ಮಾತು ಪಲ್ಲಟ - ೧
♫♫♫ಮಾತು ಪಲ್ಲಟ - ೧ ♫♫♫
♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣
ಈ ಹಾಡು ತೆಲುಗಿನ 'ತುಳಸಿ' ಚಿತ್ರದ್ದು. ಅದರ ಮಾತು ಪಲ್ಲಟ ಮಲೆಯಾಳದಲ್ಲೂ ಬಿಡುಗಡೆಯಾಗಿದೆ. ಈ ಕೆಳಗಿನ ಕೊಣ್ಡಿಗಳಲ್ಲಿ ಹಾಡುಗಳ ನೋಡಬಹುದು.
http://www.youtube.com/v/L87cNrAVWKU
http://www.youtube.com/v/nmQwsw8b7wU
ಸಂಗೀತ - ದೇವಿ ಶ್ರೀಪ್ರಸಾದ್♪ ,
ಸಾಹಿತ್ಯ - ತೆಲುಗಿನಲ್ಲಿ ಚಂದ್ರ ಬೋಸ್♪ ಮತ್ತು ಮಲೆಯಾಳದಲ್ಲಿ ರಾಜೀವ್ ಆಲುಂಗಲ್♪.
ಹಾಡುಗಾರರು : ತೆಲುಗಿನಲ್ಲಿ ವೇಣು♪ ಮತ್ತು ಸುನಿತಾ♪ , ಮಲೆಯಾಳದಲ್ಲಿ ಅಜಯ್♪ ಮತ್ತು ಮಂಜರಿ♪.
♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣
ಆದರೆ "ಬೆಣ್ಣೆಯಂಥ" ಹಾಡು ತನಿಗೆಯ್ಮೆಯಲ್ಲಿ ಒಡಲೊಡೆದುಕೊಣ್ಡಿರುವಂಥದ್ದು. ಮೇಲಿನ ಎರಡು ಹಾಡುಗಳ ಹಂಗು ಇದಕ್ಕಿಲ್ಲ.
♂ಬೆಣ್ಣೆಯಂಥ ಕೆನ್ನೆಗಳ ನೋಡುತ್ತ ಮನವು ತಾಳದಿದೆ, ಮುದ್ದು ನಲ್ಲೆ ಇನ್ನೂ ಒನ್ದ ತಾರೆಯಾ;
♀ಬೆಣ್ಣೆಯಂಥ ಮಾತುಗಳನ್ನಾಡುತ ಹಿನ್ದೆಯೇ ಸುತ್ತುವೆಯೇಕೆ, ಒನ್ದೇ ಒನ್ದು ಸಾಲದೇಕೆ ಓ ಪ್ರಿಯಾ;
♂ನಾಚುತ್ತ, ನಲಿಯುತ್ತ ; ಚೆಲ್ಲು ಚೆಲ್ಲು ನುಡಿಯುತ್ತ ಮನದಲ್ಲೊನ್ದು ಕಿಡಿಯನು ಮೂಡಿಸಿದೆ;
♀ಬಾಗುತ್ತ, ಬಳುಕುತ್ತ; ಚೆಲ್ಲು ಚೆಲ್ಲು ನುಡಿಯುತ್ತ ಮನದಲ್ಲೊನ್ದು ಬಯಕೆಯ ಕಾಡಿಸಿದೆ;
♂ನಿನದೊನ್ದು, ಕಿಱುನಗೆಯೇ - ಸಾಲದೇನು ದೊನ್ದಿಯ ಬೆಳಗಿಸಲ್ಕೆ;
♀ಕರಗಳೆನೆ, ಕಿಡಿಗಳನ್ನೇ - ಹಚ್ಚುತ ಮೆಯ್ ಮಱೆಯಿಸಲೇಕೆ;
♂ತುಟಿಗಳ ಈ ಸಕ್ಕರೆಯ ಸವಿಯದಲೆನ್ತು ತಾಳಲಿನ್ದು ನೋಡುತ್ತ ನೋಡುತ್ತಲೆ ನಿನ್ತು;
♀ಕಾಡುತ್ತ ಬೇಡುತ್ತ ಸುತ್ತಿ ಸುಳಿದು ಕೆಣಕುತ್ತಿರಲು ಹಿನ್ದಕ್ಕೂ ಮುನ್ದಕ್ಕೆನನಿನ್ದು;
♂ಅರಳಿಸುತ್ತ, ಕೆರಳಿಸುತ್ತ - ಇರುಳನಿತಕ್ಕೂ ನಾನ್ ನಿನಗಳವೆನ್ನುತ್ತ;
♀ಅಣಕಿಸುತ್ತ, ತಿಣುಕಿಸುತ್ತ - ಇರುವನಿತವನೆನ್ನೊಳು ನಿರುಕಿಸುತ್ತ;
♂ನಿನ್ನಿನ್ದ ನಾನಿನ್ದು ಕಣ್ಡುಕೊಣ್ಡ ಆನನ್ದವ ಮಱೆಯೆನು ನಾನ್ ಜೀವಿತವನಿತಕ್ಕೂ;
♀ನಾನೀಗ ನಿನ್ನಲ್ಲೇ ಸೇರಿಕೊಣ್ಡ ಭಾವವನ್ನೆನ್ದೂ ಮಱೆಯೊಲ್ಲೆ ಜೀವಿತವನಿತಕ್ಕೂ;
♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