ಮುಳಿಯ ತಿಮ್ಮಪ್ಪಯ್ಯ ಅವರ ’ಪಶ್ಚಾತ್ತಾಪ’ ಕಾದಂಬರಿ

ಮುಳಿಯ ತಿಮ್ಮಪ್ಪಯ್ಯ ಅವರ ’ಪಶ್ಚಾತ್ತಾಪ’ ಕಾದಂಬರಿ

ಮುಳಿಯ ತಿಮ್ಮಪ್ಪಯ್ಯ ಅವರ ಪಶ್ಚಾತ್ತಾಪ ಅಂತ ತಲೆಬರಹ ಕೊಟ್ಟಿದ್ದರೆ ಅಪಾರ್ಥ ಆಗ್ತಿತ್ತು !
ಒಂದು ಸೆಕಂಡ್ ಹ್ಯಾಂಡ್ ಅಂಗಡಿಯಲ್ಲಿ ಈ ಪುಸ್ತಕ - ೧೯೪೫ ನೇ ಇಸವಿಯದ್ದು ನೋಡಿದೆ . ದೊಡ್ಡ ಸಾಹಿತಿ ಎಂಬ ಹೆಸರು ಕೇಳಿದ್ದರಿಂದ ತಗೊಂಡು ಓದಿದೆ.
ಕಥೆಯನ್ನು ಫಾಲೋ ಮಾಡಲು ಅಗದಿದ್ದರೂ ವಾಕ್ಯರಚನೆ ,ಶಬ್ದರಚನೆಗಳನ್ನು ಗಮನಿಸುತ್ತ ಓದಿದೆ.
ಕಥೆ ಅಂಥ ಅದ್ಭುತವೇನೂ ಅಲ್ಲ ;
ಅನೇಕ ನನಗೆ ಗೊತ್ತಿಲ್ಲದ ಶಬ್ದಗಳೂ , ಕುತೂಹಲಕರ ಶಬ್ದಗಳೂ ಸಿಕ್ಕವು .
ಸಂಸ್ಕೃತ ಶಬ್ದಗಳು ಸಾಕಷ್ಟಿದ್ದರೂ ಕೆಲವು ಹೊಸ ( ನನಗೆ ಹೊಸವು) ಕನ್ನಡ ಶಬ್ದ ನೋಡಿದೆ.
ಬರೆದುಕೊಂಡೂ ಇದ್ದೆ . ಅದೇಕೋ ಏನು ಫಲ ಎಂದೆಸೆದು ಬಿಟ್ಟೆ .
ಈಗ ಹಾಗೆ ಮಾಡಬಾರದಿತ್ತು ಎನಿಸಿತು ! ಯಾರಿಗಾದರೂ ಉಪಯೋಗ ಆಗ್ತಿತ್ತೋ ಏನೋ ?
ಇರಲಿ. ಕೆಲವು ನೆನಪಿನಿಂದ ಬರೆವೆ .

ವಿಚಾರ - ಎಣಿಕೆ
ಕ್ರಿಯೆ - ಮಾಡಿಕೆ
ಕಾರ್ಯ -ಕೆಲಸ

ಅಲ್ಲಲ್ಲಿ ಗಾದೆ ಮಾತುಗಳಂತ ವಾಕ್ಯಗಳೂ ಇದ್ದವು .
ಬಲಗೈಯಲ್ಲಿ ದೋಸೆ , ಎಡಗೈಯಲ್ಲಿ ಕಾಸು . ( ಹೋಟೆಲ್ ಉದ್ಯಮದವರನ್ನು ಕುರಿತು)
ಕೂಸು ಹೇಸಿಗೆ ಮಾಡಿತು ಎಂದು ಕಾಲು ಕಡಿಯಲಾಗದು .

ಇದನ್ನು ಓದುತ್ತಿರುವಾಗ ಇನ್ನಷ್ಟು ಶಬ್ದಗಳು ಹೊಳೆದವು .

ವಿವಾಹ ವಿಚ್ಛೇದನ - ಮದುವೆ ಮುರುಗಡೆ
ಅಂತಾಕ್ಷರಿ - ಹಾಡಿನ ಬಂಡಿ
ಅಂತರ್ಮುಖಿ - ಒಳಮನಸ್ಸಿನವನು

ಓದಿದುದಕ್ಕೆ ಧನ್ಯವಾದಗಳು.

Rating
No votes yet

Comments