ಮಾನ್ಯ ಶ್ರೀ ಯಡಿಯೂರಪ್ಪನವರೇ....
- ತಮಗೆ ಸಿಕ್ಕ ಈ "ಅವಕಾಶ"ವನ್ನು ಹೀಗೆ ಬಳಸಿಕೊಳ್ಳುವಿರಾ? ,,,,
- ೧. ತಾವೇ ಸೃಷ್ಟಿಸಿಕೊಂಡ ಈ ಅವಕಾಶವನ್ನು ಒಂದು ಗೆಲುವು ಎಂದುಕೊಳ್ಳುವಿರ?
- ೨. ಯಾತಕ್ಕಾಗಿ ಈ ಹರ ಸಾಹಸಪಟ್ಟೆ ಎಂದು ತನ್ನನ್ನು ತಾನೇ ನೋಡಿಕೊಳ್ಳುವಿರ?
- ೩. ತನ್ನ ಜಾತಿಯ ಜನ ತನ್ನನ್ನು ಉಳಿಸಿದ್ದಾರೆಂದು ಹಿಗ್ಗದೇ ಭಾರತದ ಜನತಂತ್ರದಲ್ಲಿ ಇದು ಅಪಾಯಕಾರಿ ಎಂಬುದನ್ನು ಅರಿಯುವಿರ?ಮತ್ತು ಈ ಕಳಂಕದಿಂದ ಮುಕ್ತಿ ಪಡಯುವಿರಾ?
- ೪. ಜನತಂತ್ರ,ಪಕ್ಷ, ಸಿದ್ದಾಂತ ಎಲ್ಲವೂ ಸುಮ್ಮನೆ , ಮುಖ್ಯವಾಗಿ "ನಾನೇ" ಎಂಬ ಅನ್ನಿಸಿಕೆ ಸುಳ್ಳೆನಿಸುವಂತೆ ಕೆಲಸ ಮಾಡಬಲ್ಲಿರಾ?
- ೫. "ಅಭಿವೃದ್ದಿ ಮಂತ್ರ" ಜನತೆಗೂ, ಪ್ರಕೃತಿಗೂ ವಿರೋಧಿಯಾಗದಂತೆ ಸಮನ್ವಯ ಸಾಧಿಸಬೇಕು. ಅಭಿವೃದ್ದಿ ಕ್ಯಾನ್ಸರ್ ನಂತ ಬೆಳವಣಿಗೆ ಆಗಲೇಬಾರದು. ಇಲ್ಲಿ ಕೇವಲ ಕಂಟ್ರಾಕ್ಟುದಾರರ ಸಾಮ್ರಾಜ್ಯ ಆಗದಂತೆ ತಡೆಯುವಿರ?
- ೬. ಶಿವಮೋಗ್ಗದಲ್ಲಿ ವಿಪರೀತವಾಗಿ ಕಾಣುವ ,ಕೇಳುವ ಇವರ ಆಸ್ತಿ ವ್ಯವಹಾರಗಳು ಏನೆಂದು ಜನತೆಗೆ ಸ್ಪಷ್ಟಪಡಿಸಬೇಕು.ಭೂ ವ್ಯವಹಾರ, ನದಿಯ ಮರಳು, ಕಾಡಿನ ಕಡಿತಲೆ ಎಲ್ಲದರಲ್ಲೂ ನಿಮ್ಮ ಪುತ್ರರ ಕೈವಾಡವಿದೆಯೆಂದು ಹೇಳುತ್ತಾರೆ. ನಿಮ್ಮ ಉತ್ತರ ಹೇಳುವಿರ?
- ೭. ಪ್ರಾಮಾಣಿಕ, ಕ್ರಿಯಾಶೀಲ ಆಡಳಿತ ನಿಮ್ಮಿಂದ ಮೂಡಿ ರಾಜಕಾರಣವೆಂದರೆ ಕಸಾಯಿಖಾನೆಯಲ್ಲ ಎಂಬ ನಮ್ಮ ಈಗಿನ ಮನಸ್ಥಿತಿಯನ್ನು ಬದಲಿಸಬೇಕು.
೮. ರಾಜಕಾರಣದಲ್ಲಿ ನಿಮ್ಮ ಕೆಳಹಂತದ ನಾಯಕರು-ರಾಜಕಾರಣಿಗಳಿಗೆ ಒಂದು ಯೋಗ್ಯ ಮಾರ್ಗಸೂತ್ರವನ್ನು ಕೊಡಬಲ್ಲಿರ? ಅಧಿಕಾರವೆಂದರೆ ಅಲ್ಲಿ ಸರಳತೆ, ನಿಸ್ವಾರ್ಥ, ಕಳಕಳಿ ಮತ್ತು ಸ್ಪಸ್ಟ ಗುರಿಯನ್ನು ಹೊಂದಿದ ಪ್ರೀತಿಯಿರುವ ಸೇವಾ ಮನೋಭಾವ ಎಂಬ ಭಾರತೀಯತೆಯನ್ನು ಮೂಡಿಸಬಲ್ಲಿರ?
Rating
Comments
ಉ: ಮಾನ್ಯ ಶ್ರೀ ಯಡಿಯೂರಪ್ಪನವರೇ....
In reply to ಉ: ಮಾನ್ಯ ಶ್ರೀ ಯಡಿಯೂರಪ್ಪನವರೇ.... by ಆರ್ ಕೆ ದಿವಾಕರ
ಉ: ಮಾನ್ಯ ಶ್ರೀ ಯಡಿಯೂರಪ್ಪನವರೇ....