬ್ರೌಸರ್ ಬಳಸಿ ಪ್ರಯತ್ನಿಸಬಹುದಿತ್ತಲ್ಲ?

ಆಗ ಮೇಲ್ ನೋಡುತ್ತಿದ್ದೆ.  ಎಲ್ಲರ ಮನದಲ್ಲಿ ಮೂಡಿರುವ ಒಂದು ಪ್ರಶ್ನೆಗೆ ನಮ್ಮ ದೇಶದ ಉನ್ನತ ಹುದ್ದೆಯಲ್ಲಿರುವವರೊಬ್ಬರ  ಅಭಿಪ್ರಾಯ ತಿಳಿಸುವ PDF ಒಂದನ್ನು ಯಾರೋ ಕಳಿಸಿದ್ದರು. ಆ ಬಗ್ಗೆ  ಇಲ್ಲಿ   ಬರೆದಿದ್ದೇನೆ. ನೋಡಿ!

ಅಷ್ಟು ಹೊತ್ತಿಗೆ ಮನೆಯಿಂದ ಫೋನ್ ಬಂದಿತು. ಮನೆಗೆ ಕೇಬಲ್ ನವನು ಬಂದಿದ್ದ. ಸೆಟ್ ಟಾಪ್ ಬಾಕ್ಸ್ ನಿಂದ ಈ ತನಕ ನೋಡುತ್ತಿದ್ದ ಟೀವಿಗೆ ನೇರ ಸಂಪರ್ಕ ಕೊಡಲು ಹೇಳಿದ್ದೆ. ಈಗ ಚಿತ್ರವೇ ಕಾಣುತ್ತಿರಲಿಲ್ಲ ! ನಾನು ಫೋನ್ ನಲ್ಲಿ ಅವನ ಜತೆ ಮಾತಾಡಿದೆ. ಅವನ ಪ್ರಕಾರ ಟೀವಿ ಕೆಟ್ಟಿದೆ. ಅಲ್ಲಯ್ಯ ಸೆಟ್ ಟಾಪ್ ಬಾಕ್ಸ್ ಮೂಲಕ ನೋಡುವಾಗ ಚಿತ್ರ ಕಾಣುತ್ತದೆ. ನೇರ ಕನೆಕ್ಷನ್ ನಲ್ಲಿ ಕಾಣುವುದಿಲ್ಲ ಅಂತೀಯಲ್ಲ? ಅದು ಹೇಗೆ ಸಾಧ್ಯ . ಟೀವಿ ಸರಿಯಾಗೇ ಇರಬೇಕು. ರಿಮೋಟ್ ನಲ್ಲಿ ವಿಡಿಯೋ ಸಿಗ್ನಲ್ ಮೂಲವನ್ನು ಬದಲಿಸಿ ನೋಡು ಅಂತ ಹೇಳಿದೆ.   ಆದರೂ ಬರ್ತಿಲ್ಲ ಅಂತ ಹೇಳಿದ,  ನೀವು ಇಷ್ಟು ದಿನ ಸೆಟ್ ಟಾಪ್ ಮೂಲಕ ನೋಡ್ತಿದ್ರಿ, ನೇರ ಕನೆಕ್ಷನ್ ಕೆಲಸ ಮಾಡ್ತಿಲ್ಲ ಅಂದ್ರೆ ಟೀವಿಯಲ್ಲೆ ಏನೋ ತೊಂದರೆ ಇರಬೇಕು.  ಈ ಎಲೆಕ್ಟ್ರಾನಿಕ್ಸ್ ಗೂಡ್ಸ್ ಹಾಗೇ ಸರ್ ,  ಚೆಕ್ ಮಾಡಿಸಿ, ಬೇಕಿದ್ರೆ ನನ್ನ ಪರಿಚಯದವನ್ನೇ ಕಳಿಸ್ತೀನಿ' ಅಂದ. ಸರಿ ಕಣಪ್ಪ ಅಂದೆ. 

