ಮುಂಬರುವ ಸ೦ಪದ ಸ೦ಮಿಲನ
ಸಂಪದ ಸಮ್ಮಿಲನ ಯಶಸ್ವಿಯಾಗಿ ನಡೆಯಿತೆಂದು ತಿಳಿದು ಬಹಳ ಸಂತೋಷವಾಯಿತು, ಸ್ವಲ್ಪ ಸಂಕಟವೂ ಆಯಿತು. ;) (ನಾನಿರಲಿಲ್ಲವಲ್ಲ ಎಂದಷ್ಟೇ!)
ಮುಂದಿನ ಸಂಮಿಲನಗಳ ಆಯೋಜನೆ ಬಗ್ಗೆ ನನ್ನ ಕೆಲವು ಸಲಹೆಗಳು ಇಲ್ಲಿವೆ. ಸಮಂಜಸವೆನಿಸಿದರೆ ದಯವಿಟ್ಟು ಅಳವಡಿಸಿಕೊಳ್ಳಿ:
೧. ಪೂರ್ವ ಯೋಜಿತ ದಿನಗಳು: ಸಮ್ಮಿಲನವು ಪ್ರತಿ ವರ್ಷವೂ ಅದೇ ದಿನ ನಡೆಯುವಂತೆ ಮೊದಲೇ ನಿರ್ಧರಿಸಿಬಿಟ್ಟರೆ ಭಾವಹಿಸುವವರ ಸಂಖ್ಯೆ ಹೆಚ್ಚಾಗಬಹುದು.
೨. ಯು. ಎಸ್ ನಲ್ಲಿ ಜುಲೈ, ಆಗಸ್ಟ್ ತಿಂಗಳುಗಳಲ್ಲಿ ಬೇಸಿಗೆ ರಜ. ಹೀಗಾಗಿ ನಾವುಗಳು ಆ ತಿಂಗಳುಗಳಲ್ಲಿ ಭಾರತಕ್ಕೆ ಬರುವ ಸಂಭವ ಹೆಚ್ಚು. ಹಾಗೆ ಬೇರೆ ದೇಶಗಳಿಂದ ಬರುವವರ ಅನುಕೂಲ ನೋಡಿ, ಭಾರತದಲ್ಲಿ/ಕರ್ನಾಟಕದಲ್ಲಿ ಇರುವವರಿಗೂ ಅನುಕೂಲವಾಗುವಂತೆ, ಆಗಸ್ಟ್ ೧೫ ಮುತಾದ ಸಾರ್ವಜನಿಕ ರಜಾದಿನವನ್ನು ಆರಿಸಿಕೊಂಡರೆ ಚೆನ್ನು.
೩. ವರ್ಷದಲ್ಲಿ ೨ ಸಮ್ಮಿಲನ ನಡೆದರೆ ಇನ್ನೂ ಚೆನ್ನಾಗಿರತ್ತೆ. ೨ನೆಯ ಸಮ್ಮಿಲನವನ್ನು ನವೆಂಬರ್ ೧, ಡಿಸೆಂಬರ್ ೨೫ ಈ ದಿನಗಳಲ್ಲಿ ಆಯೋಜಿಸಬಹುದು.
೪. ದಿನ ನಿಗದಿಯಾದಲ್ಲಿ ಸ್ಥಳ ನಿಗದಿ ಮಾಡುವುದೂ ಸುಲಭ. ಯಾವುದಾದರೂ (ಗೋಖಲೆ ಸಂಸ್ಥೆ, ಬಿ.ಪಿ.ವಾಡಿಯ, ಸುಚಿತ್ರ, ನನಗೆ ತಿಳಿದಿರುವಂತೆ) ಸಭಾಂಗಣವನ್ನು ಪ್ರತಿ ವರ್ಷವೂ ನಮಗಾಗಿ ಕಾದಿರಿಸಿ ಎಂದು ಕೇಳಬಹುದು.
೫. ಸ್ಥಳ ನಿಗದಿಯಾದಲ್ಲಿ, ಖರ್ಚಿನ ಬಗ್ಗೆ ನಿರ್ದಿಷ್ಟತೆ ಬರುತ್ತದೆ. ಆಗ ಸಮ್ಮಿಲನದಲ್ಲಿ ಭಾಗವಹಿಸುವವರೆಲ್ಲರೂ ಖರ್ಚನ್ನು ಹಂಚಿಕೊಳ್ಳಬಹುದು. ಯಾರಿಗೂ ಭಾರವೆನಿಸುವುದಿಲ್ಲ.
೬. ಸಮ್ಮಿಲನ ಈ ದಿನ ಎಂದು ಖಚಿತವಾಗಿ ತಿಳಿದಿರುವುದರಿಂದ ಸಂಪದಿಗರು ಮುಂಚಿತವಾಗಿಯೇ (೧ ತಿಂಗಳು) ತಮ್ಮ ಭಾವಹಿಸುವಿಕೆಯನ್ನು ಸಂಪದದಲ್ಲಿ ತಿಳಿಸಬಹುದು. ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ರೂಪಿಸಲು ಸಹಾಯವಾಗುತ್ತದೆ.
ನೀವೆಲ್ಲ ಏನಂತೀರಿ?
ಶಾಮಲ
Comments
ಉ: ಮುಂಬರುವ ಸ೦ಪದ ಸ೦ಮಿಲನ
In reply to ಉ: ಮುಂಬರುವ ಸ೦ಪದ ಸ೦ಮಿಲನ by ksraghavendranavada
ಉ: ಮುಂಬರುವ ಸ೦ಪದ ಸ೦ಮಿಲನ
ಉ: ಮುಂಬರುವ ಸ೦ಪದ ಸ೦ಮಿಲನ
In reply to ಉ: ಮುಂಬರುವ ಸ೦ಪದ ಸ೦ಮಿಲನ by asuhegde
ಉ: ಮುಂಬರುವ ಸ೦ಪದ ಸ೦ಮಿಲನ
In reply to ಉ: ಮುಂಬರುವ ಸ೦ಪದ ಸ೦ಮಿಲನ by gopinatha
ಉ: ಮುಂಬರುವ ಸ೦ಪದ ಸ೦ಮಿಲನ
In reply to ಉ: ಮುಂಬರುವ ಸ೦ಪದ ಸ೦ಮಿಲನ by gopinatha
ಉ: ಮುಂಬರುವ ಸ೦ಪದ ಸ೦ಮಿಲನ