ಮುಂಜಾನೆ ಮೂಡಿದ ಹಾಗೆ...

ಮುಂಜಾನೆ ಮೂಡಿದ ಹಾಗೆ...

ಸಿನಿಮಾ: ಮುದುಡಿದ ತಾವರೆ ಅರಳಿತು
ಹಾಡಿರುವವರು : ಎಸ್ .ಪಿ.ಬಿ
ಇನಿ/ಸಂಗೀತ : ?
ಬರೆದಿರುವವರು: ಚಿ.ಉದಯಶಂಕರ್ (?) ಇರಬಹುದು

ಮುಂಜಾನೆ ಮೂಡಿದ ಹಾಗೆ
ತಂಗಾಳಿ ತೀಡಿದ ಹಾಗೆ
ಹೊಂಬಾಳೆ ತೂಗಿದ ಹಾಗೆ
ಕೆಂದಾವರೆ ನೀನು ನನಗೆ. ಆ. ಹಾ.. ಆಅ....|| ಪಲ್ಲವಿ||

ಹಸಿರಾದ ಪ್ರೀತಿಯ ಕಂಡು
ಉಸಿರಾಗ ಬಂದೆನು ನಾನು |೨|
ಸವಿಯಾದ ಸ್ನೇಹ ಮೋಹ  ಬಲು
ಬೆಳೆದು ನಿಂತಿರಲು ಓಡಿ ಬಂದೆ ಬಳಿಗೆ

ಹೊಸದಾದ ಆಸೆಯ ತೋರಿ
ಶಶಿಯಂತೆ ಬೆಳಗುವೆ ನೀನು
ಚೆಲುವಾದ ಬಾಳ ಕಡಲಿನಲಿ
ಒಲುಮೆ ದೋಣಿಯಲಿ ತೇಲು ನನ್ನ ಜೊತೆಗೆ

ಇಲ್ಲಿಂದ ಹಾಡನ್ನು ಕೇಳಿ ನಲಿವನ್ನು ಪಡೆಯಿರಿ  :)

Rating
No votes yet

Comments