ಭಾಗ - ೧೭ ಮನುವಿನ ಧರ್ಮ: ಪರಿಚ್ಛೇದ ೨ ಪ್ರಸಿದ್ಧರ ಹೇಳಿಕೆಗಳು
I do not propose any levelling of castes. Caste is a very good thing. Caste is the plan we want to follow. What caste really is, not one in a million understands. There is no country in the world without Caste. In India, from caste, we reach to the point where there is no caste. The plan in India is to make everybody Brahmin, the Brahmin being the ideal of humanity. If you read the history of India, you will find that attempts have always been made to raise the lower classes. Many are the classes that have been raised. Many more will follow till the whole will become Brahmin. That is the plan. We have only to raise them without bringing them down.
As there are Sattva, Rajas and Tamas in every man, so the qualities which make a Brahmin, Ksattriya, Vaisya or Sudra are inherent in every man more or less…. Naturally it is quite possible for one to be changed from one caste into another. Otherwise how did Visvamitra become a Brahmin and Parasurama a Ksattriya?
- Swami Vivekananda
(Caste, Culture and Socialism, Pp 15, 16, 19)
ಜಾತಿ ಅಥವಾ ಕುಲಗಳನ್ನು ಸಮತಟ್ಟುಗೊಳಿಸಿ ಎಂದು ನಾನು ಪ್ರತಿಪಾದಿಸುವುದಿಲ್ಲ. ಜಾತಿ ಎನ್ನುವುದು ಒಳ್ಳೆಯದೇ. ನಿಜವಾಗಿ ಜಾತಿ ಎಂದರೆ ಏನು ಎನ್ನುವುದು ಕೋಟಿಗೊಬ್ಬರಿಗೂ ಅರ್ಥವಾಗಿಲ್ಲ. ಜಾತಿಯಿಲ್ಲದ ದೇಶ ಪ್ರಪಂಚದಲ್ಲೇ ಇಲ್ಲ. ಭಾರತದಲ್ಲಿ ನಾವು ಜಾತಿಯಿಂದ ಜಾತ್ಯಾತೀತ ಸ್ಥಿತಿಗೆ ತಲುಪುತ್ತೇವೆ. ಮಾನವ ಜನಾಂಗಕ್ಕೆ ಆದರ್ಶ ಬ್ರಾಹ್ಮಣನಾಗಿರುವುದರಿಂದ ಪ್ರತಿಯೊಬ್ಬರನ್ನೂ ಬ್ರಾಹ್ಮಣನ ಸ್ಥಾಯಿಗೆ ಏರಿಸಬೇಕೆನ್ನುವುದೇ ನಮ್ಮ ಯೋಜನೆ. ನೀವು ಭಾರತದ ಚರಿತ್ರೆಯನ್ನು ಓದಿದರೆ ಕೆಳಗಿನ ತರಗತಿಗಳನ್ನು ಯಾವಾಗಲೂ ಮೇಲ್ದರ್ಜೆಗೆ ಕೊಂಡೊಯ್ಯುವ ಪ್ರಯತ್ನವೇ ಅಲ್ಲಿ ಕಂಡು ಬರುತ್ತದೆ. ಎಷ್ಟೋ ವರ್ಗಗಳು ಮೇಲ್ಮಟ್ಟಕ್ಕೆ ಏರಿಸಲ್ಪಟ್ಟಿವೆ, ಇನ್ನೂ ಹಲವಾರು ವರ್ಗಗಳು ಅವನ್ನು ಅನುಸರಿಸಿ ಅಂತಿಮವಾಗಿ ಎಲ್ಲವೂ ಬ್ರಾಹ್ಮಣ ವರ್ಗಕ್ಕೆ ಸೇರುತ್ತವೆ. ಇದು ಯೋಜನೆ. ಅವೆಲ್ಲವನ್ನೂ ಉನ್ನತ ಮಟ್ಟಕ್ಕೆ ಏರಿಸಬೇಕಾಗಿದೆ ಅವನ್ನು ಕೆಳದರ್ಜೆಗೆ ಇಳಿಸದೆ.