ಮೇಲೆ ಕೊಟ್ಟ ಕೊಂಡಿಯಲ್ಲಿನ ಬರಹ ಸಿದ್ಧಪಡಿಸುತ್ತ ಕೂತೆ.  ಅಷ್ಟು ಹೊತ್ತಿಗೆ ಹೆಂಡತಿಯಿಂದ ಫೋನ್ ಬಂತು- ಅವನೂ ಬಂದು ಹೋದ. ಆನ್ ಮಾಡುತ್ತಿದ್ದಂತೆ ಚಿತ್ರ ಬಂತು. ಅಂತ! 

ಒಂದರ ಹಿಂದೊಂದು  ನಡೆದ ಈ ಘಟನೆಗಳ ಬಗ್ಗೆ ವಿಚಾರ ಮಾಡಲು ನನಗೆ ಈಗ  ಸ್ವಲ್ಪ ಪುರುಸೊತ್ತಾಯಿತು. ಮೆಥಡ್ ಇನ್ ಮ್ಯಾಡ್ನೆಸ್ ಅಂತಾರಲ್ಲ ಹಾಗೆ ಏನಾದರೂ ಇವುಗಳ ಹಿಂದೆ ಏಕಸೂತ್ರ ಇದೆಯೇ? ಅಂತ ವಿಚಾರ ಮಾಡುತ್ತಿದ್ದಂತೆ ಯುರೇಕಾ ! ಮ್ಯಾಡ್ನೆಸ್ ಶಬ್ದ  ಇತ್ತೀಚೆಗಷ್ಟೇ ಎಲ್ಲೋ ಓದಿದ ಈ ಕತೆ ನೆನಪಾಯಿತು.

ಬಳಿಯಲ್ಲಿದ್ದವರಿಗೆ ಈ ಕತೆ ಹೇಳಿದೆ. ಅವರಿಗೆ ತಿಳಿದ ಹಾಗೆ ಕಾಣಲಿಲ್ಲ.  :(  .  

ನಿಮ್ಮ ಜತೆ ಹಂಚಿಕೊಳ್ಳುತ್ತೇನೆ. ನೀವಾದರೂ  ಅರ್ಥ ಮಾಡಿಕೊಂಡೀರಿ.

ಒಂದು ರಾಜ್ಯ, ರಾಜ, ಮಂತ್ರಿ, ಪ್ರಜೆಗಳು. ಯಾವುದೋ ದೇವತೆಗೆ ಆ ಊರಿನ ಮೇಲೆ ಸಿಟ್ಟು  ಬಂದಿತು. ಆ ಊರಿನ ನೀರಿಗೆ ಯಾವುದೋ ವಸ್ತು ಬೆರೆಸಿಬಿಟ್ಟಿತು.  ಆ ನೀರನ್ನು ಕುಡಿದು ಜನರಿಗೆ ಹುಚ್ಚು ಹಿಡಿಯಿತು.  ಹುಚ್ಚು ಹುಚ್ಚಾಗಿ ಆಡತೊಡಗಿದರು.

 

ಆ ನೀರನ್ನು ರಾಜ ಮತ್ತು  ಮಂತ್ರಿ ಕುಡಿದಿರಲಿಲ್ಲ.   ಅವರ ತಲೆ ಸರಿಯಾಗಿಯೇ ಇತ್ತು. ಪ್ರಜೆಗಳು  ರಾಜ ಮತ್ತು ಮಂತ್ರಿಯನ್ನು ಬೈಯತೊಡಗಿದರು. ಅವರ ತೀರ್ಮಾನಗಳನ್ನು , ಆಡಳಿತವನ್ನು ಟೀಕಿಸತೊಡಗಿದರು.  ರಾಜ ಮತ್ತು  ಮಂತ್ರಿಯ ತಲೆ ಸರಿಯಾಗಿಲ್ಲ , ಕೆಟ್ಟು ಹೋಗಿದೆ ಅಂತ ಹೇಳ ತೊಡಗಿದರು.

