ಮುಂಬರುವ ಸ೦ಪದ ಸ೦ಮಿಲನ

ಮುಂಬರುವ ಸ೦ಪದ ಸ೦ಮಿಲನ

 

ಸಂಪದ ಸಮ್ಮಿಲನ ಯಶಸ್ವಿಯಾಗಿ ನಡೆಯಿತೆಂದು ತಿಳಿದು ಬಹಳ ಸಂತೋಷವಾಯಿತು, ಸ್ವಲ್ಪ ಸಂಕಟವೂ ಆಯಿತು.  ;) (ನಾನಿರಲಿಲ್ಲವಲ್ಲ ಎಂದಷ್ಟೇ!)

 

ಮುಂದಿನ ಸಂಮಿಲನಗಳ ಆಯೋಜನೆ ಬಗ್ಗೆ ನನ್ನ ಕೆಲವು ಸಲಹೆಗಳು ಇಲ್ಲಿವೆಸಮಂಜಸವೆನಿಸಿದರೆ ದಯವಿಟ್ಟು ಅಳವಡಿಸಿಕೊಳ್ಳಿ:

 

. ಪೂರ್ವ ಯೋಜಿತ ದಿನಗಳು: ಸಮ್ಮಿಲನವು   ಪ್ರತಿ ವರ್ಷವೂ ಅದೇ ದಿನ ನಡೆಯುವಂತೆ  ಮೊದಲೇ ನಿರ್ಧರಿಸಿಬಿಟ್ಟರೆ ಭಾವಹಿಸುವವರ ಸಂಖ್ಯೆ ಹೆಚ್ಚಾಗಬಹುದು.

 

. ಯು. ಎಸ್ ನಲ್ಲಿ ಜುಲೈ, ಆಗಸ್ಟ್ ತಿಂಗಳುಗಳಲ್ಲಿ ಬೇಸಿಗೆ ರಜ. ಹೀಗಾಗಿ ನಾವುಗಳು ತಿಂಗಳುಗಳಲ್ಲಿ ಭಾರತಕ್ಕೆ ಬರುವ ಸಂಭವ ಹೆಚ್ಚುಹಾಗೆ ಬೇರೆ ದೇಶಗಳಿಂದ  ಬರುವವರ  ಅನುಕೂಲ ನೋಡಿ, ಭಾರತದಲ್ಲಿ/ಕರ್ನಾಟಕದಲ್ಲಿ ಇರುವವರಿಗೂ ಅನುಕೂಲವಾಗುವಂತೆ, ಆಗಸ್ಟ್ ೧೫ ಮುತಾದ ಸಾರ್ವಜನಿಕ ರಜಾದಿನವನ್ನು ಆರಿಸಿಕೊಂಡರೆ ಚೆನ್ನು.

 

. ವರ್ಷದಲ್ಲಿ ಸಮ್ಮಿಲನ ನಡೆದರೆ ಇನ್ನೂ ಚೆನ್ನಾಗಿರತ್ತೆ. ೨ನೆಯ ಸಮ್ಮಿಲನವನ್ನು  ನವೆಂಬರ್ , ಡಿಸೆಂಬರ್ ೨೫ ದಿನಗಳಲ್ಲಿ ಆಯೋಜಿಸಬಹುದು.

 

. ದಿನ ನಿಗದಿಯಾದಲ್ಲಿ ಸ್ಥಳ ನಿಗದಿ ಮಾಡುವುದೂ ಸುಲಭ. ಯಾವುದಾದರೂ (ಗೋಖಲೆ ಸಂಸ್ಥೆ, ಬಿ.ಪಿ.ವಾಡಿಯ, ಸುಚಿತ್ರ, ನನಗೆ ತಿಳಿದಿರುವಂತೆ) ಸಭಾಂಗಣವನ್ನು ಪ್ರತಿ ವರ್ಷವೂ ನಮಗಾಗಿ ಕಾದಿರಿಸಿ ಎಂದು ಕೇಳಬಹುದು.

 

. ಸ್ಥಳ ನಿಗದಿಯಾದಲ್ಲಿ, ಖರ್ಚಿನ ಬಗ್ಗೆ ನಿರ್ದಿಷ್ಟತೆ ಬರುತ್ತದೆ. ಆಗ ಸಮ್ಮಿಲನದಲ್ಲಿ ಭಾಗವಹಿಸುವವರೆಲ್ಲರೂ ಖರ್ಚನ್ನು ಹಂಚಿಕೊಳ್ಳಬಹುದುಯಾರಿಗೂ ಭಾರವೆನಿಸುವುದಿಲ್ಲ.

 

. ಸಮ್ಮಿಲನ ದಿನ ಎಂದು ಖಚಿತವಾಗಿ ತಿಳಿದಿರುವುದರಿಂದ ಸಂಪದಿಗರು ಮುಂಚಿತವಾಗಿಯೇ ( ತಿಂಗಳುತಮ್ಮ ಭಾವಹಿಸುವಿಕೆಯನ್ನು ಸಂಪದದಲ್ಲಿ ತಿಳಿಸಬಹುದುಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ರೂಪಿಸಲು ಸಹಾಯವಾಗುತ್ತದೆ.

 

ನೀವೆಲ್ಲ ಏನಂತೀರಿ?

 

ಶಾಮಲ

Rating
No votes yet

Comments