ಪ್ರತಿಯೊಬ್ಬನಲ್ಲೂ ಸತ್ವ, ರಜೋ ಮತ್ತು ತಮೋಗುಣಗಳಿರುವಂತೆ, ಪ್ರತಿ ಮನುಷ್ಯನಲ್ಲೂ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಅಥವಾ ಶೂದ್ರ ಗುಣಗಳು ಸ್ವಲ್ಪ ಹೆಚ್ಚೂ ಕಡಿಮೆ ಅಂತರ್ಗತವಾಗಿವೆ...... ಹಾಗಾಗಿ ಸಹಜವಾಗಿ ಒಬ್ಬರನ್ನು ಒಂದು ವರ್ಗದಿಂದ ಮತ್ತೊಂದು ವರ್ಗಕ್ಕೆ ಬದಲಾಯಿಸುವ ಸಾಧ್ಯತೆಯಿದೆ. ಇಲ್ಲದಿದ್ದರೆ ವಿಶ್ವಾಮಿತ್ರನು ಹೇಗೆ ಬ್ರಾಹಣನಾಗುತ್ತಿದ್ದ ಮತ್ತು ಪರಶುರಾಮನು ಕ್ಷತ್ರಿಯನಾಗುತ್ತಿದ್ದ?
- ಸ್ವಾಮಿ ವಿವೇಕಾನಂದ
(ಜಾತಿ, ಸಂಸ್ಕೃತಿ ಮತ್ತು ಸಾಮಾಜವಾದ, ಪುಟ ೧೫, ೧೬ ಮತ್ತು ೧೯)
***
Close the Bible and open the Code of Manu
What a wretched thing The New Testament is besides Manu, what an evil odour hangs around it?
The Law Book of Manu is replete with noble values. All those things Christianity smothers with its bottomless vulgarity, Procreation, marriage, woman are treated here with reverence, with love and confidence
- Friedrich Nietzsche, German Philosopher
ಬೈಬಲನ್ನು ಮುಚ್ಚಿಟ್ಟು ಮನುವಿನ ಸೂತ್ರಗಳನ್ನು ತೆರೆಯಿರಿ
ಮನುವಿನ ಮುಂದೆ ಹೊಸ ಒಡಂಬಡಿಕೆ (New Testament) ಎಷ್ಟು ಕ್ಷುಲ್ಲಕವಾದುದು, ಅದು ಎಷ್ಟೊಂದು ದುರ್ನಾತ ಬೀರುವ ವಿಷಯಗಳಿಂದ ಆವರಿಸಲ್ಪಟ್ಟಿದೆಯಲ್ಲವೇ?
ಮನುವಿನ ನ್ಯಾಯ ಗ್ರಂಥವು ಉನ್ನತವಾದ ವಿಚಾರಗಳಿಂದ ತುಂಬಿ ತುಳುಕುತ್ತಿದೆ. ಕ್ರೈಸ್ತಮತದಲ್ಲಿ, ಸಂತಾನೋತ್ಪತ್ತಿ, ವಿವಾಹ ಮತ್ತು ಸ್ತ್ರೀಯರ ಕುರಿತ ಯಾವೆಲ್ಲಾ ವಿಷಯಗಳನ್ನು ಉಸಿರುಗಟ್ಟಿಸುವಂತಹ ತಳಬುಡವಿಲ್ಲದ ಅಶ್ಲೀಲತೆಯಿಂದ ಹೇಳಲಾಗಿದೆಯೋ ಅದನ್ನೇ ಪವಿತ್ರ ಭಾವನೆಯಿಂದ, ಪ್ರೇಮಪೂರ್ವಕವಾಗಿ ಆತ್ಮವಿಶ್ವಾಸದಿಂದ ಹೇಳಲಾಗಿದೆ.
- ಫ್ರೆಢರಿಕ್ ನೀಟ್ಷೆ, ಜರ್ಮನ್ ತತ್ತ್ವಜ್ಞಾನಿ
***
Manu says: creatures acquired the qualities of those that preceded them, so that the farther down its position in the series, the greater its qualities. Have we not here the whole of Darwinian evolution confirmed by geology and foreseen at least six thousand years ago?
- Maurice Maeterlinck
Belgian Scientist and Nobel Prizeman in literature
ಮನುವು, ಪ್ರಾಣಿಗಳು ತಮ್ಮ ಹಿಂದಿನ ತಲೆಮಾರಿನ ಗುಣಗಳನ್ನು ಪಡೆದುಕೊಂಡವು, ಆದ್ದರಿಂದ ಅದು ಸರಣಿಯಲ್ಲಿ ಎಷ್ಟು ಕೆಳಗಿರುತ್ತದೆಯೋ ಅದರ ಗುಣಗಳು ಅಷ್ಟು ಮಹತ್ತರವಾಗಿರುತ್ತವೆ. ನಮಗಿಲ್ಲಿ ಭೂಗರ್ಭ ಶಾಸ್ತ್ರದಿಂದ ಧೃಡಪಟ್ಟಿರುವ ಡಾರ್ವಿನ್ ಪ್ರತಿಪಾದಿಸಿದ ಸಂಪೂರ್ಣ ವಿಕಾಸವಾದವು ಕನಿಷ್ಠ ಪಕ್ಷ ಆರು ಸಾವಿರ ವರ್ಷಗಳ ಹಿಂದೆಯೇ ಮನಗಂಡದ್ದು ಕಂಡುಬರುತ್ತಿದೆಯಲ್ಲವೇ?
