ಮೂಢ ಉವಾಚ - 159

ಮೂಢ ಉವಾಚ - 159

ದುರ್ಜನರ ಸಂಗವದು ರಾಗದ್ವೇಷಕೆ ದಾರಿ

ಒಳಕರೆಗೆ ಕಿವುಡಾಗಿ ಬೀಳುವರು ಜಾರಿ |

ಕುಜನರಿಂ ದೂರಾಗಿ ಸುಜನರೊಡನಾಡೆ

ಮೇಲೇರುವ ದಾರಿ ಕಂಡೀತು ಮೂಢ || .317


ದೇವನನು ಮೆಚ್ಚಿಸಲು ನಾಮ ಪಟ್ಟೆಗಳೇಕೆ

ರುದ್ರಾಕ್ಷಿ ಸರವೇಕೆ ಜಪಮಣಿಯು ಬೇಕೆ |

ತೋರಿಕೆಯ ನಡೆ ಸಲ್ಲ ನುಡಿಯು ಬೇಕಿಲ್ಲ

ಅಂತರಂಗದ ಭಾವ ಸಾಕೆಲ್ಲ ಮೂಢ || ..318

****************

-ಕ.ವೆಂ.ನಾಗರಾಜ್.

Rating
No votes yet

Comments