ಮಾತು - ಮೌನ

ಮಾತು - ಮೌನ

ಮೌನ
ಅಂದು ಮನವ ಕಾಡಿದ್ದು ಮೌನ. ಏನೂ ಹೇಳದೆ ಏನೆಲ್ಲ ಹೇಳಿಬಿಟ್ಟಿತ್ತು. ಮರೆತು ಎಂದಿನಂತೆ ದಿಶೆ ಬದಲಾಯಿಸಲು ಹೊರಟರೆ ಮತ್ತೆ ಎಳೆತಂದಿತ್ತು ತನ್ನೆಡೆಗೆ.
ಏನೋ ದುಗುಡ. ಅರ್ಥವಾಗದ್ದು ಎನಿಸುವಷ್ಟು ಒಮ್ಮೆಮ್ಮೆ. ಅರ್ಥವಾಯಿತು ಎಂದುಕೊಂಡಂತೆ ಏನೂ ಅರ್ಥವಾಗದು. ಅರ್ಥವಾದದ್ದೂ ತೇಲಿ ಹೋಯ್ತು ಕರಗಿ ಏನೂ ಉಳಿಯದಂತೆ!

ಏನೆಲ್ಲ ಹೇಳಿಹೋಗಿತ್ತು ಮೌನ! ಆದರೆ ಏನೂ ಬಿಡಿಸದೆ ಒಮ್ಮೆಲೇ ಎಲ್ಲವನ್ನೂ ಬಿಡಿಸುತ್ತ ಕಣ್ಣಮುಚ್ಚಾಲೆಯಾಡುತ್ತ ತುಡಿದಿತ್ತು ಮನದಲ್ಲಿ; ಹಿಡಿದು ತಡೆದಿತ್ತು ಮನದ ಹೊರಳು, ಎಲ್ಲೋ ಇದ್ದುಕೊಂಡು ಇನಿತು ದೂರದಲ್ಲೇ ಇರುವಂತೆ.
ಎಂದೂ ನಿಲ್ಲದ ಮನಸ್ಸಿಗೆ ಅಂದು stalemate.

ಎಲ್ಲಿದೆ ಹಾದಿ? ಎಲ್ಲಿರುವುದು ಮೌನದೊಳಿದ್ದ ಸಮನಾದ ಪ್ರಶ್ನೆ-ಉತ್ತರ - ಇವುಗಳಿಗೆ ಉತ್ತರ?

ನಾಲ್ಕು ಹೆಜ್ಜೆ ಮುಂದಕ್ಕೆ ಹೋದ ಹಾದಿ ಒಮ್ಮೆಲೇ ಹತ್ತು ಹಿಂದಕ್ಕೆ ಎಳೆ ತಂದಂತೆ ಭಾಸವಾಯಿತೋ, ಮನದಲ್ಲೇ ಮಾತು! ಎಲ್ಲಿ ಹೊರಟಿತ್ತು? ಎಲ್ಲಿಗೆ ಹೋಗುವುದಿತ್ತು?
ಮಾತನಾಡಿದ್ದೂ ಮೌನ. ಮತ್ತೆ ಕಾಡಿದ್ದು ಮೌನ.

ಮಾತು ಮನದಲ್ಲಿ, ಮನದ ಮಾತು ಮೌನ. ಮನದ ಮೌನಕ್ಕೆ ಮಾತು ಹೊರಟೂ ಹೊರಡದೆ ಹೊರಳಿ ಉಳಿಯಿತು, ಅದೂ ಮೌನ!

Rating
No votes yet

Comments