ಬೆಳಗಾವಿ ನಮ್ಮದಾ?

ಬೆಳಗಾವಿ ನಮ್ಮದಾ?

ಈ ಪ್ರಶ್ನೆ ನಾನು ನಿನ್ನೆಯಿಂದ ಕೇಳಿಕೊಳ್ಳುತ್ತಿರುವೆ.....ಶನಿವಾರ ಮುಂಜಾನೆ ೯-೦೦ ಗಂಟೆಗೆ ಆ ಊರಲ್ಲಿ ಕಾಲಿಟ್ಟ ನಿಮಿಶ ದಿಂದ ಈ ಪ್ರಶ್ನೆ ಸುತ್ತಿಕೊಂಡಿತು.
ನಮ್ಮ ಸರ್ಕಾರ ಅಲ್ಲಿ ಅಧಿವೇಶನ ಮಾಡಿತು ಕೆಲವು ರಸ್ತೆಗಳು ಟಾರ್ ಕಂಡವು
ಆದರೆ ಬೆಳಗಾವಿಯ ಸಾಮಾನ್ಯ ಮನಿಶ್ಯಾನ ಅಭಿಪ್ರಾಯ ಕೇಳಿದರೆ ಇದೆಲ್ಲ
ನಿರುಪಯುಕ್ತ ಎಂದೆನ್ನಿಸುತ್ತದೆ. ಮರಾಟಿ ಜನ ಅವರ ಮಾತನಾಡುವ ಕನ್ನಡ
ಇದೆಲ್ಲ ವನ್ನು ಅವನು ಇಶ್ಟು ವರ್ಷ ಜೀರ್ಣಿಸಿಕೊಂಡಿದ್ದಾನೆ..ಅನಿವಾರ್ಯ ಕರ್ಮ
ಎಂದು ಕೊಂಡು ಬದುಕುತ್ತಿದ್ದಾನೆ. ರಸ್ತೆ ಬದಿಯ ವ್ಯಾಪಾರಿ,, ಹೊಟೆಲ್ ನ
ಮಾಣಿ .., ರಿಕ್ಸಾವಾಲಾ ಹೀಗೆ ಅನೇಕ ಜನ ಮೊದಲು ಮರಾಠಿ ಯಲ್ಲಿಯೇ
ನನ್ನೊಡನೆ ಮಾತನಾಡಲು ಶುರು ಇಟ್ಟಿದ್ದು ಪುಣ್ಯಕ್ಕೆ ನನಗೆ ಮರಾಠಿ ಚೆನ್ನಾಗಿ ಬರುತ್ತದೆ. ಹೀಗಾಗಿ ಹೆಚ್ಚಿಗೆ ತೊಂದರೆ ಆಗಲಿಲ್ಲ.
ನಾ ಹೇಳ ಹೊರಟಿರುವುದು ಇಷ್ಟೇ ಒಂದು ಊರು ಭಾವನಾತ್ಮಕ ವಾಗಿ
ಕನ್ನಡದ್ದು ಅಂತ ಅನ್ನಿಸಿಕೊಳ್ಳುವುದು ಅಲ್ಲಿಯ ಜನ ಸಹ ಸಾಥ ನೀಡಬೇಕು
ಆದರೆ ಇಬ್ಬಂದಿತನ ಬೆಳಗಾವಿ ಕನ್ನದಿಗನ ಹಣೆಬರಹ ಆದ ಹಾಗೆ ಇದೆ.
ಹಾಗಾದರೆ ಇದಕ್ಕೆನು ಪರಿಹಾರ ಸರ್ಕಾರ ಇನ್ನು ಮುಂದೆ ಬೆಳಗಾವಿಯ ಬಗ್ಗೆ
ಹೆಚ್ಚಿಗೆ ಗಮನ ಕೊಡಬೇಕು... ಅಲ್ಲಿಯ ಜನರಿಗೆ ಹೊಸ ಉದ್ಯೋಗ ಬೇಕು
ಕಿಷ್ಕಿಂಧೆ ಯಂತಿರುವ ಬೆಳಗಾವಿ ಸುಂದರ ನಗರ ವಾಗಿ ಹೊರಹೊಮ್ಮಬೇಕು.
ಸರ್ಕಾರ ಇದರ ಬಗ್ಗೆ ತೀವ್ರವಾಗಿ ಗಮನ ಹರಿಸಬೇಕು. ಸಾಧ್ಯವಾದರೆ ಓರ್ವ
ಮಂತ್ರಿ ಇದಕ್ಕಾಗಿ ನೇಮಿಸಬೇಕು....

ಭಾವನಾತ್ಮಕ ವಾಗಿ ಬೆಳಗಾವಿ ಕನ್ನಡಿಗ ಕಳೆದು ಹೋಗುತ್ತಿದ್ದಾನೆ ಅವನನ್ನು
ವಾಪಸ್ ಕರೆತರುವ ಏನಂತೀರಿ.....?

Rating
No votes yet

Comments