ರಾಜ ಮತ್ತ್ತು ಮಂತ್ರಿ ವಿಚಾರ ಮಾಡೀ ಮಾಡೀ ............ ಅವರೂ ಆ ಆ ನೀರನ್ನು ಕುಡಿಯಲು ನಿರ್ಧರಿಸಿ ಕುಡಿದೇ ಬಿಟ್ಟರು.

ಆಮೇಲೆ ಆ ಪ್ರಜೆಗಳು ರಾಜ ಮತ್ತು  ಮಂತ್ರಿಯನ್ನು ಹೊಗಳತೊಡಗಿದರು.  ಕುಶಲ ಆಡಳಿತಗಾರರು, ಮಹಾ ಮುತ್ಸದ್ದಿಗಳು, ಇಂಥ ರಾಜ ನಮಗಿರೋದು ನಮ್ಮ ಪುಣ್ಯ ಅಂತ ಹೇಳತೊಡಗಿದರು!

 

 

 

 ತ್ರಿ

 

 

 

 

 

 

 

Rating
No votes yet

Comments

Submitted by partha1059 Sat, 02/16/2013 - 19:38

ಆದರೆ...ಅದೆ ಲಾಜಿಕ್ಕು ಹೊಂದಿಸಿ ... ಈ ಭ್ರಷ್ಟ ವ್ಯವಸ್ಥೆಯಲ್ಲಿ ನಾವು ಭ್ರಷ್ಟರಾಗಬೇಕೆನ್ನುವುದು ಸರಿಯಾಗುವುದೆ. ಏಕೊ ಅನುಮಾನವೆನಿಸಿ ಕೇಳಿದೆ ಮತ್ತೇನಿಲ್ಲ. ವ್ಯವಸ್ಥೆಯ ವಿರುದ್ದ ಹೋರಾಡಿ ಜೈಲು ಸೇರಿದರು ತಮ್ಮ ತನವನ್ನು ಬಿಟ್ಟುಕೊಡದೆ ಏಕಾಂಗಿಯಾಗಿಯೆ ಹೋರಾಡಿದ ಕವಿನಾಗರಾಜರದು ಇದಕ್ಕು ಒಪ್ಪಿಗೆಯೆ !! . ನಿಮ್ಮ ಲೇಖನಕ್ಕು ಈ ಪ್ರತಿಕ್ರಿಯೆಗೆ ಸ್ವಲ್ಪ ದೂರವಿರಬಹುದು ಕುತೂಹಲಕ್ಕೆ ಕೇಳಿದೆ ಅಷ್ಟೆ

Submitted by partha1059 Sat, 02/16/2013 - 19:38

ಆದರೆ...ಅದೆ ಲಾಜಿಕ್ಕು ಹೊಂದಿಸಿ ... ಈ ಭ್ರಷ್ಟ ವ್ಯವಸ್ಥೆಯಲ್ಲಿ ನಾವು ಭ್ರಷ್ಟರಾಗಬೇಕೆನ್ನುವುದು ಸರಿಯಾಗುವುದೆ. ಏಕೊ ಅನುಮಾನವೆನಿಸಿ ಕೇಳಿದೆ ಮತ್ತೇನಿಲ್ಲ. ವ್ಯವಸ್ಥೆಯ ವಿರುದ್ದ ಹೋರಾಡಿ ಜೈಲು ಸೇರಿದರು ತಮ್ಮ ತನವನ್ನು ಬಿಟ್ಟುಕೊಡದೆ ಏಕಾಂಗಿಯಾಗಿಯೆ ಹೋರಾಡಿದ ಕವಿನಾಗರಾಜರದು ಇದಕ್ಕು ಒಪ್ಪಿಗೆಯೆ !! . ನಿಮ್ಮ ಲೇಖನಕ್ಕು ಈ ಪ್ರತಿಕ್ರಿಯೆಗೆ ಸ್ವಲ್ಪ ದೂರವಿರಬಹುದು ಕುತೂಹಲಕ್ಕೆ ಕೇಳಿದೆ ಅಷ್ಟೆ