- ಮೌರಿಸ್ ಮೇಟರ್ಲಿಂಕ್
ಬೆಲ್ಜಿಯಂ ದೇಶದ ವಿಜ್ಞಾನಿ ಮತ್ತು ಸಾಹಿತ್ಯಕ ನೋಬಲ್ ಪಾರಿತೋಷಕ ಗ್ರಹೀತ
***
A right understanding and a right appreciation of the Laws of Manu demand a very high development in man…… the laws are remarkable in many respects. They contain much that the people of our times seek and cannot find, because they do not even know how to approach what they want……. Further the Laws of Manu, relating to marriage are full of significance and therefore they are completely distorted. In his teaching concerning marriage, Manu undoubtedly speaks of what happens or may not happen as a result of wrong union of people, who are different in their inner nature. Division into castes represents an ideal social organization in accordance with esoteric systems. It is a natural division, whether they recognize it or not, they are divided into four castes. There are Brahmins, there are Kshatriyas, there are Vaisyas and there are Sudras. No human legislation, no philosophical intricacies, no pseudo sciences and no form of terror can abolish the fact. And normal functioning and development of human societies are possible only if this fact is recognised and acted on.
- P.D. Ouspensky (A New Model of Universe, pp 505, 508 & 509)
ಮನಿವಿನ ಕಟ್ಟಳೆಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ಅವುಗಳನ್ನು ಸರಿಯಾಗಿ ವಿಶ್ಲೇಷಿಸಲು ಒಬ್ಬರು ಮಾನಸಿಕವಾಗಿ ಅತ್ಯಂತ ಅಭಿವೃದ್ಧಿ ಹೊಂದಿರಬೇಕು..... ಆ ನಿಯಮಗಳು ಹಲವಾರು ವಿಧದಲ್ಲಿ ಉತ್ಕೃಷ್ಟವಾಗಿವೆ. ಆ ನಿಯಮಗಳಲ್ಲಿ ನಮ್ಮ ಕಾಲದವರಿಗೆ ಬೇಕಾದಂತಹ ಬಹಳಷ್ಟು ವಿಷಯಗಳಿವೆ ಆದರೆ ಅವು ದೊರಕುವುದಿಲ್ಲ ಏಕಂದರೆ ನಮಗೆ ಬೇಕಾಗಿರುವುದರ ಕುರಿತು ಹೇಗೆ ಸಾಗಬೇಕು ಎನ್ನುವುದೂ ಸಹ ನಮಗೆ ತಿಳಿಯದು......... ಇನ್ನಷ್ಟು ಹೇಳಬೇಕೆಂದರೆ ಮದುವೆಗೆ ಸಂಬಂಧಿಸಿದಂತಹ ಮನುವಿನ ನಿಯಮಗಳು ಮಹತ್ವಪೂರ್ಣವಾಗಿರುವುದರಿಂದ ಅವು ಸಂಪೂರ್ಣವಾಗಿ ವಕ್ರೀಕರಣಕ್ಕೊಳಗಾಗಿವೆ. ಅಂತರ್ಗತವಾಗಿ ಭಿನ್ನ ಮನಸ್ತತ್ವವುಳ್ಳ ಜನಗಳು ತಪ್ಪಾಗಿ ಒಂದುಗೂಡುವುದರಿಂದ ಏನಾಗುತ್ತದೆ ಮತ್ತು ಯಾವ ವಿಧವಾಗಿ ಒಳಿತಾಗದೆನ್ನುವುದನ್ನು ಮನುವು ಅನುಮಾನಕ್ಕೆಡೆಯಿಲ್ಲದಂತೆ ಸ್ಪಷ್ಟವಾಗಿ ತನ್ನ ಬೋಧನೆಗಳಲ್ಲಿ ಹೇಳಿದ್ದಾನೆ. ನಿಗೂಢವಾದ ಆದರ್ಶ ಸಾಮಾಜಿಕ ವ್ಯವಸ್ಥೆಗೆ ಅನುಗುಣವಾಗಿ ಅದರಲ್ಲಿ ಜಾತಿಗಳ ವಿಭಜನೆಯಿದೆ. ಅದು ಅತ್ಯಂತ ಸಹಜವಾದ ವಿಭಜನೆಯಾಗಿದೆ, ಒಬ್ಬರು ಅದನ್ನು ಗುರುತಿಸಲಿ ಅಥವಾ ಗುರುತಿಸದಿರಲಿ ಸಮಾಜವು ನಾಲ್ಕು ವಿಧವಾದ ಜಾತಿಗಳಾಗಿ ವಿಭಜಿಸಲ್ಪಟ್ಟಿದೆ. ಅವುಗಳಲ್ಲಿ ಬ್ರಾಹ್ಮಣರಿದ್ದಾರೆ, ಕ್ಷತ್ರಿಯರಿದ್ದಾರೆ, ವೈಶ್ಯರಿದ್ದಾರೆ ಮತ್ತು ಶೂದ್ರರಿದ್ದಾರೆ. ಯಾವುದೇ ವಿಧವಾದ ಮಾನವ ರೂಪಿತ ಕಾನೂನುಗಳಾಗಲಿ, ತಾತ್ತ್ವಿಕ ಚಿಂತನಗೆಳಾಗಲಿ, ಕೃತಕ ವಿಜ್ಞಾನವಾಗಲಿ ಅಥವಾ ಯಾವುದೇ ವಿಧವಾದ ಭಯೋತ್ಪಾದನೆಯಾಗಲಿ ಈ ವಾಸ್ತವವನ್ನು ತೊಡೆದು ಹಾಕಲಾರದು. ಮತ್ತು ಮಾನವ ಸಮಾಜಗಳು ಸಹಜವಾಗಿ ಕಾರ್ಯಶೀಲವಾಗಿ ಅಭಿವೃದ್ಧಿಹೊಂದಲು ಸಾಧ್ಯವಾಗುವುದು ಈ ವಾಸ್ತವವನ್ನು ಗುರುತಿಸಿ ಅದನ್ನು ಅನುಷ್ಠಾನಕ್ಕೆ ತರುವುದರಿಂದಷ್ಟೆ.
- ಪಿ.ಡಿ. ಔಸ್ಪೆನ್ಸ್ಕಿ (ಪ್ರಪಂಚದ ನವೀನ ಮಾದರಿ, ಪುಟ ೫೦೫, ೫೦೮ & ೫೦೯)
*****
ಈ ಸರಣಿಯ ಹಿಂದಿನ ಲೇಖನ ಭಾಗ - ೧೬ ಮನುವಿನ ಧರ್ಮ: ಪ್ರಪಂಚ ಪಟದಲ್ಲಿ ಮನು ಪರಿಚ್ಛೇದ ೧.೩ ಓದಲು ಈ ಕೊಂಡಿಯನ್ನು ನೋಡಿ: https://sampada.net/node/48917
ಚಿತ್ರಗಳ ಕೃಪೆ: ಗೂಗಲ್
ಸರಣಿ: ಮನುವಿನ ಧರ್ಮ - ೧೭
Taxonomy Upgrade Extras: ಎಂ.ವಿ.ಆರ್ ಶಾಸ್ತ್ರಿ, ಮನುಧರ್ಮ, A New Model of Universe, Caste, Culture and Socialism
ಬ್ಲಾಗ್ ವರ್ಗಗಳು: ಮನುಸ್ಮೃತಿ, ಸ್ವಾಮಿ ವಿವೇಕಾನಂದ, ಫ್ರೆಢರಿಕ್ ನೀಟ್ಷೆ, ಮೌರಿಸ್ ಮೇಟರ್ಲಿಂಕ್, ಪಿ.ಡಿ. ಔಸ್ಪೆನ್ಸ್ಕಿ,
Comments
ಈ ಸರಣಿಯ ಮುಂದಿನ ಲೇಖನ ಭಾಗ -…
ಈ ಸರಣಿಯ ಮುಂದಿನ ಲೇಖನ ಭಾಗ - ೧೮ ಮನುವಿನ ಧರ್ಮ: ಪರಿಚ್ಛೇದ ೩ ಜೈಪೂರ್ ವಿಗ್ರಹ ವಿಜಯ ಓದಲು ಈ ಕೊಂಡಿಯನ್ನು ನೋಡಿ: https://sampada.net/blog/bhaaga-18-manauvaina-dharama-paraicachaeeda-3-jaaipaura-vaigaraha-vaijaya/17-10-2019/48954