ಮರೆತರೂ ನೀ, ಮರೆಯಲಿ ಹ್ಯಾಂಗ
ಬೇಸರವೆನಿಸುವುದೋ ಇನಿಯಾ
ನಿನ್ನಯ ದನಿಯನು ಕೇಳದ
ಬೆಳಗೇ ಬೇಸರವೆನಿಸುವುದೋ....
ಉರೋರ ದಿಬ್ಬದ
ಕಲ್ಲಿನ ಸುತ್ತಲು ಹಸಿರೆಲೆ
ಚಿಗುರಿಹುದೋ ಇನಿಯಾ
ಹಸಿರೆಲೆ ಉಸಿರಲಿ
ನಿನ್ ನಗು ಇರದಿರೆ
ದಿಬ್ಬದ ಹುಲ್ಲಿನ
ಹಾಸೇ ಬೇಸರವೆನಿಸುವುದೋ....
ಹಿತ್ತಿಲ ಮರೆಯ
ಗುಟ್ಟಿನ ಜಾಗದಿ ಮಲ್ಲಿಗೆ
ಹಬ್ಬಿಹುದೋ ಇನಿಯಾ
ಮಲ್ಲೆಯ ಮೂಡಿದ
ನನ್ನೀ ಅಂದವ
ನೋಡಲು ಬರದಿರೆ
ಮಲ್ಲೆಯ ಮೊಗವೇ ಬೇಸರವೆನಿಸುವುದೋ....
ಚಿಗುರಿದ ಮಾಮರದೊಳಗಿನ
ಗೂಡಲಿ ಕೋಗಿಲೆ
ಕುಳಿತಿಹುದೋ ಇನಿಯಾ
ಕೋಗಿಲೆಯಂತೆ
ನಾನೂ ಹಾಡುವೆ
ನೀ ಆಲಿಸ ಬರದಿರೆ
ಕೋಗಿಲೆ ದನಿಯೇ ಬೇಸರವೆನಿಸುವುದೋ....
ನನ್ನೊಡಲೊಳಗೆ
ಪ್ರತಿ ಕ್ಷಣ ನಿನ್ನ
ನೆನಪೇ ಕಾಡಿವೆಯೋ ಇನಿಯಾ
ಪ್ರತಿ ನೆನಪಿನ ಉಸಿರಿಗೂ
ಭರವಸೆ ಚಿಮ್ಮಿಸಿ ನನ್
ಜೀವದೊಳ್-ಜೀವವ ಬೆರೆಸದೆ ಹೋದರೆ
ಈ ಜೀವನವೇ ಬರಿ ಬೇಸರವೆನಿಸುವುದೋ ...
Rating
Comments
ಉ: ಮರೆತರೂ ನೀ, ಮರೆಯಲಿ ಹ್ಯಾಂಗಾ
In reply to ಉ: ಮರೆತರೂ ನೀ, ಮರೆಯಲಿ ಹ್ಯಾಂಗಾ by harshab
ಉ: ಮರೆತರೂ ನೀ, ಮರೆಯಲಿ ಹ್ಯಾಂಗಾ
In reply to ಉ: ಮರೆತರೂ ನೀ, ಮರೆಯಲಿ ಹ್ಯಾಂಗಾ by yogeshkrbhat1
ಉ: ಮರೆತರೂ ನೀ, ಮರೆಯಲಿ ಹ್ಯಾಂಗಾ
In reply to ಉ: ಮರೆತರೂ ನೀ, ಮರೆಯಲಿ ಹ್ಯಾಂಗಾ by harshab
ಉ: ಮರೆತರೂ ನೀ, ಮರೆಯಲಿ ಹ್ಯಾಂಗಾ
In reply to ಉ: ಮರೆತರೂ ನೀ, ಮರೆಯಲಿ ಹ್ಯಾಂಗಾ by yogeshkrbhat1
ಉ: ಮರೆತರೂ ನೀ, ಮರೆಯಲಿ ಹ್ಯಾಂಗಾ
ಉ: ಮರೆತರೂ ನೀ, ಮರೆಯಲಿ ಹ್ಯಾಂಗ
In reply to ಉ: ಮರೆತರೂ ನೀ, ಮರೆಯಲಿ ಹ್ಯಾಂಗ by ChinsShwetha
ಉ: ಮರೆತರೂ ನೀ, ಮರೆಯಲಿ ಹ್ಯಾಂಗ