ಮಾನ್ಯ ಶ್ರೀ ಯಡಿಯೂರಪ್ಪನವರೇ....

ಮಾನ್ಯ ಶ್ರೀ ಯಡಿಯೂರಪ್ಪನವರೇ....

  1. ತಮಗೆ ಸಿಕ್ಕ ಈ "ಅವಕಾಶ"ವನ್ನು ಹೀಗೆ ಬಳಸಿಕೊಳ್ಳುವಿರಾ? ,,,,
  2. ೧. ತಾವೇ ಸೃಷ್ಟಿಸಿಕೊಂಡ ಈ ಅವಕಾಶವನ್ನು ಒಂದು ಗೆಲುವು ಎಂದುಕೊಳ್ಳುವಿರ?

  3. ೨. ಯಾತಕ್ಕಾಗಿ ಈ ಹರ ಸಾಹಸಪಟ್ಟೆ ಎಂದು ತನ್ನನ್ನು ತಾನೇ ನೋಡಿಕೊಳ್ಳುವಿರ?
  4. ೩. ತನ್ನ ಜಾತಿಯ ಜನ ತನ್ನನ್ನು ಉಳಿಸಿದ್ದಾರೆಂದು ಹಿಗ್ಗದೇ  ಭಾರತದ ಜನತಂತ್ರದಲ್ಲಿ ಇದು ಅಪಾಯಕಾರಿ ಎಂಬುದನ್ನು ಅರಿಯುವಿರ?ಮತ್ತು ಈ ಕಳಂಕದಿಂದ ಮುಕ್ತಿ ಪಡಯುವಿರಾ?

  5. ೪. ಜನತಂತ್ರ,ಪಕ್ಷ, ಸಿದ್ದಾಂತ ಎಲ್ಲವೂ ಸುಮ್ಮನೆ , ಮುಖ್ಯವಾಗಿ "ನಾನೇ" ಎಂಬ  ಅನ್ನಿಸಿಕೆ ಸುಳ್ಳೆನಿಸುವಂತೆ ಕೆಲಸ ಮಾಡಬಲ್ಲಿರಾ?
  6. ೫. "ಅಭಿವೃದ್ದಿ ಮಂತ್ರ" ಜನತೆಗೂ, ಪ್ರಕೃತಿಗೂ ವಿರೋಧಿಯಾಗದಂತೆ ಸಮನ್ವಯ ಸಾಧಿಸಬೇಕು. ಅಭಿವೃದ್ದಿ ಕ್ಯಾನ್ಸರ್ ನಂತ ಬೆಳವಣಿಗೆ ಆಗಲೇಬಾರದು. ಇಲ್ಲಿ ಕೇವಲ ಕಂಟ್ರಾಕ್ಟುದಾರರ ಸಾಮ್ರಾಜ್ಯ ಆಗದಂತೆ ತಡೆಯುವಿರ?

  7. ೬. ಶಿವಮೋಗ್ಗದಲ್ಲಿ ವಿಪರೀತವಾಗಿ ಕಾಣುವ ,ಕೇಳುವ ಇವರ ಆಸ್ತಿ  ವ್ಯವಹಾರಗಳು ಏನೆಂದು ಜನತೆಗೆ ಸ್ಪಷ್ಟಪಡಿಸಬೇಕು.ಭೂ ವ್ಯವಹಾರ, ನದಿಯ ಮರಳು, ಕಾಡಿನ ಕಡಿತಲೆ ಎಲ್ಲದರಲ್ಲೂ ನಿಮ್ಮ    ಪುತ್ರರ ಕೈವಾಡವಿದೆಯೆಂದು ಹೇಳುತ್ತಾರೆ. ನಿಮ್ಮ ಉತ್ತರ ಹೇಳುವಿರ?
  8.  
  9. ೭. ಪ್ರಾಮಾಣಿಕ, ಕ್ರಿಯಾಶೀಲ ಆಡಳಿತ ನಿಮ್ಮಿಂದ ಮೂಡಿ ರಾಜಕಾರಣವೆಂದರೆ ಕಸಾಯಿಖಾನೆಯಲ್ಲ ಎಂಬ ನಮ್ಮ ಈಗಿನ ಮನಸ್ಥಿತಿಯನ್ನು ಬದಲಿಸಬೇಕು.

೮. ರಾಜಕಾರಣದಲ್ಲಿ ನಿಮ್ಮ ಕೆಳಹಂತದ ನಾಯಕರು-ರಾಜಕಾರಣಿಗಳಿಗೆ ಒಂದು ಯೋಗ್ಯ ಮಾರ್ಗಸೂತ್ರವನ್ನು ಕೊಡಬಲ್ಲಿರ? ಅಧಿಕಾರವೆಂದರೆ ಅಲ್ಲಿ ಸರಳತೆ, ನಿಸ್ವಾರ್ಥ, ಕಳಕಳಿ ಮತ್ತು ಸ್ಪಸ್ಟ ಗುರಿಯನ್ನು ಹೊಂದಿದ ಪ್ರೀತಿಯಿರುವ ಸೇವಾ ಮನೋಭಾವ ಎಂಬ ಭಾರತೀಯತೆಯನ್ನು ಮೂಡಿಸಬಲ್ಲಿರ?

 

Rating
No votes yet

Comments